Search
WhatsApp alerts

Home › Business

Stock marketಯಲ್ಲಿ ಹೂಡಿಕೆ; UPI ಪಾವತಿ ಮಿತಿ 2 ಲಕ್ಷದಿಂದ 5 ಲಕ್ಷ ರೂಗೆ ಏರಿಕೆ

administrator · Published

Investing in the market

ದೇಶಾದ್ಯಾಂತ ಷೇರು ಮಾರುಕಟ್ಟೆಯಲ್ಲಿ (Stock market) ಹೂಡಿಕೆ ಮಾಡುವವರಿಗಾಗಿ, ಯುಪಿಐ ಮೂಲಕ ಹಣ ಪಾವತಿ ಮಾಡುವುದಕ್ಕೆ ನಿತ್ಯದ ಮಿತಿಯನ್ನು 2 ಲಕ್ಷ ರೂಗಳಿಂದ 5 ಲಕ್ಷ ರೂವರೆಗೆ ಏರಿಸಲಾಗಿದೆ. ಸೆಬಿ (SEBI) ಈ ಮಹತ್ವಪೂರ್ಣ ಕ್ರಮವನ್ನು ತೆಗೆದುಕೊಂಡಿದೆ.

ಈ ಕ್ರಮವು ಅಂತಿಮವಲ್ಲ, ಸೆಬಿ ಇನ್ನೂ ಈ ಬಗ್ಗೆ ಸಮಾಲೋಚನೆ ಹಂತದಲ್ಲಿದ್ದು, ಮುಂದಿನ ದಿನಗಳಲ್ಲಿ ಇದರಲ್ಲಿ ಯಾವುದೇ ಪರಿಷ್ಕರಣೆಗಳು ಆಗಬಹುದಾದ್ದು.

ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು, ಸೆಬಿ ಪ್ರಮುಖ ಬ್ರೋಕರ್‍ಗಳಿಂದ ವಿವಿಧ ದತ್ತಾಂಶಗಳನ್ನು ಸಂಗ್ರಹಿಸಿ ಅವುಗಳನ್ನು ವಿಶ್ಲೇಷಿಸಿದೆ. ಈ ಮಾಹಿತಿಯ ಆಧಾರದ ಮೇಲೆ, ಯುಪಿಐ ಮೂಲಕ ಪಾವತಿ ಮಾಡುವವರಲ್ಲಿ ಹೆಚ್ಚು ಪ್ರಮಾಣವು 1 ಲಕ್ಷ ರೂಗಿಂತ ಕಡಿಮೆ ವಹಿವಾಟು ಮಾಡುವವರದ್ದು.

ಒಂದು ದಿನದ ವಿವರವನ್ನು ನೋಡಿದರೆ, 91.5% ಜನರು 1 ಲಕ್ಷ ರೂ ಹೀಗೆಯೇ ಕಡಿಮೆ ಮೊತ್ತದಿಂದ ವಹಿವಾಟು ಮಾಡುತ್ತಿದ್ದಾರೆ. 1 ಲಕ್ಷದಿಂದ 2 ಲಕ್ಷರೂವರೆಗೆ, 4.6% ಜನರು ವಹಿವಾಟು ಮಾಡುತ್ತಾರೆ. 5 ಲಕ್ಷ ರೂ ವರೆಗೆ ಹೊಸ ಮಿತಿ ಸೆಬಿ ಘೋಷಿಸಿದೆ.

ಗಮನಿಸಬಹುದಾದ ಅಂಶಗಳು: ಗಮನಿಸಿ, ಈ ಮೇಲಿನದ್ದು ಷೇರು ಮಾರುಕಟ್ಟೆಯಲ್ಲಿ ನೀವು ಯುಪಿಐ ಮೂಲಕ ಮಾಡುವ ವಹಿವಾಟಿಗೆ ಇರುವ ನಿತ್ಯದ ಮಿತಿ. ಆದಾಯ ತೆರಿಗೆ ಪಾವತಿಸಲು ನೀವು ಯುಪಿಐ ಬಳಸುತ್ತಿದ್ದರೆ ದಿನಕ್ಕೆ 5 ಲಕ್ಷ ರೂವರೆಗೆ ಮಿತಿ ಇರುತ್ತದೆ.

ಇವನ್ನು ಹೊರತುಪಡಿಸಿದರೆ ಮಾಮೂಲಿಯಾಗಿ ನೀವು ಅಂಗಡಿಗೋ ಅಥವಾ ಬೇರೆ ವ್ಯಕ್ತಿಗಳಿಗೂ ಹಣ ಪಾವತಿಸುತ್ತಿದ್ದರೆ ಆಗ ನಿತ್ಯದ ಟ್ರಾನ್ಸಾಕ್ಷನ್ ಮಿತಿ ಒಂದು ಲಕ್ಷ ರೂ ಮಾತ್ರವೇ.

For Daily Updates WhatsApp ‘HI’ to 7406303366

Read next

ಹೃದಯದ ಆರೋಗ್ಯ ಕಾಪಾಡಿ: ವಿಶ್ವ ಹೃದಯ ದಿನದಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೇತನ್ ಕಿವಿಮಾತು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ

ಹಿರಿಯ ನಾಗರಿಕರ ಕುಂದುಕೊರತೆ ಪರಿಹಾರಕ್ಕೆ ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ಕೆಎಸ್‌ಆರ್‌ಟಿಸಿಯಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

You cannot copy content of this page