Dubai: ಚಾಂಪಿಯನ್ಸ್ ಟ್ರೋಫಿ (Champions Trophy) ಫೈನಲ್ ಪಂದ್ಯದ ಕ್ಷಣವೂ ಕುತೂಹಲ ಹೆಚ್ಚಿಸಿತು. ಟೀಂ ಇಂಡಿಯಾ ಅಭಿಮಾನಿಗಳಿಗೆ ಈ ಪಂದ್ಯ ತೀವ್ರ ಆತಂಕ ತಂದಿತ್ತಾದರೂ, ಕೊನೆಗೆ ಭಾರತ ಅದ್ಭುತ ಗೆಲುವು ದಾಖಲಿಸಿತು.
ರೋಹಿತ್ ಶರ್ಮಾ ಭರ್ಜರಿ ಆರಂಭ ನೀಡಿದರೂ, ದಿಢೀರ್ ವಿಕೆಟ್ ಪತನ ಪಂದ್ಯದ ಗತಿಯನ್ನು ಬದಲಿಸಿತು. ಆದರೆ, ಟೀಂ ಇಂಡಿಯಾ ಸತತ ಹೋರಾಟ ನಡೆಸಿ ಗೆಲುವು ಸಾಧಿಸಿತು. ಮೊದಲಿಗೆ ರೋಹಿತ್, ಬಳಿಕ ಶ್ರೇಯಸ್ ಅಯ್ಯರ್, ಹಾಗು ಕೊನೆಯಲ್ಲಿ ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಮಹತ್ವದ ಆಟ ಆಡಿದರು. ಅವರ ಸಹಕಾರದಿಂದ ಭಾರತ 4 ವಿಕೆಟ್ ಗೆಲುವು ದಾಖಲಿಸಿ ಚಾಂಪಿಯನ್ಸ್ ಟ್ರೋಫಿ ಜಯಗಳಿಸಿತು.
2024ರಲ್ಲಿ ಐಸಿಸಿ ಟಿ20 ಟ್ರೋಫಿ ಗೆದ್ದ ಭಾರತ, ಈಗ 2025ರಲ್ಲಿ ಚಾಂಪಿಯನ್ಸ್ ಟ್ರೋಫಿ ಜಯಿಸಿದ ಮೂಲಕ ಸತತ 2 ಐಸಿಸಿ ಟ್ರೋಫಿ ಗೆದ್ದ ದಾಖಲೆಯನ್ನು ಮಾಡಿದೆ.