back to top
30.6 C
Bengaluru
Thursday, February 26, 2026
HomeNewsIsrael ವಿರುದ್ಧ Iran ಗೆಲುವು; ಟ್ರಂಪ್‌ಗೆ ಖಮೇನಿ ತಿರುಗೇಟು

Israel ವಿರುದ್ಧ Iran ಗೆಲುವು; ಟ್ರಂಪ್‌ಗೆ ಖಮೇನಿ ತಿರುಗೇಟು

- Advertisement -
- Advertisement -

Tehran: ಇಸ್ರೇಲ್ ಮತ್ತು ಇರಾನ್ ನಡುವೆ ನಡೆದ 12 ದಿನಗಳ ಯುದ್ಧದ ನಂತರ ಇರಾನ್ ನ ಧರ್ಮಗುರು ಮತ್ತು ಸರ್ವೋಚ್ಚ ನಾಯಕ ಅಲಿ ಖಮೇನಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ್ದಾರೆ. ಇಸ್ರೇಲ್ (Israel) ವಿರುದ್ಧ ಇರಾನ್ ಗೆಲುವು ಸಾಧಿಸಿದೆ ಎಂದು ಅವರು ಘೋಷಿಸಿದರು.

ಯುದ್ಧದ ಸಮಯದಲ್ಲಿ ಇಸ್ರೇಲಿ ಸೇನೆ ಟೆಹ್ರಾನ್ ಮೇಲೆ ದಾಳಿ ಮಾಡಿದ ನಂತರ ಖಮೇನಿ ಅವರು ರಹಸ್ಯ ಸ್ಥಳದಲ್ಲಿ ಆಶ್ರಯ ಪಡೆದಿದ್ದರು. ನಂತರ ಅಮೆರಿಕ, ಇಸ್ರೇಲ್ನ ಬೆಂಬಲಕ್ಕಾಗಿ ಯುದ್ಧಕ್ಕೆ ಸೇರ್ಪಡೆಯಾಯಿತು. ಆದರೆ, ಟ್ರಂಪ್ ನೇತೃತ್ವದ ಅಮೆರಿಕ ಯಾವುದೇ ಯಶಸ್ಸು ಕಂಡಿಲ್ಲವೆಂದು ಖಮೇನಿ ಹೇಳಿದರು.

“ಅಮೆರಿಕ ನೇರವಾಗಿ ಯುದ್ಧಕ್ಕೆ ಇಳಿಯಿತು. ಆದರೆ, ನಮ್ಮ ಇರಾನ್ ದೇಶವು ಅವರಿಗೆ ತಕ್ಕ ಉತ್ತರ ನೀಡಿದೆ. ಅವರು ಯಾವ ಸಾಧನೆಯನ್ನೂ ಮಾಡಲಿಲ್ಲ,” ಎಂದು ಖಮೇನಿ ಎಕ್ಸ್ (ಹಳೆಯ ಟ್ವಿಟ್ಟರ್)ನಲ್ಲಿ ಪ್ರಕಟಿಸಿರುವ ಸಂದೇಶಗಳಲ್ಲಿ ತಿಳಿಸಿದ್ದಾರೆ.

ಇರಾನ್, ಅಮೆರಿಕದ ಪ್ರಮುಖ ಸೇನಾ ನೆಲೆ ಅಲ್-ಉದೈದ್ ವಾಯುನೆಲೆಯ ಮೇಲೆ ದಾಳಿ ನಡೆಸಿ, ದೊಡ್ಡ ನಷ್ಟಕ್ಕೆ ಕಾರಣವಾಯಿತು ಎಂದು ಖಮೇನಿ ಹೇಳಿದರು. ಮತ್ತೆ ಇರಾನ್ ಮೇಲೆ ದಾಳಿ ಮಾಡಿದರೆ ಅಮೆರಿಕ ದೊಡ್ಡ ಬೆಲೆ ಕಟ್ಟಬೇಕಾಗುತ್ತದೆ ಎಂದು ಅವರು ಎಚ್ಚರಿಸಿದರು.

ಇತ್ತ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿನ ವಾರ ಇರಾನ್ ಅಧಿಕಾರಿಗಳ ಜೊತೆ ಮಾತುಕತೆ ನಡೆಯಲಿವೆ ಎಂದು ಹೇಳಿದ್ದಾರೆ. ತಾವು ಶಾಂತಿಯತ್ತ ಹೆಜ್ಜೆ ಹಾಕಲು ಆಸಕ್ತಿ ಹೊಂದಿದ್ದಾರೆ ಎಂದು ಸೂಚನೆ ನೀಡಿದರೂ, ಪರಮಾಣು ಯೋಜನೆ ತ್ಯಜಿಸುವ ಪ್ರಶ್ನೆಯೇ ಇಲ್ಲ ಎಂದು ಟೆಹ್ರಾನ್ ಸ್ಪಷ್ಟಪಡಿಸಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page