back to top
27 C
Bengaluru
Wednesday, September 17, 2025
HomeNewsISRO: Automatic Siren ಗಳಿಂದ ಮಿಂಚು ಮತ್ತು ಪ್ರವಾಹದಿಂದ ರಕ್ಷಣೆ

ISRO: Automatic Siren ಗಳಿಂದ ಮಿಂಚು ಮತ್ತು ಪ್ರವಾಹದಿಂದ ರಕ್ಷಣೆ

- Advertisement -
- Advertisement -

ಆಂಧ್ರಪ್ರದೇಶ ಸರ್ಕಾರವು ನಾಗರಿಕರನ್ನು ಮಿಂಚು ಮತ್ತು ಪ್ರವಾಹದಿಂದ ರಕ್ಷಿಸಲು ಗ್ರಾಮಗಳಲ್ಲಿ ಆಟೋಮೆಟಿಕ್ ಸೈರನ್ ಗಳನ್ನು (Automatic siren) ಅಳವಡಿಸುತ್ತಿದೆ. ಒಂದು ಹಳ್ಳಿಯಲ್ಲಿ ನಡೆದ ಪ್ರಯೋಗ ಉತ್ತಮ ಫಲಿತಾಂಶ ನೀಡಿದೆ.

ಈ ಸೈರನ್ ಗಳು ಮೊಬೈಲ್ ಸಿಗ್ನಲ್ ಇಲ್ಲದೆಯೂ ಕೆಲಸ ಮಾಡುತ್ತವೆ. ರಿಯಲ್ ಟೈಮ್ ಗವರ್ನನ್ಸ್ ಕಾರ್ಯದರ್ಶಿ ಕಟಮ್ನೇನಿ ಭಾಸ್ಕರ್ ಅವರು ಇಸ್ರೋ ಉಪಗ್ರಹ ಬೆಂಬಲಕ್ಕೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ರಾಜ್ಯಾದ್ಯಂತ ಅನುಷ್ಠಾನಕ್ಕೆ ಸುಮಾರು 340 ಕೋಟಿ ರೂ. ಬೇಕಾಗುತ್ತದೆ. ಮೊದಲ ಹಂತದಲ್ಲಿ ಸೂಕ್ಷ್ಮ ಗ್ರಾಮಗಳಿಗೆ 10–15 ಕೋಟಿ ರೂ. ವೆಚ್ಚದಲ್ಲಿ ಆದ್ಯತೆ ನೀಡಲಾಗುವುದು. ಒಂದು ವ್ಯವಸ್ಥೆಯ ವೆಚ್ಚ ಸುಮಾರು 2 ಲಕ್ಷ ರೂ.ಗಳಷ್ಟಾಗುತ್ತದೆ.

RTGS ಅವೇರ್ 2.0 ಮೂಲಕ ನಾಗರಿಕರಿಗೆ ಮಿಂಚು, ಚಂಡಮಾರುತ, ಪ್ರವಾಹ ಮತ್ತು ಹವಾಮಾನ ಬದಲಾವಣೆಯ ಕುರಿತು ನಿರಂತರ ಎಚ್ಚರಿಕೆ ನೀಡಲಾಗುತ್ತಿದೆ. ವಿಭಾಗೀಯ ಹಂತದವರೆಗೂ ರಿಯಲ್-ಟೈಂ ಮುನ್ಸೂಚನೆ ಲಭ್ಯವಿದೆ.

ಡೌನ್ ಟು ಅರ್ಥ್ ವರದಿ ಪ್ರಕಾರ, ಈ ವರ್ಷದ ಮಾರ್ಚ್-ಏಪ್ರಿಲ್ ನಲ್ಲಿ ದೇಶದ 12 ರಾಜ್ಯಗಳಲ್ಲಿ ಸಿಡಿಲಿನಿಂದ 165 ಜನರು ಸಾವನ್ನಪ್ಪಿದ್ದಾರೆ. ಬಿಹಾರದಲ್ಲಿ ಮಾತ್ರ 99 ಮಂದಿ ಸಾವನ್ನಪ್ಪಿದ್ದಾರೆ. ನಗರಗಳ ವೃದ್ಧಿ ಮತ್ತು ಜಾಗತಿಕ ತಾಪಮಾನ ಏರಿಕೆ ಕಾರಣದಿಂದ ಸಿಡಿಲಿನಿಂದ ಸಾವಿನ ಸಂಖ್ಯೆ ಹೆಚ್ಚುತ್ತಿದೆ.

ಕಳೆದ 20 ವರ್ಷಗಳಲ್ಲಿ ಭಾರತದಲ್ಲಿ ಪ್ರವಾಹ, ಭೂಕುಸಿತ, ಮಿಂಚು, ಮೇಘಸ್ಫೋಟದಿಂದ 547 ಕೋಟಿ ರೂ. ಹಾನಿ ಸಂಭವಿಸಿದೆ. ಪ್ರವಾಹದಿಂದ ಪ್ರತಿ ವರ್ಷ ಸರಾಸರಿ 5700 ಕೋಟಿ ರೂ. ನಷ್ಟ ಮತ್ತು 1700 ಜನರು ಸಾವನ್ನಪ್ಪುತ್ತಾರೆ.

ಕಳೆದ 10 ವರ್ಷಗಳಲ್ಲಿ ಮಳೆಗಾಲದಲ್ಲಿ 24 ಸಾವಿರ ಜನರು ಸಾವನ್ನಪ್ಪಿದ್ದಾರೆ. ಪ್ರಕೃತಿ ವಿಕೋಪಗಳಿಂದ ಪ್ರತಿ ವರ್ಷ ಸರಾಸರಿ 22.5 ಲಕ್ಷ ಜನರು ನಿರಾಶ್ರಿತರಾಗುತ್ತಾರೆ. 2015 ಕೇರಳದಲ್ಲಿ 15 ಲಕ್ಷ ಜನರು, 2018ರಲ್ಲಿ 27 ಲಕ್ಷ ಜನರು ನಿರಾಶ್ರಿತರಾಗಿದ್ದರು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page