Search
WhatsApp alerts

Home › Health

Kidney ಆರೋಗ್ಯಕ್ಕೆ ನೀರು ಮಾತ್ರ ಸಾಕೇ?

administrator · Published

Kidney

ದೇಹದಲ್ಲಿನ ಕಲ್ಮಶವನ್ನು ಹೊರಹಾಕುವ ಕಿಡ್ನಿ (kidney) ಸರಿಯಾಗಿ ಕಾರ್ಯನಿರ್ವಹಿಸಲು ಸೂಕ್ತ ಪ್ರಮಾಣದಲ್ಲಿ ನೀರಿನ ಸೇವನೆ ಅತ್ಯಗತ್ಯ. ಆದರೆ ಇದೊಂದೆ ಮಾರ್ಗವಲ್ಲ. ಸಮತೋಲಿತ ಆಹಾರ ಸೇವನೆ, ನಿಯಮಿತ ವ್ಯಾಯಾಮ, ಶಿಸ್ತುಬದ್ಧ ಜೀವನಶೈಲಿ ಕೂಡ ಅಷ್ಟೇ ಮುಖ್ಯ.

ಕಿಡ್ನಿ ಆರೋಗ್ಯದಲ್ಲಿ ನೀರಿನ ಮಹತ್ವ: ಕಿಡ್ನಿಯು ದೇಹದಲ್ಲಿ ನೀರು, ಉಪ್ಪು ಹಾಗೂ ರಕ್ತದೊತ್ತಡವನ್ನು ಸರಿಹೊಂದಿಸಲು ಮಹತ್ವಪೂರ್ಣ ಕೆಲಸವನ್ನು ಮಾಡುತ್ತದೆ. ಆದರೆ ಕಿಡ್ನಿಯ ಆರೋಗ್ಯವನ್ನು ಕಾಪಾಡಲು ನೀರಿನೊಂದಿಗೆ ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ ಮತ್ತು ಶಿಸ್ತುಬದ್ಧ ಜೀವನಶೈಲಿಯೂ ಅಗತ್ಯವಿದೆ.

ಬೊಜ್ಜು ಮತ್ತು ಕಿಡ್ನಿ ವೈಫಲ್ಯ: ಬೊಜ್ಜು (ಒಬೆಸಿಟಿ) ಕಿಡ್ನಿ ವೈಫಲ್ಯಕ್ಕೆ ಕಾರಣವಾಗಬಹುದು. ಬೊಜ್ಜುಗಳಿಂದ ಬಳಲುತ್ತಿರುವವರು ಕಿಡ್ನಿ ಆರೋಗ್ಯವನ್ನು ಎಚ್ಚರಿಕೆಯಿಂದ ನೋಡಿಕೊಳ್ಳಬೇಕಾಗಿದೆ.

ಕಿಡ್ನಿ ಸ್ಟೋನ್ ಮತ್ತು ಜೀವನಶೈಲಿ

  • ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ರೆ, ಕಲ್ಲುಗಳು ಮೂತ್ರಪಿಂಡದಲ್ಲಿ ರೂಪುಗೊಳ್ಳಬಹುದು.
  • ಉಪ್ಪು ಮತ್ತು ಪ್ರೋಟೀನ್ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ, ಕಲ್ಲು ರಚನೆಗೆ ಕಾರಣವಾಗುತ್ತದೆ.
  • ದೈಹಿಕ ವ್ಯಾಯಾಮ ಇಲ್ಲದಿದ್ದರೆ, ಬೊಜ್ಜು ಹೊತ್ತೀತು ಮತ್ತು ಇದು ಕಿಡ್ನಿ ಸಮಸ್ಯೆಗೆ ಕಾರಣವಾಗಬಹುದು.
  • ಸಕ್ಕರೆ ಹೆಚ್ಚಿದ ಆಹಾರ ಮತ್ತು ಸೋಡೀಯಮ್ ಕೂಡ ಕಿಡ್ನಿ ಸ್ಟೋನಿಗೆ ಕಾರಣವಾಗಬಹುದು.
  • ಹಸಿರು ತರಕಾರಿ ಮತ್ತು ಹಣ್ಣುಗಳನ್ನು ಸೇವನೆ ಮಾಡುವುದು ಕಿಡ್ನಿ ಆರೋಗ್ಯಕ್ಕೆ ಉತ್ತಮ.
  • ಕಿಡ್ನಿ ಸ್ಟೋನ್ ಗಂಡಸರಿಗೆ ಮಾತ್ರವೇ?
  • ಇದು ತಪ್ಪು. ಗಂಡಸರಲ್ಲಿ ಅಧಿಕ ಪ್ರಮಾಣದಲ್ಲಿ ಕಿಡ್ನಿ ಸ್ಟೋನ್ ಕಂಡುಬಂದರೂ, ಮಹಿಳೆಯರಿಗೂ ಇದು ಸಮಸ್ಯೆಯಾಗಬಹುದು.
  • ಹಾಲು ಮತ್ತು ಹಾಲಿನ ಉತ್ಪನ್ನಗಳಿಂದ ಕಿಡ್ನಿ ಸಮಸ್ಯೆ?
  • ಇದು ಸುಳ್ಳು. ಹಾಲಿನ ಉತ್ಪನ್ನಗಳು ಕಿಡ್ನಿ ಆರೋಗ್ಯಕ್ಕಾಗಿ ಉತ್ತಮ.
  • ಒಮ್ಮೆ ಕಿಡ್ನಿ ಸ್ಟೋನ್ ಆದರೆ, ಅದು ಮತ್ತೆ ಬರಬಹುದು?
  • ಇದು ತಪ್ಪು. ಸರಿಯಾದ ಆಹಾರ, ಹೈಡ್ರೇಟ್ ಆಗಿರಲು, ಮತ್ತು ನಿಯಮಿತ ತಪಾಸಣೆ ಮೂಲಕ ಕಿಡ್ನಿ ಸ್ಟೋನ್ ಮರುಕಳಿಸಲು ತಡೆಹಿಡಿಯಬಹುದು.

ಸೂಚನೆ: ಇಲ್ಲಿರುವ ವಿಷಯಗಳು ಮಾಹಿತಿಗಾಗಿ ಮಾತ್ರ. ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳಿದ್ದ ಸಂದರ್ಭದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

For Daily Updates WhatsApp ‘HI’ to 7406303366

Read next

ಹೃದಯದ ಆರೋಗ್ಯ ಕಾಪಾಡಿ: ವಿಶ್ವ ಹೃದಯ ದಿನದಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೇತನ್ ಕಿವಿಮಾತು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ

ಹಿರಿಯ ನಾಗರಿಕರ ಕುಂದುಕೊರತೆ ಪರಿಹಾರಕ್ಕೆ ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ಕೆಎಸ್‌ಆರ್‌ಟಿಸಿಯಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

You cannot copy content of this page