back to top
24 C
Bengaluru
Friday, July 25, 2025
HomeSportsCricketIND vs NZ: 2nd Test Cricket ಭಾರತಕ್ಕೆ ಹೀನಾಯ ಸೋಲು!

IND vs NZ: 2nd Test Cricket ಭಾರತಕ್ಕೆ ಹೀನಾಯ ಸೋಲು!

- Advertisement -
- Advertisement -

Pune: ನ್ಯೂಜಿಲ್ಯಾಂಡ್ (New Zealand) ವಿರುದ್ಧ ತವರಿನಲ್ಲಿ ನಡೆದ 2ನೇ ಟೆಸ್ಟ್ (2nd Test) ಪಂದ್ಯವನ್ನ ಸೋಲುವ ಮೂಲಕ ಭಾರತ ಬರೋಬ್ಬರಿ 11 ವರ್ಷಗಳ ಬಳಿಕ ತವರಿನಲ್ಲಿ ಟೆಸ್ಟ್​ ಸರಣಿ ಕಳೆದುಕೊಂಡಿದೆ.

]ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಭಾರತ 113ರನ್​ಗಳ ಸೋಲು ಕಂಡಿದೆ.

ಬೆಂಗಳೂರಿನಲ್ಕಿ ಟೆಸ್ಟ್ ಸೋತಿದ್ದ ಭಾರತ ತಂಡ ಪುಣೆಯಲ್ಲಿ ಟೆಸ್ಟ್ ಪಂದ್ಯವನ್ನ ಗೆದ್ದು ಸರಣಿಯನ್ನ ಸಮಬಲ ಸಾಧಿಸುವ ಇರಾದೆಯಲ್ಲಿತ್ತು. ಅದಕ್ಕಾಗಿ ತಮ್ಮ ಸ್ಪಿನ್​ ಅಸ್ತ್ರವನ್ನ ಬಳಸಿಕೊಂಡಿತ್ತು.

ಮಿಚೆಲ್ ಸ್ಯಾಂಟ್ನರ್ ಸ್ಪಿನ್​ ದಾಳಿಯನ್ನ ಎದುರಿಸಲಾಗಿ ಭಾರತಿಯ ಬ್ಯಾಟರ್​ಗಳು ಪರದಾಡಿದರು. ಮೊದಲ ಇನ್ನಿಂಗ್ಸ್​ನಲ್ಲಿ 7 ವಿಕೆಟ್ ಪಡೆದಿದ್ದ ಸ್ಯಾಂಟ್ನರ್ 2ನೇ ಇನ್ನಿಂಗ್ಸ್​ನಲ್ಲೂ 5 ವಿಕೆಟ್ ಪಡೆದು ಕಮಾಲ್ ಮಾಡಿದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಬೌಲರ್​ಗಳು ಉತ್ತಮ ಪ್ರದರ್ಶನ ತೋರಿದರೂ ಬ್ಯಾಟರ್​ಗಳು ಈ ಪಂದ್ಯದಲ್ಲಿ ದಯನೀಯ ವೈಫಲ್ಯ ಅನುಭವಿಸಿ 156ಕ್ಕೆ ಆಲೌಟ್ ಆಯಿತು. ಇಡೀ ಇನ್ನಿಂಗ್ಸ್​ನಲ್ಲಿ ಒಬ್ಬ ಬ್ಯಾಟ್ಸ್​ಮನ್​ ಕೂಡ ಅರ್ಧಶತಕ ಸಿಡಿಸಲಿಲ್ಲ.

38ರನ್​ಗಳಿಸಿದ ರವೀಂದ್ರ ಜಡೇಜಾ ತಂಡದ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಜೈಸ್ವಾಲ್ 30, ಗಿಲ್ ಕೂಡ 30 ರನ್​ಗಳಿಸಿದರು.

359ರನ್​ಗಳ ಗುರಿ ಬೆನ್ನಟ್ಟಿದ ಟೀಮ್ ಇಂಡಿಯಾ, ಇಂದೂ ಕೂಡ ಉತ್ತಮ ಆರಂಭ ಪಡೆಯಲಿಲ್ಲ. ರೋಹಿತ್ ಶರ್ಮಾ ಕೇವಲ 8 ರನ್​ಗಳಿಸಿ ಸ್ಯಾಂಟ್ನರ್​ ಬೌಲಿಂಗ್​ನಲ್ಲಿ ವಿಲ್​ಯಂಗ್​ಗೆ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು.

ಆದರೆ 2ನೆ ವಿಕೆಟ್​ಗೆ ಗಿಲ್ ಹಾಗೂ ಜೈಸ್ವಾಲ್ 62ರನ್​ಗಳ ಜೊತೆಯಾಟ ನೀಡಿ ತಂಡಕ್ಕೆ ಚೇತರಿಕೆ ನೀಡಿದರು. ತಂಡದ ಮೊತ್ತ 100ರ ಸನಿಗವಿದ್ದಾಗ 23 ರನ್​ಗಳಿಸಿದ್ದ ವೇಳೆ ಗಿಲ್​ ಸ್ಯಾಂಟ್ನರ್​ ಬೌಲಿಂಗ್​ನಲ್ಲಿ ಡೆರಿಲ್ ಮಿಚೆಲ್​ಗೆ ಕ್ಯಾಚ್ ನೀಡಿ ಔಟಾದರು.

ಗಿಲ್ ಔಟಾದ 30 ರನ್​ಗಳ ಅಂತರದಲ್ಲಿ ಅರ್ಧಶತಕ ಸಿಡಿಸಿ ಉತ್ತಮವಾಗಿ ಆಡುತ್ತಿದ್ದ ಯಶಸ್ವಿ ಜೈಸ್ವಾಲ್ ಕೂಡ ಸ್ಯಾಂಟ್ನರ್ ಬೌಲಿಂಗ್​ನಲ್ಲಿ ಡೇರಿಲ್ ಮಿಚೆಲ್​ಗೆ ಕ್ಯಾಚ್ ನೀಡಿದ ಔಟಾದರು.

ಜೈಸ್ವಾಲ್ 65 ಎಸೆತಗಳಲ್ಲಿ 9 ಬೌಂಡರಿಮ 3 ಸಿಕ್ಸರ್​ಗಳ ಸಹಿತ 77 ರನ್​ಗಳಿಸಿ ಔಟಾದರು.

ಯಶಸ್ವಿ ಜೈಸ್ವಾಲ್ ವಿಕೆಟ್ ಬೀಳುತ್ತಿದ್ದಂತೆ ಭಾರತದ ಪತನ ಆರಂಭವಾಯಿತು. ಇಲ್ಲದ ರನ್​ ಕದಿಯಲು ಹೋಗಿ ರಿಷಭ್ ಪಂತ್​ ರನ್​ಔಟ್ ಆಗಿ ಶೂನ್ಯ ಪೆವಿಲಿಯನ್​ಗೆ ಮರಳಿದರು.

ಇದರ ಬೆನ್ನಲ್ಲೇ ವಿರಾಟ್ ಕೊಹ್ಲಿ ಕೂಡ 17 ರನ್​ಗಳಿಸಿ ಸ್ಯಾಂಟ್ನರ್​ ಬೌಲಿಂಗ್​ನಲ್ಲಿ ಎಲ್​ಬಿ ಬಲೆಗೆ ಬಿದ್ದರು. ಸರ್ಫರಾಜ್ ಆಟ 9ಕ್ಕೆ ಅಂತ್ಯವಾಯಿತು. ವಾಷಿಂಗ್ಟನ್ ಸುಂದರ್ 21ರನ್​ಗಳಿಸಿ ಔಟಾದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page