International Coffee Day: ಕಾಫಿ ಕುಡಿಯುವುದು ಒಳ್ಳೆಯದಲ್ಲ ಎನ್ನುವುದು ಹಲವರ ಮನೋಭಾವ. ಆದರೆ ಇಡೀ ಜಗತ್ತಿನಲ್ಲಿ ಹೆಚ್ಚು ಸೇವನೆ ಆಗುವ ಪಾನಿಯವೆಂದರೆ ಅದು ಕಾಫಿ. ಅದೆಷ್ಟೂ ಮಂದಿ ಒಂದು ಕಪ್ ಕಾಫಿ ಕುಡಿಯಲು ಕಿಲೋ ಮೀಟರ್ ಗಟ್ಟಲೆ ಹೋಗುತ್ತಾರೆ.
ಕೆಲವರಿಗೆ ಕಾಫಿಯ ಪರಿಮಳ, ಅದರ ಸ್ವಾದ ಅಮೃತವಿದ್ದಂತೆ. ಅದರಲ್ಲಿಯೂ ಬ್ಲಾಕ್ ಕಾಫಿ (Black Coffee) ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗಾದರೆ ಮಹತ್ವವೇನು? ಈ ದಿನವನ್ನು ಆಚರಿಸುವ ಉದ್ದೇಶವೇನು? ಬ್ಲಾಕ್ ಕಾಫಿ (Black Coffee) ಸೇವನೆ ಮಾಡುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು?
Coffee Day ದಿನದ ಹಿನ್ನೆಲೆ
ಅಂತರಾಷ್ಟ್ರೀಯ ಕಾಫಿ ಸಂಸ್ಥೆಯ (International Coffee Organization) 77 ಸದಸ್ಯ ರಾಷ್ಟ್ರಗಳು ಮತ್ತು ಪ್ರಪಂಚದಾದ್ಯಂತದ ಕಾಫಿ ಸಂಘಗಳು October 1 ರಂದು ಕಾಫಿ ದಿನವನ್ನು ಆಚರಿಸುತ್ತವೆ.
2014 ರಲ್ಲಿ, ಕಾಫಿ ವಲಯದ ವೈವಿಧ್ಯತೆ, ಗುಣಮಟ್ಟ ಮತ್ತು ಕಾಫಿ ಬೆಳೆಯುವವರ ಉತ್ಸಾಹವನ್ನು ಇಮ್ಮಡಿಗೊಳಿಸಲು ಮತ್ತು ಎಲ್ಲಾ ಕಾಫಿ ಪ್ರಿಯರಿಗೆ ಈ ದಿನವನ್ನು ಮೀಸಲಿಡಲು ಅಂತರಾಷ್ಟ್ರೀಯ ಕಾಫಿ ಸಂಸ್ಥೆ (International Coffee Organization-ICO) ನಿರ್ಧರಿಸಿದ್ದು, ಹಾಗಾಗಿ ನಾವು ಪ್ರತಿವರ್ಷ ಅಕ್ಟೋಬರ್ 1ರಂದು ಅಂತರಾಷ್ಟ್ರೀಯ ಕಾಫಿ ದಿನವನ್ನು ಆಚರಿಸುತ್ತೇವೆ.
Black Coffee ಸೇವನೆಯ ಪ್ರಯೋಜನ
- ಕಾಫಿಯಲ್ಲಿ ಕೆಫೀನ್ (caffeine) ಅಂಶವು ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಆಯಾಸವನ್ನು ಕಡಿಮೆ ಮಾಡುತ್ತದೆ.
