Rio de Janeiro, Brazil: ಭಾರತದ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರು ಮುಂದಿನ ವರ್ಷ BRICS ಶೃಂಗಸಭೆ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಳ್ಳಲಿದ್ದು, BRICS ಅನ್ನು ಹೊಸ ರೀತಿಯಲ್ಲಿ ಪ್ರಸ್ತುತಪಡಿಸಲಿದೆ ಎಂದು ಹೇಳಿದ್ದಾರೆ. ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳನ್ನೊಳಗೊಂಡ BRICS ವೇದಿಕೆಯನ್ನು ರೂಪವನ್ನು ‘ಸಹಕಾರ ಮತ್ತು ಸುಸ್ಥಿರತೆಗಾಗಿ ಸ್ಥಿತಿಸ್ಥಾಪಕತ್ವ ಮತ್ತು ನಾವೀನ್ಯತೆಯ ನಿರ್ಮಾಣ ಎಂದು ಮರು ವ್ಯಾಖ್ಯಾನಿಸಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಹೇಳಿದ್ದಾರೆ.
ಬ್ರೆಜಿಲ್‌ನಲ್ಲಿ ನಡೆದ ಶೃಂಗಸಭೆಯ “ಪರಿಸರ, ಸಿಒಪಿ-30 ಮತ್ತು ಜಾಗತಿಕ ಆರೋಗ್ಯ” ಕುರಿತ ಸಭೆಯಲ್ಲಿ ಅವರು ಮಾತನಾಡಿದರು. ಮೋದಿ ಅವರು ಹೇಳಿದರು:
ಭಾರತ ತನ್ನ ಅಧ್ಯಕ್ಷತೆಯಲ್ಲಿ ಜಾಗತಿಕ ದಕ್ಷಿಣದ (Global South) ಸಮಸ್ಯೆಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಿದೆ. ನಾವು ಜನರ ಕೇಂದ್ರೀಕೃತವಾದ ಹಾಗೂ “ಮಾನವೀಯತೆ ಮೊದಲು” ಎಂಬ ನಿಲುವಿನಲ್ಲಿ ಕೆಲಸ ಮಾಡುತ್ತೇವೆ ಎಂದರು.
ಮೋದಿಯವರು ಹಿಂದೆ G-20 ಶೃಂಗಸಭೆಯ ಅಧ್ಯಕ್ಷತೆಯಲ್ಲಿದ್ದಾಗಲೂ ಜಾಗತಿಕ ದಕ್ಷಿಣದ ಪ್ರಶ್ನೆಗಳಿಗೆ ಆದ್ಯತೆ ನೀಡಿದವು. ಅದೇ ಮಾದರಿಯಲ್ಲಿ BRICS ನವೀಕರಣದತ್ತ ನಾವು ಹೆಜ್ಜೆ ಇಡುತ್ತೇವೆ ಎಂದರು.
ಶೃಂಗಸಭೆ ಯಶಸ್ವಿಯಾಗಿ ಆಯೋಜಿಸಿದ ಬ್ರೆಜಿಲ್ ಅಧ್ಯಕ್ಷ ಲುಲಾ ಡ ಸಿಲ್ವಾ ಅವರಿಗೆ ಮೋದಿ ಅಭಿನಂದನೆ ಸಲ್ಲಿಸಿದರು ಮತ್ತು ಆತ್ಮೀಯ ಆತಿಥ್ಯಕ್ಕೆ ಧನ್ಯವಾದ ಹೇಳಿದರು.
ಹವಾಮಾನ ನ್ಯಾಯವು ಭಾರತಕ್ಕೆ ಆಯ್ಕೆಯಲ್ಲ, ಇದು ನೈತಿಕ ಕರ್ತವ್ಯವಾಗಿದೆ ಎಂದು ಅವರು ಹೇಳಿದರು. ತಂತ್ರಜ್ಞಾನ ಮತ್ತು ಹಣಕಾಸು ಅಗತ್ಯವಿರುವ ದೇಶಗಳಿಗೆ ತಲುಪದರೆ, ಹವಾಮಾನ ಚಟುವಟಿಕೆ ಕೇವಲ ಮಾತುಗಳಷ್ಟಾಗಲಿದೆ ಎಂದು ಅಭಿಪ್ರಾಯಪಟ್ಟರು.
ವಿವಿಧ ಒತ್ತಡಗಳಿಂದಾಗಿ ಆಹಾರ, ಇಂಧನ, ರಸಗೊಬ್ಬರ ಮತ್ತು ಆರ್ಥಿಕ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಎಲ್ಲಾ ದೇಶಗಳನ್ನು ನಾವು ಒಟ್ಟಿಗೆ ಕರೆದೊಯ್ಯಬೇಕಾದ ಅವಶ್ಯಕತೆ ಇದೆ ಎಂದು ಅವರು ಹೇಳಿದರು.







