Home News Hezbollah ಕಮಾಂಡರ್ ವಶಕ್ಕೆ ಪಡೆದ Israel

Hezbollah ಕಮಾಂಡರ್ ವಶಕ್ಕೆ ಪಡೆದ Israel

Israel Captures Hezbollah Commander

Tel Aviv: ದಕ್ಷಿಣ ಲೆಬನಾನ್‌ನಲ್ಲಿ (Lebanon) ನಡೆಯುತ್ತಿರುವ ಸೇನಾ ಕಾರ್ಯಾಚರಣೆಯಲ್ಲಿ ಇಸ್ರೇಲಿ (Israel) ಸೇನೆಯು ಹಿಜ್ಬುಲ್ಲಾ ಕಮಾಂಡರ್ ಹಸನ್ ಅಕಿಲ್ ಜವಾದ್‌ನನ್ನು (Hezbollah commander Hassan Akil Jawad) ವಶಪಡಿಸಿಕೊಂಡಿದೆ.

ಎರಡು ವಾರಗಳ ಹಿಂದೆ ಐತಾ ಆಶ್-ಶಬ್‌ನಲ್ಲಿ IDF ಕಾರ್ಯಾಚರಣೆಯನ್ನು ಪ್ರಾರಂಭಿಸಿದ ನಂತರ ಈ ಮಹತ್ವದ ಮುನ್ನಡೆಯು ಬಂದಿದೆ.

ಗುಪ್ತಚರ ವರದಿಯನ್ನು ಅನುಸರಿಸಿ ಇಸ್ರೇಲ್ ಸೇನೆ ಈ ಕಾರ್ಯಾಚರಣೆ ನಡೆಸಿದ್ದು, ಸೈನಿಕರು ಜವಾದ್ ಮತ್ತು ಇತರ ಕಾರ್ಯಕರ್ತರನ್ನು ಹೆಜ್ಬುಲ್ಲಾ ಕಮಾಂಡ್ ಸೆಂಟರ್‌ನ ಸುರಂಗದಲ್ಲಿ ವಶಕ್ಕೆ ಪಡೆಯುತ್ತಿರುವ ವಿಡಿಯೋವನ್ನು ಅಪ್ಲೋಡ್ ಮಾಡಿದೆ. ಹೆಜ್ಬೊಲ್ಲಾ ಆಪರೇಟಿವ್‌ಗಳು ಶರಣಾಗುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಸದ್ಯ ಜಾವಾದ್‌ನನ್ನು ಗುಪ್ತಚರ ನಿರ್ದೇಶನಾಲಯದ ಘಟಕ 504ರಿಂದ ವಿಚಾರಣೆ ನಡೆಸಲಾಗುತ್ತಿದ್ದು, ಹೆಚ್ಚಿನ ವಿಚಾರಣೆಗಾಗಿ ಇಸ್ರೇಲ್‌ಗೆ ಕರೆತರಲಾಗಿದೆ.

ಅಂತೆಯೇ ದಕ್ಷಿಣ ಲೆಬನಾನ್‌ನಲ್ಲಿ ಇತ್ತೀಚಿನ ಕಾರ್ಯಾಚರಣೆಗಳಲ್ಲಿ ಹಲವಾರು ಇತರ ಹಿಜ್ಬುಲ್ಲಾ ಕಾರ್ಯಕರ್ತರನ್ನು ಸಹ ಬಂಧಿಸಲಾಗಿದೆ. ಸುರಂಗದಲ್ಲಿ ಕಂಡುಬಂದ ಸುಮಾರು ಅರ್ಧ ಟನ್ ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು IDF ವರದಿ ಮಾಡಿದೆ.

For Daily Updates WhatsApp ‘HI’ to 7406303366

NO COMMENTS

LEAVE A REPLY

Please enter your comment!
Please enter your name here

You cannot copy content of this page

Exit mobile version