ನಿಯಮಿತವಾಗಿ ಕಾಫಿ ಸೇವಿಸುವುದರಿಂದ ಮಧುಮೇಹದ (diabetes) ಅಪಾಯ ಕಡಿಮೆಯಾಗುತ್ತದೆ ಎಂದು ಕೆಲವು ಸಂಶೋಧನೆಗಳು ಹೇಳುತ್ತವೆ. ಒಂದು ವೇಳೆ ಮಧುಮೇಹ ಇದ್ದರೂ ಕೂಡ ಕಾಫಿಯಲ್ಲಿ ಸಿಗುವ ಕೆಫಿನ್ ಅಂಶ ತನ್ನ ಆಂಟಿಆಕ್ಸಿಡೆಂಟ್ ಹಾಗೂ ಮೆಗ್ನೀಷಿಯಂ ಅಂಶದ ಪ್ರಭಾವದಿಂದ ಮಧುಮೇಹದ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. - ಮೆದುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ. ಅಲ್ಝೈಮರ್ ಮತ್ತು ಪಾರ್ಕಿನ್ಸನ್ (Alzheimer’s and Parkinson’s) ಕಾಯಿಲೆ ಸೇರಿದಂತೆ ಕೆಲವು ನ್ಯೂರೋಡಿಜೆನರೇಟಿವ್ ಅಸ್ವಸ್ಥತೆಗಳಿಂದ ರಕ್ಷಿಸಲು ಕಾಫಿ ಸಹಾಯ ಮಾಡುತ್ತದೆ ಎಂದು ಕೆಲವು ಸಂಶೋಧನೆಗಳಿಂದ ತಿಳಿದು ಬಂದಿದೆ.
- ನಿಯಮಿತವಾಗಿ ಕಾಫಿ ಸೇವನೆಯು ಬುದ್ಧಿಮಾಂದ್ಯತೆಯ ಅಪಾಯವನ್ನು ಕಡಿಮೆ ಮಾಡುತ್ತದೆ ಎಂಬುದನ್ನು ಹಲವಾರು ಅಧ್ಯಯನಗಳು ತೋರಿಸಿವೆ.
- ತೂಕ ಕಡಿಮೆ ಮಾಡುತ್ತದೆ. ಕಾಫಿಯಲ್ಲಿ ಕಂಡು ಬರುವ ಕೆಫಿನ್ ಅಂಶವು ದೇಹದ ತೂಕ ಮತ್ತು ಬೊಜ್ಜಿನ ಸಮಸ್ಯೆ ಇರುವವರಿಗೆ ಒಳ್ಳೆಯದು. ಏಕೆಂದರೆ ಇದು ದೇಹದಲ್ಲಿ ಮೆಟಬಾಲಿಸಂ ಪ್ರಕ್ರಿಯೆಯನ್ನು ಚುರುಕುಗೊಳಿಸಿ ಕೊಬ್ಬಿನ ಅಂಶವನ್ನು ಕರಗಿಸುವಂತೆ ಸೂಚನೆ ಕೊಡುತ್ತದೆ.
- ಖಿನ್ನತೆಯ ಅಪಾಯವೂ ಕಡಿಮೆಯಾಗುತ್ತದೆ ಎಂದು ಅಧ್ಯಯನಗಳಿಂದ ಕಂಡು ಬಂದಿದೆ. ಜೊತೆಗೆ ಆತ್ಮಹತ್ಯೆ ಮತ್ತು ಸಾವಿನ ಅಪಾಯ ಕಡಿಮೆಯಾಗುತ್ತದೆ.
ಪ್ರತಿಷ್ಠಿತ ಹಾರ್ವರ್ಡ್ ವಿಶ್ವವಿದ್ಯಾಲಯ ಹೇಳುವ ಪ್ರಕಾರ ಯಾವ ಮಹಿಳೆಯರು ಪ್ರತಿದಿನ ನಾಲ್ಕು ಕಪ್ ಕಾಫಿ ಕುಡಿಯುತ್ತಾರೆಯೋ ಅವರಿಗೆ ಮಾನಸಿಕ ಖಿನ್ನತೆ ಸಮಸ್ಯೆ ಶೇಕಡ 20% ಕಡಿಮೆಯಾಗುತ್ತದೆ.