Jerusalem: ಇಸ್ರೇಲ್ (Israel) ಸೇನೆ ಇಂದು ಬೆಳಿಗ್ಗೆ ಇರಾನ್ (Iran) ದೇಶದ ಪರಮಾಣು ಕೇಂದ್ರಗಳ ಮೇಲೆ ಅಪ್ರತೀಕ್ಷಿತವಾಗಿ ದಾಳಿ ನಡೆಸಿದೆ. ಇರಾನ್‌ನ ರಾಜಧಾನಿ ಟೆಹ್ರಾನ್ ಸೇರಿದಂತೆ ಹಲವೆಡೆ ಬಾಂಬ್ ಸ್ಫೋಟದ ಶಬ್ದ ಕೇಳಿಬಂದಿದೆ. ಈ ದಾಳಿಯಲ್ಲಿ ಕೆಲವು ಪರಮಾಣು ವಿಜ್ಞಾನಿಗಳು ಹಾಗೂ ಸೇನೆಯ ಉನ್ನತ ಅಧಿಕಾರಿಗಳು ಮೃತಪಟ್ಟಿದ್ದಾರೆ ಎಂಬ ಸುದ್ದಿ ಬಂದಿದೆ.
ಇಸ್ರೇಲ್ ಪ್ರಧಾನಿ ನೆತನ್ಯಾಹು ಮಾತನಾಡಿ, “ಇರಾನ್ ಪರಮಾಣು ಯೋಜನೆ ನಾವು ಸೈದ್ಧಾಂತರವಾಗಿ ಸಹಿಸುವುದಿಲ್ಲ. ನಮ್ಮ ಸೇನೆ ಇದನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ. ಇನ್ನೂ ದಾಳಿ ಮುಂದುವರಿಯುತ್ತದೆ,” ಎಂದು ತಿಳಿಸಿದ್ದಾರೆ. ದಾಳಿಯಿಂದ ಬಳಿಕ ಇಸ್ರೇಲ್ ತನ್ನ ವಾಯುಮಾರ್ಗಗಳನ್ನು ತಾತ್ಕಾಲಿಕವಾಗಿ ಮುಚ್ಚಿದೆ.
ಇತ್ತೀಚೆಗಷ್ಟೇ ಇರಾನ್ ಪರಮಾಣು ಶಸ್ತ್ರಾಸ್ತ್ರ ಅಭಿವೃದ್ಧಿಗೆ ಗಂಭೀರವಾಗಿ ಮುಂದಾಗುತ್ತಿದೆ ಎಂಬ ವರದಿಗಳು ಹರಡಿದ್ದವು. ಇದರ ಬೆನ್ನಲ್ಲೇ ಇಸ್ರೇಲ್ ಈ ದಾಳೆಗೆ ಮುಂದಾಗಿದೆ.
ಇರಾನ್ ತನ್ನ ಮೇಲೆ ದಾಳಿ ನಡೆದರೆ ತಿರುಗೇಟು ನೀಡುವುದಾಗಿ ಹಿಂದೆಯೇ ಎಚ್ಚರಿಕೆ ನೀಡಿದ್ದರೆ, ಈಗ ಈ ಹೊಸ ಪರಿಸ್ಥಿತಿಯಲ್ಲಿ ಇರಾನ್ ಯಾವುದೇ ಹೊಡೆತಕ್ಕೆ ಮುಂದಾಗಬಹುದು ಎಂಬ ಆತಂಕ ಇಸ್ರೇಲ್‌ನ್ನು ಕಾಡುತ್ತಿದೆ. ಈ ಬೆನ್ನಲ್ಲೇ ಇಸ್ರೇಲ್ ರಕ್ಷಣಾ ಸಚಿವ ಕಾಟ್ಜ್ ತುರ್ತು ಪರಿಸ್ಥಿತಿಗೆ ಸಿದ್ಧತೆ ಕೈಗೊಂಡಿದ್ದು, ವಿಶೇಷ ಆದೇಶಕ್ಕೂ ಸಹಿ ಹಾಕಿದ್ದಾರೆ.