Bengaluru: ರೌಡಿಶೀಟರ್ ಬಿಕ್ಲು ಶಿವ್ ಹತ್ಯೆ ಪ್ರಕರಣದಲ್ಲಿ (rowdy sheeter Biklu Shiv) ಶಾಸಕ ಬೈರತಿ ಬಸವರಾಜ್ ಹೆಸರನ್ನು ದೂರುದಾರರು ಸೇರಿಸಿರುವುದಾಗಿ ಗೃಹ ಸಚಿವ ಜಿ. ಪರಮೇಶ್ವರ್ (Home Minister Parameshwara) ಹೇಳಿದ್ದಾರೆ. ಅವರೇ ಹೆಸರು ಸೇರಿಸಬೇಕೆಂದು ಒತ್ತಾಯಿಸಿದ್ದರಿಂದ, ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು.
ಅವರು ಇಂದು ಸದಾಶಿವನಗರದಲ್ಲಿ ಮಾತನಾಡುತ್ತಾ, ಬೈರತಿ ಬಸವರಾಜ್ ಗೆ ನೋಟಿಸ್ ನೀಡಲಾಗಿದೆ, ಪೊಲೀಸರು ಅವರ ಹೇಳಿಕೆ ಪಡೆಯಲಿದ್ದಾರೆ ಎಂದರು. ಎಲ್ಲವೂ ನಿಯಮಾನುಸಾರ ನಡೆಯುತ್ತದೆ, ರಾಜಕೀಯ ಉದ್ದೇಶವಿಲ್ಲವೆಂದು ಸ್ಪಷ್ಟಪಡಿಸಿದರು.
ಬಿಜೆಪಿ ನಾಯಕ ಆರ್. ಅಶೋಕ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಬಿಕ್ಲು ಶಿವ್ ತಾಯಿ ಹೇಳಿದಂತೆ – “ನಾನು ಬೈರತಿ ವಿರುದ್ಧ ದೂರು ಕೊಟ್ಟಿಲ್ಲ”, ಪೊಲೀಸರೇ ಹೆಸರು ಸೇರಿಸಿದ್ದಾರೆ ಎಂದು ಹೇಳಿದ್ದು, ಸರ್ಕಾರದ ರಾಜಕೀಯ ದ್ವೇಷವನ್ನು ತೋರಿಸುತ್ತದೆ ಎಂದರು.
- ದೂರಿನಲ್ಲಿ ಹೆಸರು ಇಲ್ಲದಿದ್ದರೂ ಎಫ್‌ಐಆರ್ ಹಾಕಿರುವುದು ಅನ್ಯಾಯ.
- ಸುಳ್ಳು ಕೇಸುಗಳಿಂದ ಬಿಜೆಪಿ ಶಾಸಕರಿಗೆ ಬೆದರಿಕೆ ಇಡಲಾಗುತ್ತಿದೆ.
- ಇಂತಹ ದ್ವೇಷ ರಾಜಕಾರಣ ಮುಂದುವರಿದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಇತರ ಪ್ರಮುಖ ಪ್ರತಿಕ್ರಿಯೆಗಳು
- ಬಾಂಬ್ ಬೆದರಿಕೆ ವಿಚಾರ: ಶಾಲೆಗಳಿಗೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದು, ಸರಿಯಾದ ಪರಿಶೀಲನೆ ನಡೆಯುತ್ತಿದೆ. ಯಾವುದನ್ನೂ ಲಘುವಾಗಿ ತೆಗೆದುಕೊಳ್ಳುತ್ತಿಲ್ಲ.
- ಮನೆ ಮನೆಗೆ ಪೊಲೀಸ್ ಕಾರ್ಯಕ್ರಮ: ಪ್ರತೀ ಮನೆಯ ಸಮಸ್ಯೆ ಕೇಳಲು ಪೊಲೀಸ್ ಇಲಾಖೆ ಹೊಸ ಯೋಜನೆ ಆರಂಭಿಸಿದೆ.
- RCB ದೂರು – ಡಿ ಕುನ್ಹಾ ವರದಿ: ವರದಿ ಸಂಪುಟದ ಮುಂದೆ ಇದೆ, ಆದರೆ ಚರ್ಚೆಯಾಗಿಲ್ಲ.
- ಒಳಮೀಸಲಾತಿ ವಿಚಾರ: ಮಲ್ಲಿಕಾರ್ಜುನ ಖರ್ಗೆ ಪತ್ರಕ್ಕೆ ಪ್ರತಿಕ್ರಿಯಿಸಿ – ಮೀಸಲಾತಿ ಫೈನಲ್ ಆದ ಮೇಲೆ ಪ್ರಮೋಷನ್ ಮತ್ತು ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದರು.