Search
WhatsApp alerts

Home › India

ISRO ಅಮೆರಿಕದ ಉಪಗ್ರಹ ಉಡಾವಣೆಗೆ ಸಜ್ಜು

administrator · Published · Updated

ISRO SpaceX

New Delhi: ಇಸ್ರೋ, (ISRO) ವಿಶ್ವದ ವಾಣಿಜ್ಯ ಉಪಗ್ರಹ ಉಡ್ಡಯನ ವಲಯದಲ್ಲಿ ಮುಂಚೂಣಿಯ ಸಂಸ್ಥೆಯಾಗಿ ಹೊರಹೊಮ್ಮುತ್ತಿದೆ. ಇದುವರೆಗೆ ಅಮೆರಿಕ ಸೇರಿ ಹಲವು ದೇಶಗಳ ಸಣ್ಣಪುಟ್ಟ ಉಪಗ್ರಹಗಳನ್ನು ಹಾರಿಸಿದ ಇಸ್ರೋ, (ISRO) ಈಗ ಅಮೆರಿಕದ ಸಂವಹನ ಉಪಗ್ರಹ ಉಡಾವಣೆಗೆ ಮುಂದಾಗಿದೆ. ಈ ಉಪಗ್ರಹವನ್ನು ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಶ್ರೀಹರಿಕೋಟಾದಿಂದ ಉಡಾವಣೆ ಮಾಡಲಿದ್ದಾರೆ.

ಈ ಯೋಜನೆಯ ವಿಶೇಷವೆಂದರೆ, ಉಪಗ್ರಹದಿಂದ ಯಾವುದೇ ಟವರ್ ಗಳ ಅಗತ್ಯವಿಲ್ಲದೆ ನೇರವಾಗಿ ಮೊಬೈಲ್ ಕರೆಗಳನ್ನು ಮಾಡಲು ಸಾಧ್ಯವಾಗುತ್ತದೆ. ಇದರ ಮೂಲಕ ಬಾಹ್ಯಾಕಾಶಕ್ಕೂ ಮೊಬೈಲ್ ಸಂಪರ್ಕ ದೊರೆಯಲಿದೆ.

‘ಬ್ಲ್ಯೂ ಬರ್ಡ್’ ಹೆಸರಿನ ಈ ಉಪಗ್ರಹವನ್ನು ಟೆಕ್ಸಾಸ್ ಮೂಲದ AST ಸ್ಪೇಸ್ ಮೊಬೈಲ್ ಕಂಪನಿಯು ಅಭಿವೃದ್ಧಿಪಡಿಸಿದೆ. ಉಪಗ್ರಹ ಕಾರ್ಯಾಚರಣೆಯ ನಂತರ, ಭೂಮಿಯ ಯಾವುದೇ ಭಾಗದಿಂದ ಸುಲಭವಾಗಿ ಮೊಬೈಲ್ ಕರೆ ಮಾಡಬಹುದು. ಹೀಗಾಗಿ, ಸ್ಮಾರ್ಟ್‌ಫೋನ್ ಬಳಸಿ ಬಾಹ್ಯಾಕಾಶದಿಂದ ಭೂಮಿಗೆ ಕೂಡ ಕರೆ ಮಾಡಬಹುದಾಗಿದೆ.

ಈ ಉಪಗ್ರಹವು 6000 ಕೆಜಿ ತೂಕವನ್ನು ಹೊಂದಿದ್ದು, ಫುಟ್ಬಾಲ್ ಮೈದಾನದಷ್ಟು ವಿಸ್ತೀರ್ಣವನ್ನು ಹೊಂದಿದೆ. ಈ ಯಶಸ್ವಿಯಾದರೆ, ಇಂತಹ ಸಂಪರ್ಕವು ದುರ್ಗಮ ಪ್ರದೇಶಗಳಿಗೆ ಗುಣಮಟ್ಟದ 5ಜಿ ಸೇವೆ, ಶಿಕ್ಷಣ ಮತ್ತು ವೈದ್ಯಕೀಯ ಸೇವೆಗಳನ್ನು ಒದಗಿಸಬಹುದು.

ಸಾಧನೆ

  • ‘ಬ್ಲ್ಯೂ ಬರ್ಡ್’ ಎಂಬ ಉಪಗ್ರಹವನ್ನು AST ಕಂಪನಿಯು ಅಭಿವೃದ್ಧಿಪಡಿಸಿದೆ
  • ಉಪಗ್ರಹದಿಂದ ನೇರವಾಗಿ ಭೂಮಿಯ ಯಾವುದೇ ಭಾಗಕ್ಕೆ ಕರೆ ಮಾಡಬಹುದು
  • 5ಜಿ ಸೇವೆಗೂ ಅವಕಾಶವಿರುವ ಈ ಉಪಗ್ರಹ ಫೆಬ್ರವರಿ ಅಥವಾ ಮಾರ್ಚ್ ನಲ್ಲಿ ಉಡಾವಣೆಗೆ ಸಜ್ಜು.

For Daily Updates WhatsApp ‘HI’ to 7406303366

Read next

ಹೃದಯದ ಆರೋಗ್ಯ ಕಾಪಾಡಿ: ವಿಶ್ವ ಹೃದಯ ದಿನದಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೇತನ್ ಕಿವಿಮಾತು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ

ಹಿರಿಯ ನಾಗರಿಕರ ಕುಂದುಕೊರತೆ ಪರಿಹಾರಕ್ಕೆ ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ಕೆಎಸ್‌ಆರ್‌ಟಿಸಿಯಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

You cannot copy content of this page