ಬೈರೂತ್: ಲೆಬನಾನ್ನಲ್ಲಿ (Lebanon)ನಡೆದ ಪೇಜರ್ ದಾಳಿಯಿಂದ ಹಿಜ್ಬುಲ್ಲಾ (Hezbollah) ಮಾತ್ರವಲ್ಲದೆ ಇಡೀ ವಿಶ್ವವೇ ಬೆಚ್ಚಿಬಿದ್ದಿದೆ. ಸಣ್ಣದಾಗಿ ಕಾಣುವ ಪೇಜರ್ ಅನ್ನು ಬಾಂಬ್ ಆಗಿ ಬಳಸಬಹುದೇ ಎಂಬುದೇ?!. Israel ಈ ಘಟನೆಯನ್ನು ಒಪ್ಪಿಕೊಳ್ಳದಿದ್ದರೂ, ಯುದ್ಧದ ನಡುವೆ, ಇಸ್ರೇಲ್ ಹೊರತುಪಡಿಸಿ ಬೇರೆ ಯಾವುದೇ ದೇಶವು ಈ ಕೃತ್ಯವನ್ನು ನಡೆಸಲು ಸಾಧ್ಯವಿಲ್ಲ ಎಂಬುದು ಇಡೀ ಜಗತ್ತಿಗೇ ತಿಳಿದಿದೆ. ಲೆಬನಾನ್ನಲ್ಲಿ ಹಿಜ್ಬುಲ್ಲಾಗಳು ಬಳಸುತ್ತಿದ್ದ ಪೇಜರ್ಗಳ ಸ್ಫೋಟ ಬೆನ್ನಲ್ಲೇ ಅವರ ವಾಕಿ-ಟಾಕಿಗಳು (walkie-talkies) ಕೂಡ ಸ್ಫೋಟಗೊಂಡಿದ್ದು 20ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ಈ ಕೃತ್ಯದ ಹಿಂದೆ ಇಸ್ರೇಲ್‌ನ ಬೇಹುಗಾರಿಕಾ ಸಂಘಟನೆ ಮೊಸಾದ್‌ನ ಘಟಕವಾದ ‘ಯುನಿಟ್ 8200’ ಯ ಪಾತ್ರವಿದೆ ಎಂದು ಶಂಕಿಸಲಾಗಿದೆ. ಯುನಿಟ್ 8200 ಇಸ್ರೇಲ್ನ ಅತ್ಯಂತ ರಹಸ್ಯ ಮಿಲಿಟರಿ ಘಟಕವಾಗಿದೆ. ಇದು ಇಸ್ರೇಲ್ ಡಿಫೆನ್ಸ್ ಫೋರ್ಸ್ (IDF) ಭಾಗವಾಗಿದೆ. ಇದನ್ನು ಅತ್ಯಂತ ಹೈಟೆಕ್ ಘಟಕ ಎಂದು ಕರೆಯಲಾಗುತ್ತದೆ. ಸೈಬರ್ ದಾಳಿಯಿಂದ ಇಸ್ರೇಲ್ ಅನ್ನು ರಕ್ಷಿಸಲು ಇದು ಕೆಲಸ ಮಾಡುತ್ತದೆ. ಇದು ತಂತ್ರಜ್ಞಾನದ ಮೂಲಕ ಗುಪ್ತಚರ ಮಾಹಿತಿಯನ್ನು ಸಂಗ್ರಹಿಸುತ್ತದೆ.
ಈಗ ಹಿಜ್ಬುಲ್ಲಾದ (Hezbollah) ನಾಯಕರಿಗೆ ಅವರು ಯಾವ ಎಲೆಕ್ಟ್ರಾನಿಕ್ ಸಾಧನಗಳನ್ನು ಮುಟ್ಟಬೇಕು ಮತ್ತು ಯಾವುದರಿಂದ ದೂರವಿರಬೇಕು ಎಂಬುದು ಅರ್ಥವಾಗುತ್ತಿಲ್ಲ. ಘಟನೆಯಲ್ಲಿ ಗಾಯಾಳುಗಳ ಕಣ್ಣಿಗೆ ತೀವ್ರ ಪೆಟ್ಟಾಗಿದ್ದು, ಬೆರಳುಗಳು ದೇಹದಿಂದ ಬೇರ್ಪಟ್ಟಿವೆ ಎಂದು ವೈದ್ಯರು ಹೇಳಿದ್ದಾರೆ. ದಾಳಿಗಳ ಹಿಂದೆ ಇಸ್ರೇಲ್ ಕೈವಾಡವಿರುವ ಬಗ್ಗೆ ಆರೋಪ ಕೇಳಿಬಂದಿದೆ. ಇಸ್ರೇಲ್ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳುವುದಾಗಿ ಹಿಜ್ಬುಲ್ಲಾ ಎಚ್ಚರಿಕೆ ನೀಡಿದೆ. ಇಸ್ರೇಲ್ ವಿರುದ್ಧ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಲೆಬನಾನ್ ದೂರು ನೀಡಿದೆ. ಮೃತರದಲ್ಲಿ ಇಬ್ಬರು ಹಿಜ್ಬುಲ್ಲಾ ಸದಸ್ಯರು, ಸಂಸದರೊಬ್ಬರ ಪುತ್ರ ಕೂಡ ಸೇರಿದ್ದಾನೆ.