ಜಾಗ್ವಾರ್ (Jaguar) ತನ್ನ ಹೊಸ ಲೋಗೋ (Logo) ಪರಿಚಯಿಸಿದ್ದು, ಮಾರುಕಟ್ಟೆಯಲ್ಲಿ ಇಲೆಕ್ಟ್ರಿಕ್ ವಾಹನಗಳ ಪ್ರಬಲ ಪರಿಚಯಕ್ಕೆ ಕಾರಣವಾಗಿವೆ. ಹೀಗಾಗಿ, ವಾಹನ ತಯಾರಕರು ಇವಿ (ಎಲೆಕ್ಟ್ರಿಕ್ ವಾಹನ) ಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ಇತ್ತೀಚೆಗೆ, ಜಾಗ್ವಾರ್ ತನ್ನ ಹೊಸ ಲೋಗೋವನ್ನು ಅನಾವರಣಗೊಳಿಸಿದೆ.
ಬ್ರಿಟಿಷ್ ಐಷಾರಾಮಿ ಕಾರು ತಯಾರಕ ಜಾಗ್ವಾರ್ (Jaguar) ತನ್ನ ಹೊಸ ಬ್ರ್ಯಾಂಡ್ ಲೋಗೋವನ್ನು ಪರಿಚಯಿಸಿದೆ. ಈ ಲೋಗೋ ಇವಿ ವಾಹನಗಳಿಗೆ ಮಾತ್ರ ಬಳಕೆ ಮಾಡುವುದಾಗಿ ಕಂಪನಿ ತಿಳಿಸಿದೆ. ಶೀಘ್ರದಲ್ಲೇ ಜಾಗ್ವಾರ್ ತನ್ನ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಲಿದೆ, ಅದಕ್ಕಾಗಿ ಹೊಸ ಲೋಗೋಗೆ ಹೊಸ ವಿನ್ಯಾಸವನ್ನು ನೀಡಲಾಗಿದೆ.
ಕಂಪನಿಯು ತಮ್ಮ ಹೊಸ ಬ್ರ್ಯಾಂಡ್ ಗುರುತು, ‘ಲೀಪರ್’ ಗುರುತು ಮತ್ತು ಮೊನೊಗ್ರಾಮ್ ಲೋಗೋಗಳನ್ನು ಹೊಸ ವಿನ್ಯಾಸದಲ್ಲಿ ಪರಿಚಯಿಸಿದೆ. ಲೋಗೋದಲ್ಲಿ ‘ಜಾಗ್ವಾರ್’ ಎಂದು ಸರಳವಾದ ಫಾಂಟ್ ಶೈಲಿಯಲ್ಲಿ ಅಕ್ಷರಗಳನ್ನು ಬಳಸಲಾಗಿದೆ. ಮೊನೊಗ್ರಾಮ್ ಹೊಸ ಫಾಂಟ್‌ನಲ್ಲಿ ‘j’ ಮತ್ತು ‘r’ ಅಕ್ಷರಗಳಿಂದ ಮಾಡಲ್ಪಟ್ಟಿದೆ. ಈ ಗುರುತು ತಲೆಕೆಳಗಾದರೂ ಒಂದೇ ರೀತಿ ಕಾಣುತ್ತದೆ. ಅದರಂತೆ ಈ ಗುರುತನ್ನು ವಿನ್ಯಾಸ ಮಾಡಲಾಗಿದೆ.
ಹೊಸ ಲೋಗೋ ಎಲೆಕ್ಟ್ರಿಕ್ ಕಾರುಗಳಿಗೆ ಅನ್ವಯಿಸುತ್ತದೆ. ‘ಜಾಗ್ವಾರ್’ ಹೊಸ ಲೋಗೋದಲ್ಲಿ ದೊಡ್ಡ ಮತ್ತು ಸಣ್ಣ ಅಕ್ಷರಗಳನ್ನು ಸಂಯೋಜಿಸಲಾಗಿದೆ. 2026 ರೊಳಗೆ 3 ಎಲೆಕ್ಟ್ರಿಕ್ ಕಾರು ಮಾದರಿಗಳನ್ನು ಬಿಡುಗಡೆ ಮಾಡಲು ಯೋಜನೆ.
ಜಾಗ್ವಾರ್ ಕಂಪನಿಯು ಇದೀಗ ತಮ್ಮ ಎಫ್-ಪೇಸ್ ಕಾರುಗಳನ್ನು ಉತ್ಪಾದನೆ ನಿಲ್ಲಿಸಿದೆ. 2026 ರವರೆಗೆ, ಅವರು 3 ಹೊಸ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಲಿದೆ.