Home News Asia Cup ನಲ್ಲಿ ಭಾರತ ಬರೆದ ಹೊಸ ದಾಖಲೆ

Asia Cup ನಲ್ಲಿ ಭಾರತ ಬರೆದ ಹೊಸ ದಾಖಲೆ

125
Team India

ಭಾರತದ ಕ್ರಿಕೆಟ್ ತಂಡ ಏಷ್ಯಾಕಪ್‌ನಲ್ಲಿ ಹೊಸ ಇತಿಹಾಸ ರಚಿಸಿದೆ. ಭಾನುವಾರ ಸೂಪರ್ 4 ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಿದ್ದು, ಭಾರತ 6 ವಿಕೆಟ್‌ಗಳ ಜಯ ದಾಖಲಿಸಿತು. ಪಾಕಿಸ್ತಾನ ನೀಡಿದ 172 ರನ್ ಗಳ ಗುರಿಯನ್ನು ಭಾರತ 18.5 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ ತಲುಪಿತು.

ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 5 ವಿಕೆಟ್ ಕಳೆದುಕೊಂಡು 171 ರನ್ ಬಾರಿಸಿ ಭಾರತಕ್ಕೆ ಗುರಿ ನೀಡಿತು. ಭಾರತ ಆಕ್ರಮಣಕಾರಿಯಾಗಿ ಆರಂಭಿಸಿತು; ಅಭಿಷೇಕ್ ಮೊದಲ ಎಸೆತದಲ್ಲೇ ಸಿಕ್ಸರ್ ಹೊಡೆದು ಸ್ಫೋಟಕ ಆರಂಭ ನೀಡಿದರು. ಗಿಲ್ ಅವರೊಂದಿಗೆ ಉತ್ತಮ ಸಹಕಾರ ನೀಡಿದ್ದಾರೆ. ಭಾರತ 9.4 ಓವರ್‌ಗಳಲ್ಲಿ 105 ರನ್ ಸಿಗಿಸಿದೆ. ಫ್ಯಾನ್ಸ್ ಮುಂಚಿತವಾಗಿಯೇ ಜಯ ಭಾವಿಸಿದರು. ನಂತರ ಗಿಲ್ ಔಟ್ ಆಗಿ, ಸೂರ್ಯ ವಿಕೆಟ್ ಕಳೆದುಕೊಂಡರು. ಅಭಿಷೇಕ್ ಕೂಡ 13 ಓವರ್‌ಗಳಲ್ಲಿ ಪೆವಿಲಿಯನ್ ತಲುಪಿದರು. ಸಂಜು ಸ್ಯಾಮ್ಸನ್ ಮತ್ತು ತಿಲಕ್ ವರ್ಮಾ ತಂಡವನ್ನು ಗೆಲುವಿನ ಹಾದಿಗೆ ಕೊಂಡೊಯ್ದರು. ಕೊನೆಗೆ ತಿಲಕ್ ವರ್ಮಾ ಸಿಕ್ಸರ್ ಮತ್ತು ಬೌಂಡರಿ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು.

ಈ ಪಂದ್ಯದಿಂದ ಭಾರತ ಪಾಕಿಸ್ತಾನದ ವಿರುದ್ಧ ಏಷ್ಯಾಕಪ್‌ನಲ್ಲಿ ಅತ್ಯಂತ ದೊಡ್ಡ ಮೊತ್ತದ ಸ್ಕೋರ್ ಚೇಸ್ ದಾಖಲೆಯನ್ನು ನಿರ್ಮಿಸಿದೆ. ಹಿಂದಿನ ದಾಖಲೆ 2022 ರಲ್ಲಿ 148 ರನ್ಸ್ ಚೇಸ್ ಆಗಿತ್ತು. ಇದೊಂದಿಗೆ ಟೀಮ್ ಇಂಡಿಯಾ ಪಾಕಿಸ್ತಾನ ವಿರುದ್ಧ ಏಷ್ಯಾಕಪ್‌ನಲ್ಲಿ ಎಂಟನೇ ಬಾರಿ ಜಯ ಸಾಧಿಸಿದೆ.

ಭಾರತದ ಮುಂದಿನ ಪಂದ್ಯ ಬಾಂಗ್ಲಾದೇಶ ತಂಡದ ವಿರುದ್ಧ ಬುಧವಾರ ನಡೆಯಲಿದೆ. ಸೂಪರ್ 4 ರಲ್ಲಿ ಉತ್ತಮ ಎರಡು ತಂಡಗಳು ಫೈನಲ್ ಪ್ರವೇಶ ಪಡೆಯಲಿವೆ. ಸೆಪ್ಟೆಂಬರ್ 28 ರಂದು ಫೈನಲ್ ಪಂದ್ಯ ನಡೆಯಲಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page