ಇಂದು (ಜುಲೈ 23) ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಾಲ್ಕನೇ ಟೆಸ್ಟ್ ಪಂದ್ಯವನ್ನು (India vs England 4th Test) ಆಡಲಿವೆ. ಐದು ಪಂದ್ಯಗಳ ಸರಣಿಯಲ್ಲಿ ಭಾರತ ಈಗಾಗಲೇ 1-2ರಿಂದ ಹಿನ್ನಡೆಯಲ್ಲಿದೆ. ಈ ಪಂದ್ಯ ಗೆಲ್ಲದೇ ಹೋಗಿದ್ರೆ, ಭಾರತ ಸರಣಿಯನ್ನು ಕಳೆದುಕೊಳ್ಳಲಿದೆ. ಆದರೆ ಗೆದ್ದರೆ, ಸರಣಿ 2-2ರಿಂದ ಸಮಬಲವಾಗುತ್ತದೆ ಮತ್ತು ಕೊನೆಯ ಪಂದ್ಯ ನಿರ್ಣಾಯಕವಾಗಲಿದೆ.
ಭಾರತ ಈ ಮೈದಾನದಲ್ಲಿ ಇಂದಿನವರೆಗೆ 9 ಟೆಸ್ಟ್‌ಗಳನ್ನು ಆಡಿದ್ದು, ಯಾವದ್ದನ್ನೂ ಗೆದ್ದಿಲ್ಲ. 4 ಪಂದ್ಯಗಳಲ್ಲಿ ಸೋತು, 5 ಪಂದ್ಯಗಳು ಡ್ರಾ ಆಗಿವೆ. ಈ ಅಂಕಿಅಂಶಗಳು ಭಾರತಕ್ಕೆ ಇದು ಕಠಿಣ ಮಾರುಕಟ್ಟೆ ಎನ್ನುವುದನ್ನು ತೋರಿಸುತ್ತವೆ.
ಟೀಮ್ ಇಂಡಿಯಾ ಎದುರಿಸುತ್ತಿರುವ ಮತ್ತೊಂದು ದೊಡ್ಡ ಸಮಸ್ಯೆ ಅಂದರೆ ಆಟಗಾರರ ಗಾಯ. ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ, ವೇಗಿ ಆಕಾಶ್ ದೀಪ್ ಮತ್ತು ಅರ್ಷದೀಪ್ ಸಿಂಗ್ ಗಾಯದಿಂದಾಗಿ ಲಭ್ಯವಿಲ್ಲ. ಇವರಿಗೆ ಬದಲಿಯಾಗಿ ಅನ್ಶುಲ್ ಕಾಂಬೋಜ್ ಅವರನ್ನು ಕವರ್ ಪ್ಲೇಯರ್ ಆಗಿ ಸೇರಿಸಲಾಗಿದೆ. ಸಾಯಿ ಸುದರ್ಶನ್ ಮತ್ತು ಪ್ರಸಿದ್ಧ್ ಕೃಷ್ಣ ಕೂಡ ಅವಕಾಶ ಪಡೆಯಬಹುದೆಂಬ ನಿರೀಕ್ಷೆ ಇದೆ.
ಇದುವರೆಗೆ ಇಬ್ಬರೂ ತಂಡಗಳು 139 ಟೆಸ್ಟ್‌ಗಳಲ್ಲಿ ಮುಖಾಮುಖಿಯಾಗಿದ್ದು, ಇಂಗ್ಲೆಂಡ್ 53 ಪಂದ್ಯಗಳನ್ನು ಮತ್ತು ಭಾರತ 36 ಪಂದ್ಯಗಳನ್ನು ಗೆದ್ದಿದೆ. 50 ಪಂದ್ಯಗಳು ಡ್ರಾ ಆಗಿವೆ.
ವೇಳಾಪಟ್ಟಿ: ನಾಲ್ಕನೇ ಟೆಸ್ಟ್ ಪಂದ್ಯ ಜುಲೈ 23ರ ಬುಧವಾರ ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದೆ.