back to top
25.3 C
Bengaluru
Wednesday, July 23, 2025
HomeNewsiOS 26 Beta 4 Released: ಯಾವ iPhone ಗಳಿಗೆ ಲಭ್ಯವಿದೆ? ಹೇಗೆ Install ಮಾಡಬಹುದು?

iOS 26 Beta 4 Released: ಯಾವ iPhone ಗಳಿಗೆ ಲಭ್ಯವಿದೆ? ಹೇಗೆ Install ಮಾಡಬಹುದು?

- Advertisement -
- Advertisement -

ಆಪಲ್ ತನ್ನ iOS 26 ಬೀಟಾ 4 ಆವೃತ್ತಿಯನ್ನು (iOS 26 Beta 4 Released) ಬಿಡುಗಡೆ ಮಾಡಿದ್ದು, ಆಯ್ದ iPhone ಮಾದರಿಗಳಿಗೆ ಲಭ್ಯವಾಗಿದೆ. ಈ ಆವೃತ್ತಿ iPhone SE (2ನೇ ತಲೆಮಾರು) ರಿಂದ ಹಿಡಿದು ಇತ್ತೀಚಿನ iPhone 16e ವರೆಗೆ ಸಪೋರ್ಟ್ ಮಾಡುತ್ತದೆ.

ಕಳೆದ ವಾರ iOS 26 ಬೀಟಾ 3 ಬಿಡುಗಡೆ ಆಗಿತ್ತು. ಈ ವಾರ ಬಳಕೆದಾರರು ಸಾರ್ವಜನಿಕ ಬೀಟಾ (Public Beta) ನಿರೀಕ್ಷಿಸುತ್ತಿದ್ದರು. ಆದರೆ ಬೀಟಾ 4 ಬರುವಿಕೆಯಿಂದ ಸಾರ್ವಜನಿಕ ಆವೃತ್ತಿಗೆ ಇನ್ನೂ ಕೆಲ ದಿನಗಳು ಹಿಡಿಯಬಹುದು.

ಡೌನ್‌ಲೋಡ್ ಗಾತ್ರದಲ್ಲಿ ಬದಲಾವಣೆಗಳಿವೆ, ಅಪ್‌ಡೇಟ್ ಸಾಕಷ್ಟು ಭಾರಿ ಇದೆ. ಹೊಸ UI ವಿನ್ಯಾಸದಲ್ಲಿ “ಲಿಕ್ವಿಡ್ ಗ್ಲಾಸ್” ಎಫೆಕ್ಟ್‌ನ್ನು ಸೇರಿಸಲಾಗಿದೆ. ಪಾರದರ್ಶಕತೆ ಮತ್ತು ಬಳಕೆದಾರ ಅನುಭವವನ್ನು ಸುಧಾರಿಸಲು ಕೆಲಸ ನಡೆಯುತ್ತಿದೆ.

ಆಪಲ್ ಜುಲೈನಲ್ಲಿ ಪಬ್ಲಿಕ್ ಬೀಟಾ ಬಿಡುಗಡೆ ಮಾಡುವ ಸಾಧ್ಯತೆ ಇದೆ. ಮುಂದಿನ ವಾರದಲ್ಲಿಯೇ ಈ ಆವೃತ್ತಿ ಲಭ್ಯವಾಗಬಹುದು ಎಂಬ ನಿರೀಕ್ಷೆಯಿದೆ.

iOS 26 ಲಭ್ಯವಿರುವ ಐಫೋನ್ ಮಾದರಿಗಳು

  • iPhone 16 ಸೀರೀಸ್ (16e ಸಹಿತ)
  • iPhone 15 ಸೀರೀಸ್
  • iPhone 14 ಸೀರೀಸ್
  • iPhone 13 ಸೀರೀಸ್
  • iPhone 12 ಸೀರೀಸ್
  • iPhone 11 ಸೀರೀಸ್
  • iPhone SE (2ನೇ ತಲೆಮಾರು ಮತ್ತು ನಂತರದ ಮಾದರಿಗಳು)

ಹೇಗೆ ಇನ್ಸ್ಟಾಲ್ ಮಾಡಬೇಕು

  • ಮೊದಲು ನಿಮ್ಮ iPhone ನ ಡೇಟಾವನ್ನು ಬ್ಯಾಕಪ್ ಮಾಡಿಕೊಳ್ಳಿ.
  • beta.apple.com ಗೆ ಹೋಗಿ, ಡೆವಲಪರ್ ಅಥವಾ ಪಬ್ಲಿಕ್ ಬೀಟಾ ಪ್ರೋಗ್ರಾಂನಲ್ಲಿ ಸೇರುವಂತೆ ನೋಂದಾಯಿಸಿ.
  • ನಂತರ ಈ ಹಂತಗಳನ್ನು ಅನುಸರಿಸಿ
  • ‘Settings’ > ‘General’ > ‘Software Update’ ಗೆ ಹೋಗಿ.
  • ‘Download and Install’ ಆಯ್ಕೆಮಾಡಿ.
  • ನೀವು ಈಗಾಗಲೇ ಬೀಟಾ ಬಳಕೆದಾರರಾದರೆ, ನೇರವಾಗಿ Software Update ನಲ್ಲಿ ಹೊಸ ಆವೃತ್ತಿ ಇನ್‌ಸ್ಟಾಲ್ ಮಾಡಬಹುದು.

ಬೀಟಾ ಆವೃತ್ತಿಗಳಲ್ಲಿ ದೋಷಗಳು ಇರಬಹುದು. ಆದ್ದರಿಂದ ನಿಮ್ಮ ಮುಖ್ಯ iPhone ನಲ್ಲಿಲ್ಲದೇ, ಒಬ್ಬರು ದ್ವಿತೀಯ ಸಾಧನದಲ್ಲಿ ಅಪ್​ಡೇಟ್​ ಅನ್ನು ಸ್ಥಾಪಿಸಬೇಕು. ಈ ಅಪ್‌ಡೇಟ್‌ಗಳನ್ನು ಪ್ರಯೋಗಿಸುವುದು ಉತ್ತಮ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page