ಭಾರತ ಮತ್ತು ಆಸ್ಟ್ರೇಲಿಯಾ (India vs Australia) ನಡುವಿನ 4ನೇ ಟೆಸ್ಟ್ ಪಂದ್ಯವು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ (Melbourne Cricket Ground) ನಡೆಯಿತು. ಬಾರ್ಡರ್ ಗವಾಸ್ಕರ್ ಟ್ರೋಫಿ ಭಾಗವಾಗಿ ನಡೆದ ಈ ಪಂದ್ಯದಲ್ಲಿ ಭಾರತ 184 ರನ್ ಗಳಿಂದ ಹೀನಾಯ ಸೋಲು ಅನುಭವಿಸಿದೆ.
ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಸ್ಟ್ರೇಲಿಯಾ 2-1 ಅಂತರದಿಂದ ಮುನ್ನಡೆ ಸಾಧಿಸಿದೆ. ಮೊದಲ ಇನಿಂಗ್ಸ್ ನಲ್ಲಿ 340 ರನ್ ಗಳ ಗುರಿ ಬೆನ್ನಟ್ಟಿದ ಭಾರತ, ಆರಂಭದಲ್ಲಿ ಕಷ್ಟದಲ್ಲಿಯೇ ಇತ್ತು. ನಾಯಕ ರೋಹಿತ್ ಶರ್ಮಾ (9), ವಿರಾಟ್ ಕೊಹ್ಲಿ (5), ಮತ್ತು ಕೆಎಲ್ ರಾಹುಲ್ (0) ವಿಫಲರಾದರು.
ಭೋಜನ ವಿರಾಮದ ವೇಳೆಗೆ ಭಾರತ 33 ರನ್ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು. ಆದಾಗ್ಯೂ, ಯಶಸ್ವಿ ಜೈಶ್ವಾಲ್ ಮತ್ತು ರಿಷಭ್ ಪಂತ್ ಉತ್ತಮ ಬ್ಯಾಟಿಂಗ್ ಪ್ರದರ್ಶನದಿಂದ ಆಸ್ಟ್ರೇಲಿಯಾಗೆ ಒಂದೂ ವಿಕೆಟ್ ನೀಡದಂತೆ ಹೋರಾಡಿದರು.
ಆದರೆ, ಮೂರನೇ ಸೆಷನ್ ಪ್ರಾರಂಭವಾಗುತ್ತಿದ್ದಂತೆ ರಿಷಭ್ ಪಂತ್ ಕ್ಯಾಚೌಟ್ ಆಗಿ ಪೆವಿಲಿಯನ್ ಸೇರಿದರು. ನಂತರ, ತಂಡವು 155 ರನ್ ಗಳಲ್ಲಿ ಆಲೌಟ್ ಆಯಿತು. ಈ ಸೋಲಿನಿಂದ, ಟೀಂ ಇಂಡಿಯಾ WTC ಫೈನಲ್ ಪ್ರವೇಶಕ್ಕೆ ಇತರ ತಂಡಗಳ ಫಲಿತಾಂಶಗಳ ಮೇಲೆ ಅವಲಂಬಿತವಾಗಿದೆ.