Search
WhatsApp alerts

Home › News

ಭಾರತದ ಹೊಸ Fighter Jet 12,000 ಕಿಮೀ ದೂರ ಹಾರಲಿದೆ: America ವನ್ನೂ ತಲುಪಬಹುದಾದ ಶಕ್ತಿ!

administrator · Published

India's new fighter jet will fly 12,000 km

Delhi: ಭಾರತ ತನ್ನ ಸೇನೆಗೆ ಹೊಸ ಶಕ್ತಿಯನ್ನು ನೀಡುವತ್ತ ಹೆಜ್ಜೆ ಇಡುತ್ತಿದೆ. ಇತ್ತೀಚೆಗೆ ಭಾರತ ತನ್ನದೇ ಆದ ಅತ್ಯಾಧುನಿಕ ಯುದ್ಧವಿಮಾನವನ್ನು (ಬಾಂಬರ್) ಅಭಿವೃದ್ಧಿಪಡಿಸುವ ಯೋಜನೆಯನ್ನು ಆರಂಭಿಸಿದೆ. ಇದರ ಹೆಸರು ಅಲ್ಟ್ರಾ ಲಾಂಗ್ ರೇಂಜ್ ಸ್ಟ್ರೈಕ್ aircraft (ULRSA). ಇದು ಒಂದು ಬಾಂಬರ್ ವಿಮಾನವಾಗಿದ್ದು, (fighter jet) 12,000 ಕಿಮೀ ದೂರ ಹಾರಲು ಸಾಮರ್ಥ್ಯ ಹೊಂದಿರುತ್ತದೆ, ಅಂದರೆ ಅಮೆರಿಕವನ್ನೂ ತಲುಪಬಲ್ಲಷ್ಟು ಶಕ್ತಿಶಾಲಿಯಾಗಿದೆ.

ವಿಶ್ವದಲ್ಲೇ ಅತಿ ದೂರ ಹಾರಬಲ್ಲ ಯುದ್ಧವಿಮಾನಗಳಲ್ಲಿ ಇದೂ ಒಂದು. ಭಾರತ 2032-35 ರೊಳಗೆ ಇದರ ಮಾದರಿ (ಪ್ರೋಟೋಟೈಪ್) ಸಿದ್ಧಪಡಿಸಿ, 2036ರೊಳಗೆ ಪೂರ್ಣ ಪ್ರಮಾಣದ ನಿರ್ಮಾಣ ಆರಂಭಿಸುವ ಯೋಜನೆ ಹೊಂದಿದೆ.

ಚೀನಾದಲ್ಲಿ ಇರುವ ಎಚ್-6ಕೆ ವಿಮಾನವು ಅಂದಾಜು 8,000 ಕಿಮೀದಷ್ಟು ದೂರವರೆಗೆ ಮಾತ್ರ ಹಾರಬಲ್ಲದು. ಆದರೆ ಭಾರತ ನಿರ್ಮಿಸುತ್ತಿರುವ ವಿಮಾನವು 12,000 ಕಿಮೀ ರೇಂಜ್ ಹೊಂದಿರುತ್ತದೆ. ರಷ್ಯಾದ ಟಿಯು-160 ಮತ್ತು ಅಮೆರಿಕದ ಬಿ-21 ರೇಡರ್ ವಿಮಾನಗಳಂತಹ ವೈಶಿಷ್ಟ್ಯಗಳನ್ನು ಈ ಹೊಸ ಬಾಂಬರ್‌ವಿಮಾನವೂ ಹೊಂದಿರಲಿದೆ.

ಈ ಯುದ್ಧವಿಮಾನದ ಮುಖ್ಯ ಲಕ್ಷಣಗಳು

  • 12,000 ಕಿಮೀ ಹಾರುವ ಸಾಮರ್ಥ್ಯ
  • ಇಂಧನ ಮರುಪೂರಣೆ ಇಲ್ಲದೇ ದೂರ ಪ್ರಯಾಣ
  • ಬ್ರಹ್ಮೋಸ್ ಕ್ಷಿಪಣಿಗಳನ್ನು ತರುವ ಸಾಮರ್ಥ್ಯ
  • ಸೂಪರ್ಸಾನಿಕ್ ವೇಗ
  • ಸ್ವಿಂಗ್ ವಿಂಗ್ ತಂತ್ರಜ್ಞಾನ – ಕಡಿಮೆ ಇಂಧನ ಬಳಕೆ
  • ಸ್ಟೀಲ್ತ್ ತಂತ್ರಜ್ಞಾನ – ರಾಡಾರ್‌ಗೆ ತೋರುವುದಿಲ್ಲ

ಈ ಬಾಂಬರ್ ವಿಮಾನ ಅಭಿವೃದ್ಧಿಯಿಂದ ಭಾರತ ವಿಶ್ವದ ಗಗನ ಸೇನೆಯಲ್ಲೂ ಮುಂಚೂಣಿಗೆ ಬರುತ್ತದೆ.

For Daily Updates WhatsApp ‘HI’ to 7406303366

Read next

ಕೊಲುಮೇನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸ್ಟಾಫ್ ನರ್ಸ್ ಹುದ್ದೆ: ನವೆಂಬರ್ 25ರ ಒಳಗೆ ಅರ್ಜಿ

ಕುಂಬಾರ ಸಮುದಾಯಗಳ ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅರ್ಜಿ ಆಹ್ವಾನ: ಡಿಸೆಂಬರ್ 16 ಕೊನೆಯ ದಿನ

ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮದ ಯೋಜನೆಗಳಿಗೆ ಅರ್ಜಿ ಆಹ್ವಾನ: ಡಿಸೆಂಬರ್ 16 ಕೊನೆಯ ದಿನ

ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಿರಿ: ಚಿಕ್ಕಬಳ್ಳಾಪುರದಲ್ಲಿ ಮಕ್ಕಳ ವಿಜ್ಞಾನ ಸಮಾವೇಶ

You cannot copy content of this page