back to top
24 C
Bengaluru
Saturday, August 30, 2025
HomeIndiaIPL 2025: ಮದ್ಯ-ತಂಬಾಕು ಜಾಹೀರಾತಿಗೆ ಬ್ರೇಕ್!

IPL 2025: ಮದ್ಯ-ತಂಬಾಕು ಜಾಹೀರಾತಿಗೆ ಬ್ರೇಕ್!

- Advertisement -
- Advertisement -

IPL 2025 ಪ್ರಾರಂಭಕ್ಕೆ ದಿನಗಣನೆ ಆರಂಭವಾಗಿದೆ. ಮೊದಲ ಪಂದ್ಯ ಮಾರ್ಚ್ 22ರಂದು RCB ಮತ್ತು KKR ನಡುವೆ ನಡೆಯಲಿದೆ. ಈ ಹಿನ್ನಲೆಯಲ್ಲಿ, ಕ್ರಿಕೆಟ್ ಅಭಿಮಾನಿಗಳು ಹಾಗೂ ದೊಡ್ಡ ಕಂಪನಿಗಳು ಉತ್ಸಾಹದಲ್ಲಿದ್ದಾರೆ.

ಐಪಿಎಲ್ ಪ್ರಚಾರ ಪ್ಲಾಟ್‌ಫಾರ್ಮ್ ಆಗಿರುವುದರಿಂದ ಅನೇಕ ಕಂಪನಿಗಳು ತಮ್ಮ ಬ್ರಾಂಡ್‌ಗಳ ಜಾಹೀರಾತುಗಳಿಗೆ ಭಾರಿ ಹಣ ಹೂಡುತ್ತಾರೆ. ಇದರಲ್ಲಿ ಮದ್ಯ ಮತ್ತು ತಂಬಾಕು ಕಂಪನಿಗಳು ಪ್ರಮುಖವಾಗಿದ್ದವು. ಆದರೆ ಈಗ, ಕೇಂದ್ರ ಸರ್ಕಾರ ಈ ಕಂಪನಿಗಳಿಗೆ ದೊಡ್ಡ ಆಘಾತ ನೀಡಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಐಪಿಎಲ್ 2025ರಲ್ಲಿ ಮದ್ಯ ಮತ್ತು ತಂಬಾಕು ಬ್ರಾಂಡ್‌ಗಳ ಪ್ರಚಾರ ನಿಷೇಧಿಸಲು ನಿರ್ಧರಿಸಿದೆ. ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಅವರಿಗೆ ಈ ಕುರಿತು ಸೂಚನೆ ನೀಡಲಾಗಿದ್ದು, ಕ್ರೀಡಾಂಗಣ ಮತ್ತು ಪ್ರಸಾರದ ಸಮಯದಲ್ಲಿಯೂ ಈ ಜಾಹೀರಾತುಗಳನ್ನು ನಿಷೇಧಿಸುವಂತೆ ಆದೇಶಿಸಲಾಗಿದೆ.

ಅತುಲ್ ಗೋಯಲ್ ಅವರ ವರದಿ ಪ್ರಕಾರ, ತಂಬಾಕು ಮತ್ತು ಮದ್ಯಪಾನವು ಹಲವಾರು ಮಾರಕ ಕಾಯಿಲೆಗಳ ಕಾರಣವಾಗುತ್ತಿವೆ. ಭಾರತದಲ್ಲಿ ಪ್ರತಿ ವರ್ಷ 1.4 ಮಿಲಿಯನ್ ಮಂದಿ ತಂಬಾಕು ಬಳಕೆಯಿಂದ ಸಾವನ್ನಪ್ಪುತ್ತಾರೆ. ಕ್ರಿಕೆಟಿಗರು ಯುವಕರಿಗೆ ಮಾದರಿಯಾಗಿರುವುದರಿಂದ, ಅವರು ಈ ಉತ್ಪನ್ನಗಳ ಪ್ರಚಾರ ಮಾಡಬಾರದು ಎಂದು ಕೇಂದ್ರ ಸರ್ಕಾರ ಕಠಿಣ ನಿರ್ಧಾರ ಕೈಗೊಂಡಿದೆ.

ಐಪಿಎಲ್ 2025 ಮಾರ್ಚ್ 22 ರಿಂದ ಮೇ 25ರವರೆಗೆ ನಡೆಯಲಿದ್ದು, ಒಟ್ಟು 74 ಪಂದ್ಯಗಳಿರುತ್ತವೆ. ಮೊದಲ ಪಂದ್ಯ ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ಕೆಕೆಆರ್ ಮತ್ತು RCB ನಡುವೆ ನಡೆಯಲಿದೆ.

ಈ ನಿರ್ಧಾರ ಮದ್ಯ ಮತ್ತು ತಂಬಾಕು ಕಂಪನಿಗಳಿಗೆ ಭಾರೀ ಆಘಾತವನ್ನುಂಟು ಮಾಡಿದೆ. ಆದರೆ, ಇದು ಸಾರ್ವಜನಿಕ ಆರೋಗ್ಯಕ್ಕಾಗಿ ತೆಗೆದುಕೊಂಡ ಮಹತ್ವದ ಹೆಜ್ಜೆಯಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page