back to top
18.8 C
Bengaluru
Wednesday, November 26, 2025
HomeNews58 ವರ್ಷಗಳ ಬಳಿಕ Edgbaston ‌ನಲ್ಲಿ India ಭರ್ಜರಿ ಗೆಲುವು!

58 ವರ್ಷಗಳ ಬಳಿಕ Edgbaston ‌ನಲ್ಲಿ India ಭರ್ಜರಿ ಗೆಲುವು!

- Advertisement -
- Advertisement -

ಭಾರತದ ಕ್ರಿಕೆಟ್ ತಂಡ ಇಂಗ್ಲೆಂಡ್ (England) ವಿರುದ್ಧ 58 ವರ್ಷಗಳ ಬಳಿಕ Edgbaston ಮೈದಾನದಲ್ಲಿ ಮೊದಲ ಟೆಸ್ಟ್ ಗೆಲುವು ಸಾಧಿಸಿದೆ. ಐದು ಪಂದ್ಯಗಳ ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಯ ಎರಡನೇ ಪಂದ್ಯದಲ್ಲಿ ಭಾರತ 336 ರನ್ ಅಂತರದಿಂದ ಜಯಿಸಿದೆ. ಇದರೊಂದಿಗೆ ಸರಣಿ 1-1ರಿಂದ ಸಮಬಲಗೊಂಡಿದೆ.

ಪಂದ್ಯದ ಐದನೇ ದಿನ ಟೀಮ್ ಇಂಡಿಯಾ ಗೆಲುವಿಗೆ 7 ವಿಕೆಟ್ ಬೇಕಾಗಿದ್ದರೆ, ಇಂಗ್ಲೆಂಡಿಗೆ 536 ರನ್ ಅಗತ್ಯವಿತ್ತು. ಆದರೆ ಭಾರತದ ಬೌಲರ್‌ಗಳು ಎಚ್ಚರಿಕೆಯಿಂದ ದಾಳಿ ನಡೆಸಿ ಇಂಗ್ಲೆಂಡ್ ತಂಡವನ್ನು ಕೇವಲ 271 ರನ್‌ಗಳಿಗೆ ಕುಸಿದಂತೆ ಮಾಡಿದ್ರು. ಆಕಾಶ್ ದೀಪ್ 6 ವಿಕೆಟ್ ತೆಗೆದು ಮೆರೆದರು. ಇದು ಅವರ ಟೆಸ್ಟ್ ವೃತ್ತಿಜೀವನದ ಮೊದಲ ಐದು ವಿಕೆಟ್ ಸಾಧನೆಯಾಗಿದ್ದು, ಅದ್ಭುತ ಪ್ರದರ್ಶನವಾಗಿದೆ. ಜೊತೆಗೆ ಸಿರಾಜ್, ಜಡೇಜಾ, ಪ್ರಸಿದ್ಧ್ ಮತ್ತು ವಾಷಿಂಗ್ಟನ್ ತಲಾ ಒಂದು ವಿಕೆಟ್ ಪಡೆದರು.

ಇಂಗ್ಲೆಂಡ್ ಪರ ಜೇಮೀ ಸ್ಮಿತ್ 88 ರನ್ ಮಾಡಿ ಹೆಚ್ಚು ಸ್ಕೋರ್ ಮಾಡಿದ್ರು. ನಾಯಕ ಬೆನ್ ಸ್ಟೋಕ್ಸ್ 33 ರನ್ ಮಾಡಿದರೆ, ಡಕೆಟ್ 25 ರನ್‌ಗಳಿಗೆ ಪೆವಿಲಿಯನ್ ಸೇರಿದರು.

ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 587 ರನ್ ಗಳಿಸಿತು. ಶುಭ್ಮನ್ ಗಿಲ್ ದ್ವಿಶತಕ ಸಿಡಿಸಿ ಮಿಂಚಿದರು. ಎರಡನೇ ಇನ್ನಿಂಗ್ಸ್ ನಲ್ಲೂ ಗಿಲ್ ಅವರ ಶತಕದ ನೆರವಿನಿಂದ 427 ರನ್ ಸ್ಕೋರ್ ಮಾಡಿ ಡಿಕ್ಲೇರ್ ಮಾಡಲಾಯಿತು. ಇಂಗ್ಲೆಂಡ್ ಗೆ 608 ರನ್ ಬೃಹತ್ ಗುರಿಯನ್ನು ನೀಡಲಾಯಿತು.

ಇಂಗ್ಲೆಂಡ್ 600+ ರನ್ ಗುರಿಗಳನ್ನು ಪಡೆದಿದ್ದ 10 ಪಂದ್ಯಗಳಲ್ಲಿ ಒಂಬತ್ತು ಸೋತಿದೆ. 1934 ರಲ್ಲಿ ಆಸ್ಟ್ರೇಲಿಯಾ ನೀಡಿದ 708 ರನ್ ಗುರಿಯೂ ಇವುಗಳಲ್ಲಿ ಒಂದು. ಇದೀಗ 2025ರಲ್ಲಿ ಭಾರತ ನೀಡಿದ 608 ರನ್ ಗುರಿಗೂ ಇಂಗ್ಲೆಂಡ್ ಸೋಲಿರುವುದು ಇದಕ್ಕೆ ಮುಂದುವರಿದ ಉದಾಹರಣೆ.

ಭಾರತ ಈಗವರೆಗೆ 10 ಬಾರಿ 500-600ಕ್ಕಿಂತ ಹೆಚ್ಚು ಗುರಿ ನೀಡಿದ್ದು, 9 ಪಂದ್ಯಗಳಲ್ಲಿ ಗೆದ್ದಿದೆ ಹಾಗೂ 1 ಪಂದ್ಯ ಡ್ರಾ ಆಗಿದೆ. ಈ ದಾಖಲೆಯು ಭಾರತೀಯ ತಂಡದ ಬೌಲಿಂಗ್ ಹಾಗೂ ನಾಯಕತ್ವ ಶಕ್ತಿಯನ್ನು ತೋರಿಸುತ್ತದೆ.

ಭಾರತ 1932 ರಿಂದ ಇಂಗ್ಲೆಂಡ್ ವಿರುದ್ಧ 69 ಟೆಸ್ಟ್‌ ಪಂದ್ಯಗಳನ್ನು ಆಡಿದ್ದು, ಈ ನಡುವೆ ಎಡ್ಜ್ಬಾಸ್ಟನ್‌ನಲ್ಲಿ 8 ಪಂದ್ಯಗಳಲ್ಲಿ ಗೆಲುವಿಲ್ಲದ ಸ್ಥಿತಿಯಿತ್ತು (7 ಸೋಲು, 1 ಡ್ರಾ). ಇದೀಗ 9ನೇ ಪಂದ್ಯದ ಮೂಲಕ ಭಾರತ ಎಡ್ಜ್ಬಾಸ್ಟನ್‌ನಲ್ಲಿ ತನ್ನ ಮೊದಲ ಜಯ ದಾಖಲಿಸಿದೆ. ಇದು 58 ವರ್ಷಗಳ ನಂತರ ದೊರೆತ ಮಹತ್ವದ ಸಾಧನೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page