back to top
20.8 C
Bengaluru
Sunday, August 31, 2025
HomeBusinessIndia ದ ವಿದೇಶಿ ಸಾಲ: 711.8 ಶತಕೋಟಿ ಡಾಲರ್ ಗೆ ಏರಿಕೆ!

India ದ ವಿದೇಶಿ ಸಾಲ: 711.8 ಶತಕೋಟಿ ಡಾಲರ್ ಗೆ ಏರಿಕೆ!

- Advertisement -
- Advertisement -

New Delhi: ಭಾರತದ ವಿದೇಶಿ ಸಾಲವು (India’s external debt) ಸೆಪ್ಟೆಂಬರ್ 2024 ರ ಹೊತ್ತಿಗೆ 711.8 ಶತಕೋಟಿ ಡಾಲರ್ ಗೆ ಏರಿಕೆಯಾಗಿದೆ. ಕೇಂದ್ರ ಹಣಕಾಸು ಸಚಿವಾಲಯವು ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಈ ಸಾಲವು ಜೂನ್ 2024 ರಿಂದ 4.3% ಹೆಚ್ಚಾಗಿದೆ. ಸೆಪ್ಟೆಂಬರ್ 2023 ರ ಅಂತ್ಯದ ವೇಳೆಗೆ ಭಾರತದ ವಿದೇಶಿ ಸಾಲವು $637.1 ಬಿಲಿಯನ್ ಆಗಿತ್ತು.

ಭಾರತದ ವಿದೇಶಿ ಸಾಲವು ಸೆಪ್ಟೆಂಬರ್ 2024 ರ ಹೊತ್ತಿಗೆ $29.6 ಶತಕೋಟಿ ಹೆಚ್ಚಾಗಿದೆ. ಸೆಪ್ಟೆಂಬರ್ 2024 ರಲ್ಲಿ ಬಾಹ್ಯ ಸಾಲ-ಜಿಡಿಪಿ ಅನುಪಾತವು 19.4% ರಷ್ಟಿದೆ, ಇದು ಜೂನ್ 2024 ರಲ್ಲಿ 18.8% ಕ್ಕೆ ಇದ್ದುದರಿಂದ ಏರಿಕೆಯಾಗಿದೆ.

ಭಾರತದ ಜನಸಂಖ್ಯೆ 145 ಕೋಟಿ, ಮತ್ತು ಪ್ರಸ್ತುತ ದೇಶವು 711.8 ಬಿಲಿಯನ್ ಡಾಲರ್ ವಿದೇಶಿ ಸಾಲವನ್ನು ಹೊಂದಿದೆ. ಇದರಿಂದ ಪ್ರತಿ ಭಾರತೀಯನ ತಲೆ ಮೇಲೆ ಸುಮಾರು 490 ಡಾಲರ್ (₹41,940.35) ಸಾಲ ಇದೆ.

ಭಾರತದ ಬಾಹ್ಯ ಸಾಲದ ಪ್ರಮುಖ ಭಾಗವು ಡಾಲರ್ ಮೂಲಕ ಇದೆ, ಇದು 53.4% ಶೇ. ಏರಿಕೆಯಾಗಿದೆ. ಉಳಿದ ಭಾಗವು ಭಾರತೀಯ ರೂಪಾಯಿ, ಜಪಾನೀಸ್ ಯೆನ್, ವಿಶೇಷ ಡ್ರಾಯಿಂಗ್ ಹಕ್ಕುಗಳು ಮತ್ತು ಯುರೋಗಳ ಮೂಲಕ ಇದೆ.

ಭದ್ರತೆ, ಕರೆನ್ಸಿ, ಠೇವಣಿಗಳು ಮತ್ತು ವ್ಯಾಪಾರ ಕ್ರೆಡಿಟ್ ಸಹ ವಿದೇಶಿ ಸಾಲದ ಪ್ರಮುಖ ಭಾಗವಾಗಿವೆ. ಸೆಪ್ಟೆಂಬರ್ 2024 ರ ವೇಳೆಗೆ ಋಣಭಾರ ಸೇವೆ 6.7% ಕ್ಕೆ ಏರಿಕೆಯಾಗಿದೆ.

ಅಸಲು ಮೊತ್ತ ಮತ್ತು ಬಡ್ಡಿ ಪಾವತಿಗಳು 6.7% ರಷ್ಟಿದೆ, ಇದು ಜೂನ್ 2024 ಕ್ಕೆ ಹೋಲಿಸಿದರೆ ಅಲ್ಪ ಪ್ರಮಾಣದಲ್ಲಿ ಹೆಚ್ಚಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page