Search
WhatsApp alerts

Home › Cricket

India Vs South Africa ಕ್ರಿಕೆಟ್ ಟೆಸ್ಟ್ ಪಂದ್ಯಾವಳಿ – Day 3

administrator · Published · Updated

India Vs South Africa Cricket Test Series Day 3

Centurion, South Africa : ದಕ್ಷಿಣ ಆಫ್ರಿಕಾದ Centurion ನ SuperSport Park ನಲ್ಲಿ ಮಂಗಳವಾರ Pitch ವೇಗಿಗಳಿಗೆ ಸಹಕರಿಸುತ್ತಿದ್ದುದರಿಂದ ಒಂದೇ ದಿನ 18 ವಿಕೆಟ್ ಗಳು ಪತನಗೊಂಡವು. ಸೋಮವಾರ ಮಳೆಯಿಂದ 2ನೇ ದಿನಾದಾಟ ರದ್ದುಗೊಂಡ ನಂತರ 3ನೇ ದಿನ ಬ್ಯಾಟಿಂಗ್ ಗೆ ಬಂದ ಭಾರತ, South Africa ದ ವೇಗದ ಬೌಲಿಂಗ್ ಗೆ ಬಹು ಬೇಗ ವಿಕೆಟ್ ಗಳನ್ನು ಕಳೆದುಕೊಂಡಿತು. ದಿನದ ಆರಂಭದಲ್ಲೇ ವೇಗಿ Kagiso Rabada ಬೌಲಿಂಗ್ ನಲ್ಲಿ 123 ರನ್ ಗಳಿಸಿದ್ದ Vice Captain KL Rahul ವಿಕೆಟ್ ಕೀಪರ್ Quinton de Kock ಗೆ ಕ್ಯಾಚ್ ನೀಡಿ ಪೆವಿಲಿಯನ್ ಹಾದಿ ಹಿಡಿದರು. ನಂತರ Ajinkya Rahane 48 ರನ್ ಗಳಿಗೆ Lungi Ngidi ಗೆ ವಿಕೆಟ್ ಒಪ್ಪಿಸಿದ್ದರು. ಬಳಿಕ ಭಾರತದ ಯಾವ ಬ್ಯಾಟ್ಸಮನ್ ಗಳೂ ಹೆಚ್ಚು ಹೊತ್ತು ಕ್ರೀಸ್ ನಲ್ಲಿ ನಿಲ್ಲದ ಪರಿಣಾಮ 105.3 ಓವರ್ ಗಳಲ್ಲಿ 327 ರನ್ ಗೆ ಆಲ್ ಔಟ್ ಆಯಿತು. ದಕ್ಷಿಣ ಆಫ್ರಿಕಾ ಪರ Lungi Ngidi 6 ವಿಕೆಟ್ ಪಡೆದರು.

ದಕ್ಷಿಣ ಆಫ್ರಿಕಾ ತಂಡದ ಬ್ಯಾಟಿಂಗ್ ನ ಮೊದಲ ಓವರ್‌ ನ ಐದನೇ ಎಸೆತದಲ್ಲಿ Captain Dean Elgar ರ ವಿಕೆಟ್ ಗಳಿಸಿ Jasprit Bumrah ಸಂಭ್ರಮಿಸಿದರು. ನಂತರ Mohammed Shami, Markram ಮತ್ತು Keegan Petersen ವಿಕೆಟ್‌ಗಳನ್ನು ಕಿತ್ತರು. van der Dussen ವಿಕೆಟ್ ಅನ್ನು Siraj ಗಳಿಸಿದರು. ಬೇಗನೆ ಕುಸಿಯುವ ಆತಂಕ ಎದುರಿಸಿದ ದಕ್ಷಿಣ ಆಫ್ರಿಕಾಗೆ Bavuma ಮತ್ತು de Kock ಆಸರೆಯಾದರು. ಅಂತಿಮವಾಗಿ 62.3 ಓವರ್ ಗಳಲ್ಲಿ ಆಲ್ ಔಟ್ ಆದ ದಕ್ಷಿಣ ಆಫ್ರಿಕಾ 197 ರನ್ ಗಳಿಸಿತ್ತು. ಭಾರತದ ಪರ ಮೊಹಮ್ಮದ್ ಶಮಿ 5 ವಿಕೆಟ್ ಪಡೆದು ಮಿಂಚಿದರು.

2ನೇ ಇನ್ನಿಂಗ್ಸ್ ಆರಂಭಿಸಿದ ಭಾರತ Mayank Agarwal ವಿಕೆಟ್ ಕಳೆದುಕೊಂಡು 16 ರನ್ ಗಳಿಸಿದೆ. KL Rahul ಮತ್ತು Shardul Thakur ಕ್ರೀಸ್ ನಲ್ಲಿದ್ದಾರೆ.


Image : Indian Cricket Team

Read next

ಹೃದಯದ ಆರೋಗ್ಯ ಕಾಪಾಡಿ: ವಿಶ್ವ ಹೃದಯ ದಿನದಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೇತನ್ ಕಿವಿಮಾತು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ

ಹಿರಿಯ ನಾಗರಿಕರ ಕುಂದುಕೊರತೆ ಪರಿಹಾರಕ್ಕೆ ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ಕೆಎಸ್‌ಆರ್‌ಟಿಸಿಯಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

You cannot copy content of this page