back to top
28.2 C
Bengaluru
Saturday, August 30, 2025
HomeNewsHigh Jump ನಲ್ಲಿ ಇತಿಹಾಸ ಬರೆದ ಭಾರತೀಯ ಹುಡುಗಿ!

High Jump ನಲ್ಲಿ ಇತಿಹಾಸ ಬರೆದ ಭಾರತೀಯ ಹುಡುಗಿ!

- Advertisement -
- Advertisement -

Bengaluru: 2025ರ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ (Asian Athletics Championships) ಭಾರತದ ಆಟಗಾರರು ಪದಕಗಳ ಮಳೆಯನ್ನೇ ಸುರಿಸಿದ್ದಾರೆ. ದಕ್ಷಿಣ ಕೊರಿಯಾದ ಗುಮಿ ನಗರದ ಈ ಪಂದ್ಯಾವಳಿಯ ನಾಲ್ಕನೇ ದಿನವಾದ ಶುಕ್ರವಾರ ಭಾರತ ನಾಲ್ಕು ಚಿನ್ನದ ಪದಕಗಳನ್ನು ಗಳಿಸಿತು. ಈ ಪೈಕಿ ಹೈಜಂಪ್ (high jump) ಸ್ಪರ್ಧೆಯಲ್ಲಿ 18 ವರ್ಷದ ಪೂಜಾ ಚಿನ್ನದ ಪದಕ ಗೆದ್ದಿದ್ದು ಎಲ್ಲರ ಗಮನ ಸೆಳೆದದ್ದು.

ಪೂಜಾ ಮೊದಲ ಪ್ರಯತ್ನದಲ್ಲೇ 1.89 ಮೀಟರ್ ಎತ್ತರ ಜಿಗಿದು ಚಿನ್ನದ ಪದಕ ಗೆದ್ದರು. ಈ ಸಾಧನೆಯಿಂದ 2000ರ ಬಳಿಕ ಮಹಿಳಾ ಹೈಜಂಪ್‌ನಲ್ಲಿ ಭಾರತಕ್ಕಾಗಿದೇ ಮೊದಲ ಚಿನ್ನ. ಬಾಬಿ ಅಲೋಶಿಯಸ್ ನಂತರ ಭಾರತಕ್ಕೆ ಈ ಸಾಧನೆ ತಂದಿದ್ದೆ ಪೂಜಾ.

ಅವರು 20 ವರ್ಷದೊಳಗಿನವರಲ್ಲಿ ರಾಷ್ಟ್ರೀಯ ದಾಖಲೆ ತಂದುಕೊಟ್ಟರೂ ಸಹನಾ ಕುಮಾರಿಯವರ 1.92 ಮೀಟರ್ ದಾಖಲೆ ಮುರಿಯಲು ಕೆಲವೇ ಸೆಂಟಿಮೀಟರ್‌ಗಳಿಂದ ವಿಫಲರಾದರು.

ಪೂಜಾ ಹರಿಯಾಣದ ಫತೇಹಾಬಾದ್ ಜಿಲ್ಲೆಯ ಬಸ್ತಿ ಗ್ರಾಮದಲ್ಲಿ 2007ರಲ್ಲಿ ಜನಿಸಿದರು. ಅವರ ತಂದೆ ಹಂಸರಾಜ್ ಗಾರೆ ಕೆಲಸ ಮಾಡುವ ಮೇಸ್ತ್ರಿ. ಮೊದಲ ದಿನಗಳಿಂದಲೇ ಅವರಿಗೆ ಯಾವುದೇ ಆಧುನಿಕ ತರಬೇತಿ ಸೌಲಭ್ಯಗಳು ಲಭ್ಯವಿರಲಿಲ್ಲ.

ಬಿದಿರಿನ ಕೋಲು, ಒಣಹುಲ್ಲು ಚೀಲಗಳಿಂದ ಮಾಡಲಾದ ಲ್ಯಾಂಡಿಂಗ್ ಪ್ಯಾಡ್‌ನಲ್ಲಿ, ಮತ್ತು ಟೈರ್ ಗಳನ್ನು ಸ್ಪ್ರಿಂಗ್ ಬೋರ್ಡ್ ಆಗಿ ಉಪಯೋಗಿಸಿ ಅವರು ಅಭ್ಯಾಸ ಮಾಡುತ್ತಿದ್ದರು. ಆದರೆ ಈ ಸೀಮಿತ ಸೌಲಭ್ಯಗಳ ಮಧ್ಯೆಯೂ ಅವರು ಬ್ಲಾಕ್, ಜಿಲ್ಲಾ, ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡಿದರು.

ನಾಲ್ಕನೇ ದಿನ ಭಾರತೀಯ ಅಥ್ಲೀಟ್ ಗಳು ಒಟ್ಟು ನಾಲ್ಕು ಚಿನ್ನದ ಪದಕಗಳನ್ನು ಗೆದ್ದರು. ಗುಲ್ವೀರ್ ಸಿಂಗ್ (5000 ಮೀ), ಪೂಜಾ (ಹೈಜಂಪ್), ನಂದಿನಿ ಅಗಸರಾ (ಹೆಪ್ಟಾಥ್ಲಾನ್) ಚಿನ್ನದ ಪದಕ ಗೆದ್ದರೆ, ಪಾರುಲ್ ಚೌಧರಿ 3000 ಮೀ ಸ್ಟೀಪಲ್ಚೇಸ್ ನಲ್ಲಿ ರಾಷ್ಟ್ರೀಯ ದಾಖಲೆ ಮುರಿದರು.

ಈಗವರೆಗೂ ಭಾರತ 8 ಚಿನ್ನ, 7 ಬೆಳ್ಳಿ, 3 ಕಂಚು – ಒಟ್ಟು 18 ಪದಕಗಳನ್ನು ಗೆದ್ದಿದ್ದು, ಉತ್ತಮ ಪ್ರದರ್ಶನ ನೀಡುತ್ತಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page