Washington: Georgetown ವಿಶ್ವವಿದ್ಯಾಲಯದ (Georgetown University) ಭಾರತೀಯ ಸಂಶೋಧಕ ಬದರ್ ಖಾನ್ ಸೂರಿ (Badar Khan Suri) ಅವರನ್ನು ಅಮೆರಿಕದ ವಲಸೆ ಅಧಿಕಾರಿಗಳು ಬಂಧಿಸಿದ್ದಾರೆ. ಹಮಾಸ್ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವುದು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ Hamas ಪರ ಪ್ರಚಾರ ನಡೆಸಿದ ಆರೋಪ ಅವರ ಮೇಲೆ ಇದೆ.
ಈ ಬಂಧನ, ಪ್ಯಾಲೆಸ್ತೀನ್ ಪರ ಕಾರ್ಯಕರ್ತರನ್ನು ತಡೆಯಲು ಡೊನಾಲ್ಡ್ ಟ್ರಂಪ್ (Donald Trump) ಆಡಳಿತದ ಭಾಗವಾಗಿ ಕೈಗೊಂಡ ಕ್ರಮವಾಗಿದೆ. ಸೂರಿಯನ್ನು ಅಮೆರಿಕದಿಂದ ಗಡೀಪಾರು ಮಾಡಬಹುದಾಗಿದೆ ಎಂದು ವರದಿಯಾಗಿದೆ.
ಅಮೆರಿಕದ ಗೃಹ ಭದ್ರತಾ ಇಲಾಖೆಯ ಸಹಾಯಕ ಕಾರ್ಯದರ್ಶಿ ಟ್ರಿಸಿಯಾ ಮೆಕ್ಲಾಫ್ಲಿನ್ ಅವರು, ಸೂರಿ ಹಮಾಸ್‌ನ ಹಿರಿಯ ಸಲಹೆಗಾರನೊಬ್ಬರೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ. ಅವರು ಯೆಹೂದ್ಯ ವಿರೋಧಿ ವಿಷಯಗಳನ್ನು ಹರಡಿದ್ದರು ಎಂದು ಕೂಡಾ ಆರೋಪಿಸಲಾಗಿದೆ.
ಮಾರ್ಚ್ 15, 2025ರಂದು, ವಿದೇಶಾಂಗ ಸಚಿವರು ಸೂರಿಯ ಚಟುವಟಿಕೆಗಳು ಅಮೆರಿಕದ ವಿದೇಶಾಂಗ ನೀತಿಗೆ ಬೆದರಿಕೆಯಾಗಿದೆ ಎಂದು ನಿರ್ಧಾರ ತೆಗೆದುಕೊಂಡಿದ್ದರು. ಈ ಕಾರಣದಿಂದ ಅವರನ್ನು ದೇಶದಿಂದ ಹೊರಹಾಕಬಹುದು ಎಂದು ಮೆಕ್ಲಾಫ್ಲಿನ್ ತಿಳಿಸಿದ್ದಾರೆ.