back to top
21.7 C
Bengaluru
Monday, October 27, 2025
HomeNewsಭಾರತ ಮೂಲದ Dr. Srinivas Mukkamala ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷರಾಗಿ ನೇಮಕ

ಭಾರತ ಮೂಲದ Dr. Srinivas Mukkamala ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷರಾಗಿ ನೇಮಕ

- Advertisement -
- Advertisement -

Washington: 179 ವರ್ಷದ ಇತಿಹಾಸ ಹೊಂದಿರುವ ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್‌(AMA-American Medical Association) ಗೆ ಮೊದಲ ಬಾರಿಗೆ ಭಾರತ ಮೂಲದ ವ್ಯಕ್ತಿಯೊಬ್ಬರು ಅಧ್ಯಕ್ಷರಾಗಿದ್ದಾರೆ. ಡಾ. ಶ್ರೀನಿವಾಸ್ ಮುಕ್ಕಾಮಲ (Dr. Srinivas Mukkamala) ಅವರನ್ನು AMA ಸಂಸ್ಥೆಯ 180ನೇ ಅಧ್ಯಕ್ಷರಾಗಿ ನೇಮಿಸಲಾಗಿದೆ. ಜನರು ಅವರನ್ನು ಪ್ರೀತಿಯಿಂದ “ಬಾಬಿ ಮುಕ್ಕಾಮಲ” ಎಂದು ಕರೆಯುತ್ತಾರೆ. ಅವರು ಕಿವಿ-ಮೂಗು-ಗಂಟಲು (ENT) ತಜ್ಞರೂ ಆಗಿದ್ದಾರೆ.

ಜೂನ್ 10ರಂದು ಚಿಕಾಗೋದ ಹಯಾತ್ ರೀಜೆನ್ಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಕ್ಕಾಮಲ ಅವರು, “ಇದು ನನ್ನ ಜೀವನದ ಅತ್ಯಂತ ಭಾವನಾತ್ಮಕ ಕ್ಷಣ, ಅದನ್ನು ಮಾತುಗಳಿಂದ ವಿವರಿಸಲಾಗದು,” ಎಂದರು.

ಹೆಚ್ಚು ಗಮನ ಸೆಳೆದ ವಿಷಯವೆಂದರೆ, ಕಳೆದ ನವೆಂಬರ್‌ನಲ್ಲಿ ಡಾ. ಮುಕ್ಕಾಮಲ ಅವರ ಮೆದುಳಿನ ಎಡಭಾಗದಲ್ಲಿ 8 ಸೆಂ.ಮೀ ಉದ್ದದ ಗಡ್ಡೆ ಪತ್ತೆಯಾಗಿತ್ತು. ಮೂರು ವಾರಗಳ ನಂತರ ಶಸ್ತ್ರಚಿಕಿತ್ಸೆಯ ಮೂಲಕ ಶೇಕಡಾ 90 ರಷ್ಟು ಗಡ್ಡೆ ತೆಗೆದುಹಾಕಲಾಯಿತು. ಇದರಿಂದ ಅವರು ಕೀಮೋ ಅಥವಾ ವಿಕಿರಣ ಚಿಕಿತ್ಸೆ ತೆಗೆದುಕೊಳ್ಳಬೇಕಾಗಿಲ್ಲ. ವೈದ್ಯರ ಪ್ರಕಾರ, ಅವರು ಇನ್ನೂ 20 ವರ್ಷಗಳ ಕಾಲ ಆರೋಗ್ಯವಾಗಿಯೇ ಬದುಕಬಹುದು.

ಡಾ. ಮುಕ್ಕಾಮಲ ಮಿಚಿಗನ್‌ನ ಫ್ಲಿಂಟ್ ಎಂಬ ಊರಲ್ಲಿ ತಮ್ಮ ಪತ್ನಿ ನೀತಾ ಕುಲಕರ್ಣಿಯೊಂದಿಗೆ ವಾಸಿಸುತ್ತಿದ್ದಾರೆ. ಅವರು ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ. ಮುಕ್ಕಾಮಲ ದಂಪತಿ ದಶಕಗಳ ಕಾಲ ಬಡವರಿಗೆ ಉಚಿತ ವೈದ್ಯಕೀಯ ಸೇವೆ ಒದಗಿಸುತ್ತಿದ್ದಾರೆ.

ಅವರಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ಒಬ್ಬ ಮಗ ನಿಖಿಲ್ ಬಯೋಮೆಡಿಕಲ್ ಎಂಜಿನಿಯರ್ ಆಗಿದ್ದು, ಇನ್ನೊಬ್ಬ ಮಗ ದೇವನ್ ರಾಜ್ಯಶಾಸ್ತ್ರದಲ್ಲಿ ಪಿಎಚ್‌ಡಿಗೆ ಓದುತ್ತಿದ್ದಾರೆ. AMA ಸಂಸ್ಥೆಯ ವಾರ್ಷಿಕ ಸಭೆ ಜೂನ್ 6 ರಿಂದ 11ರವರೆಗೆ ನಡೆಯಿತು. AMA ಅನ್ನು ಅಮೆರಿಕದ ಅತಿದೊಡ್ಡ ಹಾಗೂ ಪ್ರಭಾವಶಾಲಿ ವೈದ್ಯಕೀಯ ಸಂಸ್ಥೆ ಎಂದು ಪರಿಗಣಿಸಲಾಗುತ್ತದೆ.

ಡಾ. ಮುಕ್ಕಾಮಲ, “ಕೆಲವು ತಿಂಗಳುಗಳ ಹಿಂದೆ ನಾನು ಬದುಕಿರುತ್ತೀನೆಯೇ ಅನ್ನೋ ಶಂಕೆ ಇತ್ತು. ಆದರೆ ಇಂದು ಈ ಸ್ಥಾನದಲ್ಲಿ ನಿಂತಿರುವುದು ಕನಸು ನನಸಾದಂತಿದೆ,” ಎಂದು ಸಂತಸ ವ್ಯಕ್ತಪಡಿಸಿದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page