ಲಂಡನ್ ನಲ್ಲಿ, (London) ಅನಿವಾಸಿ ಭಾರತೀಯರು, ವಿದ್ಯಾರ್ಥಿಗಳು ಮತ್ತು ವಿದೇಶಿ ಹೂಡಿಕೆದಾರರು ಸೇರಿದಂತೆ ಭಾರತೀಯರು ಈಗ ಸ್ಥಳೀಯರಿಗಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ ಎಂಬುದು ಬ್ಯಾರೆಟ್ ಲಂಡನ್ ಇತ್ತೀಚಿನ ವರದಿಯಿಂದ ತಿಳಿದುಬಂದಿದೆ.
ಇಲ್ಲಿ ಭಾರತೀಯ ಆಸ್ತಿ ಖರೀದಿದಾರರನ್ನು ವಿವಿಧ ವರ್ಗಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ಯುಕೆಯಲ್ಲಿ ವಾಸಿಸುವ ಭಾರತೀಯ ಮೂಲದ ನಿವಾಸಿಗಳು, ಅನಿವಾಸಿ ಭಾರತೀಯರು (NRI), ವಿದೇಶಿ ಹೂಡಿಕೆದಾರರು ಮತ್ತು ಶಿಕ್ಷಣಕ್ಕಾಗಿ ಲಂಡನ್ ವಲಸೆ ಹೋಗುತ್ತಿರುವವರು ಸೇರಿದ್ದಾರೆ.
ಬ್ರಿಟನ್‌ನೊಂದಿಗೆ ಭಾರತದ ಇತಿಹಾಸವನ್ನು ಗಮನಿಸಿದರೆ, ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ವ್ಯಂಗ್ಯಾತ್ಮಕವಾಗಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ. ಕೆಲವರು ಲಂಡನಿನಲ್ಲಿ ಭಾರತೀಯರು ಈಗ ಆಸ್ತಿ ಮಾಲೀಕರ ಅತಿದೊಡ್ಡ ಗುಂಪಾಗಿದ್ದು, ಇಂಗ್ಲಿಷ್ ನವರನ್ನು ಮೀರಿದ್ದಾರೆ ಎಂದು ಹೆಮ್ಮೆಯಿಂದ ಹೇಳಿದ್ದಾರೆ.
ಲಂಡನ್‌ನ ರಿಯಲ್ ಎಸ್ಟೇಟ್ ಮಾರುಕಟ್ಟೆ ಭಾರತೀಯ ಹೂಡಿಕೆದಾರರಿಗೆ ಆದ್ಯತೆಯ ಆಯ್ಕೆಯಾಗಿದೆ, ಏಕೆಂದರೆ ಅದು ಸ್ಥಿರತೆ ಮತ್ತು ದೀರ್ಘಕಾಲಿಕ ಆದಾಯವನ್ನು ಒದಗಿಸುತ್ತದೆ. ಶಾರುಖ್ ಖಾನ್, ಸೋನಮ್ ಕಪೂರ್, ಅಜಯ್ ದೇವಗನ್, ಶಿಲ್ಪಾ ಶೆಟ್ಟಿ ಮತ್ತು ಸೌರವ್ ಗಂಗೂಲಿಂತಹ ಭಾರತೀಯ ಸೆಲೆಬ್ರಿಟಿಗಳು ಲಂಡನ್ ನಲ್ಲಿ ಮನೆಗಳನ್ನು ಹೊಂದಿದ್ದಾರೆ, ಇದು ಭಾರತದ ಗಣ್ಯರಿಗೆ ಇದು ಆಕರ್ಷಣೆಯಾದ ಸ್ಥಳವಾಗಿದೆ.