back to top
18.4 C
Bengaluru
Wednesday, January 14, 2026
HomeNewsIsrael-Iran ಉದ್ವಿಗ್ನತೆ: Tehran ನಿಂದ 110 ಭಾರತೀಯ ವಿದ್ಯಾರ್ಥಿಗಳಿಗೆ ಸುರಕ್ಷಿತ ಸ್ಥಳಾಂತರ

Israel-Iran ಉದ್ವಿಗ್ನತೆ: Tehran ನಿಂದ 110 ಭಾರತೀಯ ವಿದ್ಯಾರ್ಥಿಗಳಿಗೆ ಸುರಕ್ಷಿತ ಸ್ಥಳಾಂತರ

- Advertisement -
- Advertisement -

New Delhi: ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನ (Israel-Iran tensions) ಪರಿಸ್ಥಿತಿಯಲ್ಲಿ ಟೆಹ್ರಾನ್ ನಲ್ಲಿ  ಸಿಲುಕಿರುವ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗುತ್ತಿದೆ. ಪ್ರಥಮ ಹಂತದಲ್ಲಿ 110 ಭಾರತೀಯ ವಿದ್ಯಾರ್ಥಿಗಳನ್ನು ಅರ್ಮೇನಿಯಾಗೆ ಕಳುಹಿಸಲಾಗಿದೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, ಭಾರತೀಯ ರಾಯಭಾರಿ ಕಚೇರಿ ಸಹಾಯದಿಂದ ಈ ಸ್ಥಳಾಂತರ ನಡೆದಿದೆ. ಟೆಹ್ರಾನ್ನಿಂದ ಈಗಾಗಲೇ 11 ಭಾರತೀಯರನ್ನು ಸ್ಥಳಾಂತರಿಸಲಾಗಿದೆ. ಇರಾನ್ ನ ಅಧಿಕಾರಿಗಳ ಸಹಕಾರದೊಂದಿಗೆ ಈ ಕಾರ್ಯ ಚುರುಕಾಗಿ ನಡೆಯುತ್ತಿದೆ.

ಜಮ್ಮು ಮತ್ತು ಕಾಶ್ಮೀರ ವಿದ್ಯಾರ್ಥಿ ಸಂಘದ ಮಾಹಿತಿಯಂತೆ, ಇರಾನ್ನ ಉರ್ಮಿಯಾ ವೈದ್ಯಕೀಯ ಕಾಲೇಜಿನಲ್ಲಿ 110 ಭಾರತೀಯ ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅವರಲ್ಲಿ ಬಹುಪಾಲು ಕಾಶ್ಮೀರದಿಂದ ಬಂದವರು. ಇವರು ಈಗ ಎಲ್ಲಾ ಸುರಕ್ಷಿತವಾಗಿ ಅರ್ಮೇನಿಯಾ ಗಡಿ ದಾಟಿದ್ದಾರೆ.

ಭಾರತ ಸರ್ಕಾರ ತುರ್ತು ಸಹಾಯವಾಣಿ ನಂಬರ್‌ಗಳನ್ನು ನೀಡಿದೆ. ಟೆಹ್ರಾನ್ ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಈ ಸಂಖ್ಯೆಗಳ ಮೂಲಕ ಸಂಪರ್ಕಿಸಿ ನೆರವು ನೀಡುತ್ತಿದೆ,

  • ಟೋಲ್ ಫ್ರೀ: 1800-11-8797
  • ದೆಹಲಿ ಕಚೇರಿ: +91-11-23012113, 23014104, 23017905
  • ವಾಟ್ಸಪ್ ಸಹಾಯ: +91-9968291988
  • ಇಮೇಲ್: situationroom@mea.gov.in
  • ಟೆಹ್ರಾನ್ ಕಚೇರಿ: +98 9128109115, +98 9128109109
  • ವಾಟ್ಸಪ್: +98 901044557, +98 9015993320, +91 8086871709
  • ಪ್ರಾದೇಶಿಕ ಸಂಪರ್ಕಗಳು: +98 9177699036 (ಬಂಧರ್ ಅಬ್ಬಾಸ್), +98 9396356649 (ಜಹೇದನ್)
  • ಇಮೇಲ್: cons.tehran@mea.gov.in

ಇದೀಗ ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ 400ಕ್ಕೂ ಹೆಚ್ಚು ಮಂದಿ ಇರಾನ್ ನಲ್ಲಿ, ಮತ್ತು 24 ಮಂದಿ ಇಸ್ರೇಲ್ ನಲ್ಲಿ ಸಾವಿಗೀಡಾಗಿದ್ದಾರೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page