Washington: ಹಮಾಸ್‌ಗೆ (Hamas) ಬೆಂಬಲ ನೀಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಕೊಲಂಬಿಯಾ ವಿಶ್ವವಿದ್ಯಾಲಯದ ಭಾರತೀಯ ಡಾಕ್ಟರೇಟ್ ವಿದ್ಯಾರ್ಥಿನಿ ರಂಜನಿ ಶ್ರೀನಿವಾಸನ್ (Ranjani Srinivasan) ಅವರ ವೀಸಾವನ್ನು ಅಮೆರಿಕಾ ರದ್ದುಗೊಳಿಸಿದೆ.
ಅಮೆರಿಕದ ಗೃಹ ಭದ್ರತಾ ಇಲಾಖೆಯ ಪ್ರಕಾರ, ಮಾರ್ಚ್ 5, 2025 ರಂದು ಅವರ ವೀಸಾ ರದ್ದುಗೊಂಡಿದ್ದು, ಮಾರ್ಚ್ 11, 2025 ರಂದು ಅವರು CBP HOME APP ಬಳಸಿ ಸ್ವಯಂ ಗಡೀಪಾರು ಮಾಡಿಕೊಂಡಿದ್ದಾರೆ. ರಂಜನಿ ಅವರು F1 ವಿದ್ಯಾರ್ಥಿ ವೀಸಾದಲ್ಲಿ ಅಮೆರಿಕಕ್ಕೆ ಹೋಗಿದ್ದರು, ಆದರೆ ಹಮಾಸ್ ಬೆಂಬಲಿಸಿದ ಹೋರಾಟದಲ್ಲಿ ಭಾಗವಹಿಸಿದ್ದಾಗಿ ಇಲಾಖೆಯು ತಿಳಿಸಿದೆ.