Washington: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ 14 ದೇಶಗಳ ಮೇಲೆ ಹೊಸ ಆಮದು ಸುಂಕ (tariffs) ವಿಧಿಸಿದೆ. ಆದರೆ ಈ ಪಟ್ಟಿ ಯಲ್ಲಿ ಭಾರತವಿಲ್ಲ. ಈ ಮೂಲಕ ಭಾರತ ತಾತ್ಕಾಲಿಕವಾಗಿ ಸುಂಕದಿಂದ ಪಾರಾಗಿದೆ.
ಸುಂಕ ವಿಧಿಸಿದ ದೇಶಗಳು: ಜಪಾನ್, ಸೌತ್ ಕೊರಿಯಾ, ಬಾಂಗ್ಲಾದೇಶ, ಮಲೇಷ್ಯಾ, ಇಂಡೋನೇಷ್ಯಾ, ಥಾಯ್ಲೆಂಡ್, ಮಯನ್ಮಾರ್, ಲಾವೋಸ್, ಸರ್ಬಿಯಾ, ಟುನಿಶಿಯಾ, ಕಜಕಸ್ತಾನ್, ಬೋಸ್ನಿಯಾ ಹರ್ಜೆಗೊವಿನಾ, ಕಾಂಬೋಡಿಯಾ, ಸೌತ್ ಆಫ್ರಿಕಾ ಇಂತಹ 14 ದೇಶಗಳ ಮೇಲೆ ಈ ಸುಂಕ ಹೇರಲಾಗಿದೆ. ಇದು ಆಗಸ್ಟ್ 1ರಿಂದ ಜಾರಿಗೆ ಬರುತ್ತದೆ.
ಟ್ರಂಪ್ ಅವರು ತಮ್ಮ ಟ್ರೂತ್ ಸೋಷಿಯಲ್ ಖಾತೆಯಲ್ಲಿ, “ನಾವು ಭಾರತ ಸೇರಿದಂತೆ ಹಲವಾರು ದೇಶಗಳೊಂದಿಗೆ ವ್ಯಾಪಾರ ಒಪ್ಪಂದಕ್ಕೆ ಹತ್ತಿರವಾಗಿದ್ದೇವೆ. ಒಪ್ಪಂದ ಮಾಡಿಕೊಳ್ಳದವರ ಮೇಲೆ ಮಾತ್ರ ಟ್ಯಾರಿಫ್ ವಿಧಿಸುತ್ತೇವೆ” ಎಂದಿದ್ದಾರೆ.
ಭಾರತ ಹಾಗೂ ಅಮೆರಿಕ ನಡುವೆ ಕಳೆದ ಕೆಲವು ವಾರಗಳಿಂದ ವ್ಯಾಪಾರ ಒಪ್ಪಂದದ ಚರ್ಚೆಗಳು ನಡೆಯುತ್ತಿವೆ. ಭಾರತದಿಂದ ನಿಯೋಗವೊಂದು ಅಮೆರಿಕಕ್ಕೆ ಭೇಟಿ ನೀಡಿದ್ದು, ಒಪ್ಪಂದ ಅಂತಿಮ ಹಂತದಲ್ಲಿದೆ ಎಂಬ ಮಾಹಿತಿ ಲಭಿಸಿದೆ.
ಅಮೆರಿಕ ತನ್ನ ದೇಶದ ಆರ್ಥಿಕ ಹಿತಕ್ಕಾಗಿ ಆಮದು ಸುಂಕ ಹಾಕುತ್ತಿದೆ. ಆದರೆ ಭಾರತ, ಅಮೆರಿಕದೊಂದಿಗೆ ಒಪ್ಪಂದ ಮಾತುಕತೆಯಲ್ಲಿ ಮುಂದಿರುವುದರಿಂದ ಸದ್ಯಕ್ಕೆ ಈ ಸುಂಕದಿಂದ ತಪ್ಪಿಸಿಕೊಂಡಿದೆ.







