back to top
25.3 C
Bengaluru
Tuesday, January 27, 2026
HomeNewsJapan ನಲ್ಲಿ Population ಸತತ ಇಳಿಮುಖ– ಕಾರ್ಮಿಕ ಕೊರತೆ ಗಂಭೀರವಾಗುತ್ತಿದೆ

Japan ನಲ್ಲಿ Population ಸತತ ಇಳಿಮುಖ– ಕಾರ್ಮಿಕ ಕೊರತೆ ಗಂಭೀರವಾಗುತ್ತಿದೆ

- Advertisement -
- Advertisement -

Tokyo (Japan): ಜಪಾನ್‌ನ (Japan) ಜನಸಂಖ್ಯೆ (population) ಸತತವಾಗಿ 14ನೇ ವರ್ಷವೂ ಇಳಿಯುತ್ತಿದೆ. 2024ರ ಅಕ್ಟೋಬರ್ 1ರ ವೇಳೆಗೆ, ದೇಶದ ಒಟ್ಟು ಜನಸಂಖ್ಯೆ (ವಿದೇಶಿಗಳನ್ನು ಸೇರಿದಂತೆ) 12.38 ಕೋಟಿ (123.802 ಮಿಲಿಯನ್) ಆಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದರಲ್ಲಿ 5.5 ಲಕ್ಷರಷ್ಟು ಇಳಿಕೆ ಕಂಡುಬಂದಿದೆ ಎಂದು ಆಂತರಿಕ ವ್ಯವಹಾರ ಮತ್ತು ಸಂವಹನ ಸಚಿವಾಲಯ ತಿಳಿಸಿದೆ.

ಜಪಾನ್‌ನ 47 ಪ್ರಾಂತ್ಯಗಳಲ್ಲಿ 45ರಲ್ಲಿ ಜನಸಂಖ್ಯೆ ಕಡಿಮೆಯಾಗಿದೆ. ಟೋಕಿಯೊ ಮತ್ತು ಸೈತಾಮಾ ಪ್ರಾಂತ್ಯಗಳಲ್ಲಿ ಮಾತ್ರ ಜನಸಂಖ್ಯೆ ಸ್ವಲ್ಪ ಏರಿಕೆ ಕಂಡಿದೆ.

75 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರ ಸಂಖ್ಯೆ 7 ಲಕ್ಷರಷ್ಟು ಹೆಚ್ಚಾಗಿ 7 ಕೋಟಿ (20.77 ಮಿಲಿಯನ್) ತಲುಪಿದ್ದು, ಇದು ಒಟ್ಟು ಜನಸಂಖ್ಯೆಯ ಶೇಕಡಾ 17ರಷ್ಟಿದೆ.

ವಿದೇಶಿಗಳನ್ನು ಹೊರತುಪಡಿಸಿದರೆ, ಜಪಾನ್‌ನ ಸ್ಥಳೀಯ ಜನಸಂಖ್ಯೆ 8.98 ಲಕ್ಷರಷ್ಟು ಇಳಿದು 12.03 ಕೋಟಿ (120.296 ಮಿಲಿಯನ್) ಆಗಿದೆ. ಇದು ಇತಿಹಾಸದಲ್ಲಿ ದಾಖಲಾದ ಅತ್ಯಂತ ಹೆಚ್ಚಿನ ಇಳಿಕೆಯಾಗಿದ್ದು, ಕಾರ್ಮಿಕರ ಕೊರತೆಯನ್ನೂ ಹೆಚ್ಚಿಸಿದೆ.

15-64 ವರ್ಷ ವಯಸ್ಸಿನ ದುಡಿಯುವ ಜನಸಂಖ್ಯೆ 2.24 ಲಕ್ಷರಷ್ಟು ಕಡಿಮೆಯಾಗಿ 7.37 ಕೋಟಿ (73.728 ಮಿಲಿಯನ್) ಆಗಿದೆ. ಇದು ಒಟ್ಟು ಜನಸಂಖ್ಯೆಯ ಶೇಕಡಾ 59.6ರಷ್ಟಾಗಿದ್ದು, 2018ರಿಂದ ಶೇಕಡಾ 60ಕ್ಕಿಂತ ಕಡಿಮೆಯಲ್ಲಿದೆ.

ಇದರ ವಿರುದ್ಧವಾಗಿ, ವಿದೇಶಿ ನಿವಾಸಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ 3.5 ಲಕ್ಷ ಹೆಚ್ಚಾಗಿ 35 ಲಕ್ಷ (3.506 ಮಿಲಿಯನ್) ತಲುಪಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page