Srinagar: ಜಮ್ಮು ಮತ್ತು ಕಾಶ್ಮೀರದ (Jammu and Kashmir) ಗಂದರ್ರ್ಬಾಲ್ (Ganderbal) ಜಿಲ್ಲೆಯಲ್ಲಿ ನಡೆದ ಉಗ್ರದಾಳಿಯ ಹೊಣೆಯನ್ನು ಪಾಕಿಸ್ತಾನ ಮೂಲದ ರೆಸಿಸ್ಟೆನ್ಸ್ ಫ್ರಂಟ್ (TRF) ವಹಿಸಿಕೊಂಡಿದೆ.
ಓರ್ವ ವೈದ್ಯ ಸೇರಿದಂತೆ 7 ಮಂದಿ ನಿರಾಯುಧ, ಮುಗ್ಧ ನಾಗರಿಕರ ಮೇಲೆ ಭಾನುವಾರ ನಡೆದ ಭಯೋತ್ಪಾದಕ ದಾಳಿಯ ಜವಾಬ್ದಾರಿಯನ್ನು ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ರೆಸಿಸ್ಟೆನ್ಸ್ ಫ್ರಂಟ್ (TRF) ವಹಿಸಿಕೊಂಡಿದೆ ಎಂದು ಸೇನಾ ಅಧಿಕೃತ ಮೂಲಗಳು ದೃಢಪಡಿಸಿವೆ.
ಪಾಕಿಸ್ತಾನ ಮೂಲದ TRF ಮುಖ್ಯಸ್ಥ ಶೇಖ್ ಸಜ್ಜಾದ್ ಗುಲ್ ಈ ದಾಳಿಯ ಮಾಸ್ಟರ್ ಮೈಂಡ್ ಎಂದು ಮೂಲಗಳು ತಿಳಿಸಿವೆ. ಆತನ ಸೂಚನೆಯ ಮೇರೆಗೆ, TRFನ ಸ್ಥಳೀಯ ಮಾಡ್ಯೂಲ್ ಸಕ್ರಿಯವಾಗಿ ಈ ಕಾರ್ಯಾಚರಣೆ ನಡೆಸಿದೆ ಎಂದು ಹೇಳಲಾಗಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಅಧಿಕಾರಿಗಳು ಸೋಮವಾರ ಭಯೋತ್ಪಾದಕ ದಾಳಿಯ ಸ್ಥಳಕ್ಕೆ ಭೇಟಿ ನೀಡಿ ದಾಳಿಯ ಬಗ್ಗೆ ತಮ್ಮದೇ ಆದ ಮೌಲ್ಯಮಾಪನ ಮಾಡುತ್ತಿದ್ದಾರೆ.
ಮೃತಪಟ್ಟ ನಾಗರಿಕರ ಪಟ್ಟಿಯಲ್ಲಿ ಬಿಹಾರದ ಫಹೀಮ್ ನಾಸಿರ್ (ಸೇಫ್ಟಿ ಮ್ಯಾನೇಜರ್), ಅಂಗಿಲ್ ಶುಕ್ಲಾ (ಮಧ್ಯಪ್ರದೇಶದ ಮೆಕ್ಯಾನಿಕಲ್ ಮ್ಯಾನೇಜರ್), ಬಿಹಾರದ ಮೊಹಮ್ಮದ್ ಹನೀಫ್, ಕಾಶ್ಮೀರದ ಬದ್ಗಾಮ್ ಜಿಲ್ಲೆಯ ಡಾ.ಶಹನವಾಜ್, ಬಿಹಾರದ ಕಲೀಮ್, ಜಮ್ಮುವಿನ ಡಿಸೈನರ್ ಶಶಿ ಅಬ್ರೋಲ್ ಮತ್ತು ಪಂಜಾಬ್ ನ ಗುರುದಾಸ್ಪುರದ ರಿಗ್ಗರ್ನ ಗುರ್ಮೀತ್ ಸಿಂಗ್ ಎಂದು ಗುರುತಿಸಲಾಗಿದೆ.
ಅಂತೆಯೇ ಉಗ್ರರ ದಾಳಿಯಲ್ಲಿ ಗಾಯಗೊಂಡ ಐವರು ಶ್ರೀನಗರದ ಸ್ಕಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಭದ್ರತಾ ಪಡೆಗಳು ಈ ಪ್ರದೇಶವನ್ನು ಸುತ್ತುವರೆದಿದ್ದು, ಭಯೋತ್ಪಾದಕರನ್ನು ಪತ್ತೆಹಚ್ಚಲು ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಭಾನುವಾರ ರಾತ್ರಿ 8.15 ರ ಸುಮಾರಿಗೆ ಈ ದಾಳಿ ನಡೆದಿದೆ.
For Daily Updates WhatsApp ‘HI’ to 7406303366
Image: PTI