back to top
26.3 C
Bengaluru
Friday, July 18, 2025
HomeBusinessWTO ದಲ್ಲಿ ಭಾರತ-ಅಮೆರಿಕ ವ್ಯಾಪಾರ ಹೋರಾಟ

WTO ದಲ್ಲಿ ಭಾರತ-ಅಮೆರಿಕ ವ್ಯಾಪಾರ ಹೋರಾಟ

- Advertisement -
- Advertisement -


ಭಾರತ WTO (World Trade Organization) ಮೂಲಕ ಅಮೆರಿಕನಿಗೆ ನೋಟೀಸ್ ಕೊಟ್ಟಿದ್ದು, ಅಮೆರಿಕವು ಭಾರತದಿಂದ ಬಂದ ಉಕ್ಕು ಮತ್ತು ಅಲೂಮಿನಿಯಂ ವಸ್ತುಗಳ ಮೇಲೆ ಹೆಚ್ಚಿದ ಆಮದು ಸುಂಕಕ್ಕೆ ತಾನೂ ಪ್ರತಿಸುಂಕ ವಿಧಿಸುವ ಸಾಧ್ಯತೆ ಇದೆ.

ಮೇ 9ರಂದು ಭಾರತ ನೀಡಿದ ನೋಟೀಸ್ ಅನ್ನು ಅಮೆರಿಕ ನಿರ್ಲಕ್ಷ್ಯವನ್ನಾಗಿಸಿದೆ ಮತ್ತು ಯಾವುದೇ ಚರ್ಚೆಗೆ ಸಿದ್ದವಾಗಿಲ್ಲ. ಅಮೆರಿಕ ದೇಶೀಯ ಉದ್ಯಮಗಳನ್ನು ರಕ್ಷಿಸುವುದೇ ಉದ್ದೇಶ ಎಂದು ಹೇಳಿ, ಭಾರತದ ಪ್ರಶ್ನೆಗಳನ್ನು ತಿರಸ್ಕರಿಸಿದೆ.

ಅಮೆರಿಕದ almonds, walnuts ಮತ್ತು ಇತರ dried fruit ಗಳಿಗೆ ನೀಡುವ ರಿಯಾಯಿತಿಗಳನ್ನು ಭಾರತ ಹಿಂಪಡೆಯಬಹುದು. ಜೊತೆಗೆ ಅಮೆರಿಕದಿಂದ ಬರುವ ಲೋಹಗಳಿಗೆ ಹೆಚ್ಚಿನ ಆಮದು ಸುಂಕವನ್ನು ವಿಧಿಸುವ ಸಾಧ್ಯತೆ ಇದೆ.

ಫೆಬ್ರವರಿ 10ರಂದು ಅಮೆರಿಕ ಸರ್ಕಾರವು 25% ಸುಂಕ ವಿಧಿಸಲು ನಿರ್ಧರಿಸಿತ್ತು, ಆದರೆ ಮೇ 30ರಂದು ಅದನ್ನು 50%ಕ್ಕೆ ಹೆಚ್ಚಿಸುವ ನಿರ್ಣಯ ಮಾಡಿದೆ. ಇದನ್ನು ರಾಷ್ಟ್ರ ಭದ್ರತೆಗಾಗಿ ಮಾಡಲಾಗಿದೆ ಎಂದು ಹೇಳುತ್ತಿದೆ.

ಭಾರತವು ತನ್ನ ಲೋಹ ವಸ್ತುಗಳಿಗೆ ಪ್ರತಿಸುಂಕ ವಿಧಿಸುವ ಅಧಿಸೂಚನೆಯನ್ನು ಡಬ್ಲ್ಯುಟಿಒಗೆ ನೀಡಿದ್ದು, ಅಮೆರಿಕ ಈ ಕ್ರಮವನ್ನು ನಿರಾಕರಿಸಿದೆ ಮತ್ತು ದೇಶಾಂತರ ವ್ಯಾಪಾರದ ನಿಯಮಗಳಿಗೆ ವಿರುದ್ಧವೆಂದು ಹೇಳಿದ್ದಾರೆ.

ಭಾರತವು ಅಮೆರಿಕದ ಕೆಲ ವಸ್ತುಗಳ ಮೇಲೆ ಸುಂಕ ಹೆಚ್ಚಿಸುವ ಸಾಧ್ಯತೆ ಇದೆ. ಈ ವ್ಯಾಪಾರ ಹೋರಾಟ ಇನ್ನೂ ಮುಂದುವರಿಯಬಹುದೆಂದು ವರದಿಗಳು ತಿಳಿಸುತ್ತಿವೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page