ಗಾಜಾ ನಗರದಲ್ಲಿ ಇಸ್ರೇಲ್ ಸೋಮವಾರ ವೈಮಾನಿಕ ದಾಳಿ ನಡೆಸಿದ್ದು, ಬಹುಮಹಡಿ ಕಟ್ಟಡಗಳು ಟಾರ್ಗೆಟ್ ಆಗಿವೆ. ಹಮಾಸ್ ವಶದಲ್ಲಿರುವ 12 ಅಂತಸ್ತಿನ ಕಟ್ಟಡವನ್ನು ಬಾಂಬ್ ಹಾರಿಸಲಾಗಿದೆ.
ಕಳೆದ 24 ಗಂಟೆಗಳಲ್ಲಿ ಈ ದಾಳಿಯಲ್ಲಿ 65 ಜನ ಸಾವು ಹೊಂದಿದ್ದು, 320 ಜನ ಗಾಯಗೊಂಡಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವರು ತಿಳಿಸಿದ್ದಾರೆ. ದಾಳಿ ನಡೆಯುವ ಮುನ್ನ, ಗಾಜಾ ನಗರದ ಸುಮಾರು 10 ಲಕ್ಷ ನಿವಾಸಿಗಳಿಗೆ ಸ್ಥಳ ತೊರೆಯುವಂತೆ ಸೂಚಿಸಲಾಗಿತ್ತು. ತಜ್ಞರು ಗಾಜಾದಲ್ಲಿ ಭೀಕರ ಕ್ಷಾಮ ತಲೆದೋರಿದ್ದಾಗಿ ಆತಂಕ ವ್ಯಕ್ತಪಡಿಸಿದ್ದಾರೆ.
ಜೆರುಸೆಲ್ಮ್‌ನಲ್ಲಿ ಇಬ್ಬರು ಪ್ಯಾಲೆಸ್ತೇನಿಯನ್ ಬಂದೂಕುಧಾರಿಗಳು ಬಸ್ ನಿಲ್ದಾಣದಲ್ಲಿ ದಾಳಿ ನಡೆಸಿದ್ದು, 6 ಜನ ಸಾವು ಹೊಂದಿದ್ದಾರೆ ಮತ್ತು 12ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.
ಸೋಮವಾರ, ಗಾಜಾ ನಗರದಲ್ಲಿ ಉಗ್ರರು ಟ್ಯಾಂಕ್ ಮೇಲೆ ಸ್ಫೋಟಕ ಸಾಧನ ಎಸಿದ ಪರಿಣಾಮ 4 ಸೈನಿಕರು ಸಾವನ್ನಪ್ಪಿದ್ದಾರೆ. ನಂತರ ನಡೆದ ಗುಂಡಿನ ಚಕಮಕಿಯಲ್ಲಿ ಇನ್ನೊಬ್ಬ ಸೈನಿಕ ಗಾಯಗೊಂಡಿದ್ದಾರೆ.
ಇಸ್ರೇಲ್ ಹಮಾಸ್‌ನ ಬಹುತೇಕ ಪ್ರಮುಖ ನಾಯಕರನ್ನು ಹತ್ಯೆಗೈದು ಸೇನಾ ಸಾಮರ್ಥ್ಯವನ್ನು ನಾಶಪಡಿಸಿದೆ. ಆದರೆ, ಉಗ್ರ ಗುಂಪುಗಳು ಗುಂಪಾಗಿ ಗೆರಿಲ್ಲಾ ರೀತಿಯ ದಾಳಿಗಳನ್ನು ಮುಂದುವರೆಸುತ್ತಿವೆ. 450ಕ್ಕೂ ಹೆಚ್ಚು ಇಸ್ರೇಲಿ ಪಡೆಗಳು ಕೊಲ್ಲಲ್ಪಟ್ಟಿವೆ.
ಟ್ರಂಪ್ ಅವರ ಮಧ್ಯಪ್ರಾಚ್ಯ ರಾಯಭಾರಿ ಸ್ಟೀವ್ ವಿಟ್ಕಾಫ್ಕೊ ಯುದ್ಧವನ್ನು ಮಾತುಕತೆಯಿಂದ ನಿಲ್ಲಿಸಲು, ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಮತ್ತು ಗಾಜಾದಿಂದ ಇಸ್ರೇಲಿ ಪಡೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ಎಚ್ಚರಿಕೆ ನೀಡಿದ್ದಾರೆ.
- ಹಮಾಸ್‌ನ ಹಿರಿಯ ಅಧಿಕಾರಿ ಬಾಸ್ಸೆಮ್ ನಯೀಮ್ ಈ ಪ್ರಸ್ತಾವವನ್ನು ತಿರಸ್ಕರಿಸಿದ್ದಾರೆ.
- ಎಲ್ಲಾ ಒತ್ತೆಯಾಳುಗಳನ್ನು ಬಿಡುಗಡೆ ಮಾಡಬೇಕು.
- ಹಮಾಸ್ ನಿಶ್ಯಸ್ತ್ರಗೊಳಿಸಲು ಯತ್ನಿಸಲಾಗಿದೆ
- ಇಸ್ರೇಲಿ ಪಡೆಗಳನ್ನು ಹಿಂತೆಗೆದುಕೊಳ್ಳುವ ಷರತ್ತುಗಳನ್ನು ಮಾತ್ರ ಒಪ್ಪಲಾಗುವುದಿಲ್ಲ







