back to top
26.3 C
Bengaluru
Friday, July 18, 2025
HomeNewsDon Bradman ದಾಖಲೆ ಬದಲಿಸಿದ Jaiswal– England ವಿರುದ್ಧ ಶತಕದ ಕೀರ್ತಿ!

Don Bradman ದಾಖಲೆ ಬದಲಿಸಿದ Jaiswal– England ವಿರುದ್ಧ ಶತಕದ ಕೀರ್ತಿ!

- Advertisement -
- Advertisement -

ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯ ಲೀಡ್ಸ್‌ನ ಹೆಡಿಂಗ್ ನಲ್ಲಿ ಶುಕ್ರವಾರ ಆರಂಭವಾಯಿತು. ಭಾರತ ತಂಡ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದು, ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ (Yashasvi Jaiswal) ಮತ್ತು ಶುಭ್ಮನ್ ಗಿಲ್ ಅವರ ಶತಕದ ನೆರವಿನಿಂದ 3 ವಿಕೆಟ್ ಕಳೆದುಕೊಂಡು 359 ರನ್ ಗಳಿಸಿತು.

ಜೈಸ್ವಾಲ್ 159 ಎಸೆತಗಳಲ್ಲಿ 16 ಬೌಂಡರಿ ಮತ್ತು 1 ಸಿಕ್ಸರ್ ಹೊಡೆಯುವ ಮೂಲಕ ಶತಕ ಸಿಡಿಸಿದರು. ಅವರು 101 ರನ್ ಗಳಿಸಿ ಆಟ ಮುಗಿಸಿದರು. ಈ ಶತಕದೊಂದಿಗೆ ಜೈಸ್ವಾಲ್ ಇಂಗ್ಲೆಂಡ್ ವಿರುದ್ಧದ ಪಂದ್ಯಗಳಲ್ಲಿ ಡಾನ್ ಬ್ರಾಡ್ಮನ್‌ನ ದಾಖಲೆ ಮುರಿದರು. ಅವರು ಇಂಗ್ಲೆಂಡ್ ವಿರುದ್ಧ ಆಟವಾಡಿದ 10 ಇನ್ನಿಂಗ್ಸ್‌ಗಳಲ್ಲಿ ಸರಾಸರಿ 90.33 ರನ್ ಗಳಿಸಿ ಒಟ್ಟು 813 ರನ್ ಕಲೆಹಾಕಿದ್ದಾರೆ. ಬ್ರಾಡ್ಮನ್ ಇಂಗ್ಲೆಂಡ್ ವಿರುದ್ಧ 63 ಇನ್ನಿಂಗ್ಸ್‌ಗಳಲ್ಲಿ 89.78 ಸರಾಸರಿಯಲ್ಲಿ 5,028 ರನ್ ಗಳಿಸಿದ್ದರು.

ಈ ಮೂಲಕ ಜೈಸ್ವಾಲ್, ಇಂಗ್ಲೆಂಡ್ ವಿರುದ್ಧ 90ಕ್ಕಿಂತ ಹೆಚ್ಚಿನ ಸರಾಸರಿ ಹೊಂದಿರುವ ಏಕೈಕ ಆಟಗಾರರಾಗಿದ್ದಾರೆ.

ಇದೀಗ ಶತಕ ಬಾರಿಸಿದ ಮತ್ತೊಬ್ಬ ಆಟಗಾರ ಶುಭ್ಮನ್ ಗಿಲ್ 175 ಎಸೆತಗಳಲ್ಲಿ 127 ರನ್ ಬಾರಿಸಿ ಕ್ರೀಸ್ ನಲ್ಲಿ ಅಜೇಯರಾಗಿದ್ದಾರೆ. ಗಿಲ್ ಅವರ ಇನಿಂಗ್ಸ್‌ನಲ್ಲಿ 16 ಬೌಂಡರಿ ಮತ್ತು 1 ಸಿಕ್ಸರ್ ಸೇರಿವೆ. ಈ ಶತಕದೊಂದಿಗೆ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 2,000 ರನ್‌ಗಳನ್ನು ಪೂರೈಸಿದ್ದಾರೆ.

ಇನ್ನೊಂದು ಕಡೆ ಉಪನಾಯಕ ರಿಷಭ್ ಪಂತ್ ಉತ್ತಮ ಆಟವಾಡಿ ಅರ್ಧಶತಕ ದಾಖಲಿಸಿದರು. ಅವರು 102 ಎಸೆತಗಳಲ್ಲಿ 65 ರನ್ ಗಳಿಸಿ ಅಜೇಯರಾಗಿದ್ದು, ತಮ್ಮ ಟೆಸ್ಟ್ ರನ್ ಮೊತ್ತವನ್ನು 3,000ಕ್ಕೆ ತಲುಪಿಸಿದ್ದಾರೆ. ಅವರ ಇನಿಂಗ್ಸ್‌ನಲ್ಲಿ 6 ಬೌಂಡರಿ ಮತ್ತು 2 ಸಿಕ್ಸರ್ ಇದ್ದವು.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page