back to top
26.4 C
Bengaluru
Thursday, November 13, 2025
HomeNewsJAPAD-2025:Russia-Belarus ಸಮರಾಭ್ಯಾಸದಲ್ಲಿ ಹೊಸ ದೇಶಗಳ ಭಾಗವಹಿಕೆ

JAPAD-2025:Russia-Belarus ಸಮರಾಭ್ಯಾಸದಲ್ಲಿ ಹೊಸ ದೇಶಗಳ ಭಾಗವಹಿಕೆ

- Advertisement -
- Advertisement -

Moscow: ರಷ್ಯಾ ಮತ್ತು ಬೆಲಾರಸ್ ದೇಶಗಳು ಸೇರಿ ನಡೆಸುತ್ತಿರುವ ಜಪಾಡ್-2025 ಜಂಟಿ ಸಮರಾಭ್ಯಾಸದಲ್ಲಿ ಈ ಬಾರಿ 1 ಲಕ್ಷಕ್ಕೂ ಹೆಚ್ಚು ಸೈನಿಕರು ಪಾಲ್ಗೊಂಡಿದ್ದಾರೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಿಳಿಸಿದ್ದಾರೆ. ಈ ಕವಾಯತು ನ್ಯಾಟೋ ರಾಷ್ಟ್ರಗಳ ಗಡಿಭಾಗದ ಬಳಿ ನಡೆಯುತ್ತಿದೆ.

ಹಿಂದಿನ ಅಭ್ಯಾಸದಲ್ಲಿ ಕೇವಲ 7 ಸಾವಿರ ಸೈನಿಕರು ಮಾತ್ರ ಭಾಗವಹಿಸಿದ್ದರು. ಆದರೆ ಈ ಬಾರಿ ಭಾರತ, ಬಾಂಗ್ಲಾದೇಶ, ಇರಾನ್, ಬುರ್ಕಿನಾ ಫಾಸೊ, ಕಾಂಗೋ ಮತ್ತು ಮಾಲಿ ದೇಶಗಳ ಯೋಧರೂ ಸೇರಿದ್ದಾರೆ.

ಪುಟಿನ್ ಸೇನಾ ಸಮವಸ್ತ್ರದಲ್ಲಿಯೇ ಸಮರಾಭ್ಯಾಸ ವೀಕ್ಷಣೆ ನಡೆಸಿ, “ಯೂನಿಯನ್ ಸ್ಟೇಟ್ ಮೇಲೆ ಆಗಬಹುದಾದ ಆಕ್ರಮಣವನ್ನು ತಡೆಯುವುದು ಈ ಅಭ್ಯಾಸದ ಮುಖ್ಯ ಉದ್ದೇಶ” ಎಂದು ಹೇಳಿದ್ದಾರೆ.

ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್ ಪ್ರಕಾರ, ಈ ಕವಾಯತು ಸುವಾಲ್ಕಿ ಕಾರಿಡಾರ್ ಆಕ್ರಮಣವನ್ನು ಅನುಕರಿಸಲು ರೂಪಿಸಲಾಗಿದೆ. ಬೆಲಾರಸ್ ಗಡಿಯ ಬಳಿ ಸುಮಾರು 4 ಲಕ್ಷ ಸೈನಿಕರನ್ನು ನಿಯೋಜಿಸುವ ಯೋಜನೆಯೂ ಇದೆ.

ಇದೇ ವೇಳೆ, ಬ್ಯಾರೆಂಟ್ಸ್ ಸಮುದ್ರದಲ್ಲಿರುವ ಯುದ್ಧನೌಕೆಯಿಂದ ರಷ್ಯಾ ತನ್ನ ಇತ್ತೀಚಿನ ಜಿರ್ಕಾನ್ ಸೂಪರ್ಸಾನಿಕ್ ಕ್ಷಿಪಣಿಯನ್ನು ಉಡಾಯಿಸಿದೆ. ಪರಮಾಣು ಶಸ್ತ್ರಾಸ್ತ್ರಗಳ ನಿಯೋಜನೆ ಕುರಿತ ಪ್ರಯೋಗಗಳನ್ನೂ ಈ ಅಭ್ಯಾಸದಲ್ಲಿ ಸೇರಿಸಲಾಗಿದೆ.

ಜಪಾಡ್-2021ರಲ್ಲಿ ಸುಮಾರು 2 ಲಕ್ಷ ಸೈನಿಕರು ಭಾಗವಹಿಸಿದ್ದರು. ಈಗ ನಡೆಯುತ್ತಿರುವ ಅಭ್ಯಾಸವು, ಇತ್ತೀಚೆಗೆ ರಷ್ಯಾದ ಡ್ರೋನ್‌ಗಳು ಪೋಲೆಂಡ್‌ನಲ್ಲಿ ಉಂಟುಮಾಡಿದ ಗೊಂದಲದ ನಂತರ, ನ್ಯಾಟೋ ರಾಷ್ಟ್ರಗಳಲ್ಲಿ ಹೆಚ್ಚಿನ ಎಚ್ಚರಿಕೆ ಮೂಡಿಸಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page