back to top
27 C
Bengaluru
Wednesday, September 17, 2025
HomeNewsಉಗ್ರ ದಾಳಿಯಲ್ಲಿ Intelligence Department ವಿಫಲತೆ: CM Siddaramaiah

ಉಗ್ರ ದಾಳಿಯಲ್ಲಿ Intelligence Department ವಿಫಲತೆ: CM Siddaramaiah

- Advertisement -
- Advertisement -

Chamarajanagar: ಕಾಶ್ಮೀರದ ಪೆಹಲ್ಗಾಮ್‌ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಗುಪ್ತಚರ ಇಲಾಖೆಯು (Intelligence Department) ತನ್ನ ಕರ್ತವ್ಯದಲ್ಲಿ ವಿಫಲವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದರು.

ಮಲೆ ಮಹದೇಶ್ವರ ಬೆಟ್ಟದ ಹೆಲಿಪ್ಯಾಡ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಪುಲ್ವಾಮ ದಾಳಿಯಲ್ಲಿ 40 ಸೈನಿಕರು ಹುತಾತ್ಮರಾದರು. ಇತ್ತೀಚೆಗಿನ ದಾಳಿಯಲ್ಲಿ 26 ನಾಗರಿಕರು ಬಲಿಯಾದರು. ಪುಲ್ವಾಮ ಬಳಿಕ ಕೇಂದ್ರ ಸರ್ಕಾರ ಹೆಚ್ಚು ಎಚ್ಚರಿಕೆ ವಹಿಸಬೇಕಿತ್ತು,” ಎಂದು ಹೇಳಿದರು.

“ಈ ಉಗ್ರ ದಾಳಿ ಅತ್ಯಂತ ಖಂಡನೀಯ. ನಾವು ಅದನ್ನು ತೀವ್ರವಾಗಿ ಖಂಡಿಸುತ್ತೇವೆ. ಮೃತರ ಕುಟುಂಬಗಳಿಗೆ ₹10 ಲಕ್ಷ ಪರಿಹಾರ ನೀಡಲಾಗಿದೆ. ಪೊಲೀಸ್ ಇಲಾಖೆಗೆ ಎಚ್ಚರಿಕೆ ನೀಡಲಾಗಿದೆ,” ಎಂದರು.

“ಉಗ್ರರು ಯಾವ ರಾಜ್ಯದವರಾಗಿದ್ದರೂ, ಯಾವ ಧರ್ಮದವರಾಗಿದ್ದರೂ ಅವರನ್ನು ನಾಶ ಮಾಡುವುದು ಕೇಂದ್ರ ಸರ್ಕಾರದ ಜವಾಬ್ದಾರಿ. ಉಗ್ರರಿಗೆ ಬೆಂಬಲ ಕೊಡಬಾರದು,” ಎಂದರು.

“ಮೇಕೆದಾಟು ಯೋಜನೆಗೆ ಕೇಂದ್ರ ಅನುಮತಿ ನೀಡಬೇಕು. ಈಗಲೇ ಅನುಮತಿ ದೊರೆತರೆ ನಾಳೆಯಿಂದಲೇ ಯೋಜನೆ ಆರಂಭಿಸಬಹುದು. ಆದರೆ ಕೇಂದ್ರ ಸರ್ಕಾರ ನೀಡಬೇಕಾದ ಅನುದಾನವನ್ನೂ ನೀಡುತ್ತಿಲ್ಲ. ಇದಕ್ಕೆ ರಾಜಕೀಯ ದ್ವೇಷವೇ ಕಾರಣ” ಎಂದರು.

“ಈ ದಾಳಿಗೆ ಗುಪ್ತಚರ ಇಲಾಖೆಯ ವೈಫಲ್ಯವೇ ಕಾರಣ. ಇದು ಒಂದು ದಿನದಲ್ಲಿಯ ದಾಳಿ ಅಲ್ಲ. ಕೇಂದ್ರ ಸರ್ಕಾರ ಸಂಪೂರ್ಣ ತನಿಖೆ ನಡೆಸಬೇಕು,” ಎಂದು ಮೈಸೂರಿನಲ್ಲಿ ಮಾತನಾಡಿದರು.

ಇಂದು ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಈ ಭಾಗದ ಪ್ರಮುಖ ಸಮಸ್ಯೆಗಳ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುತ್ತದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page