Sriharikota: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತೊಂದು ಐತಿಹಾಸಿಕ ಸಾಧನೆಗೆ ಮುಂದಾಗಿದೆ. ಇಸ್ರೋ ತನ್ನ 100ನೇ ಯೋಜನೆ – GSLV ರಾಕೆಟ್ ನಭಕ್ಕೆ ಜಿಗಿಯಲು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ಇಸ್ರೋದ ನೂತನ ಅಧ್ಯಕ್ಷ ವಿ. ನಾರಾಯಣನ್ ಅವರ ನೇಮಕವಾದ ಬಳಿಕ ನಡೆದ ಮೊದಲ ಉಡಾವಣೆಯೂ ಇದೇ.
ಜಿಯೋಸಿಂಕ್ರೋನಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (GSLV) ತನ್ನ 17ನೇ ಉಡಾವಣೆಯಲ್ಲಿ ಸ್ವದೇಶಿ ಕ್ರಯೋಜೆನಿಕ್ ಮೇಲು ಹಂತದ NVS-2 ನ್ಯಾವಿಗೇಷನ್ ಉಪಗ್ರಹವನ್ನು ಹೊತ್ತೊಯ್ಯಲಿದೆ. ಬೆಳಗ್ಗೆ 6.23ಕ್ಕೆ ರಾಕೆಟ್ ಉಡಾವಣೆ ನಡೆಯಲಿದೆ.
2,250 ಕೆ.ಜಿ ತೂಕದ NVS-02 ಉಪಗ್ರಹವು ಯುಆರ್ ಸ್ಯಾಟಲೇಟ್ ಕೇಂದ್ರದಿಂದ ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ ಎಲ್1, ಎಲ್ 5 ಮತ್ತು ಎಸ್ ಬ್ಯಾಂಡ್‌ನ ಪೇಲೋಡ್‌ಗಳು ಇರುತ್ತವೆ. ಜೊತೆಗೆ, ಹೆಚ್ಚುವರಿ ಸಿ-ಬ್ಯಾಂಡ್ ಶ್ರೇಣಿಯ ಪೇಲೋಡ್‌ಗಳು ಇವೆ.
ಈ ಉಪಗ್ರಹವು ಭೂಮಿ, ವೈಮಾನಿಕ ಮತ್ತು ಸಮುದ್ರ ಸಂಚರಣೆ, ಮೊಬೈಲ್ ಸಾಧನಗಳಲ್ಲಿ ಸ್ಥಳ ಆಧಾರಿತ ಸೇವೆಗಳು, ಇಂಟರ್ನೆಟ್-ಆಫ್-ಥಿಂಗ್ಸ್ (IOT) ಆಧರಿತ ಅಪ್ಲಿಕೇಶನ್ ಗಳು, ಮತ್ತು ತುರ್ತು ಮತ್ತು ಸಮಯ ಸೇವೆಗಳನ್ನು ನೀಡಲಿದೆ.