ಕೇಂದ್ರ ಸರ್ಕಾರದ ಇತ್ತೀಚಿನ GST ಸುಧಾರಣೆಗಳಿಂದ ಜಾವಾ ಮತ್ತು ಯೆಜ್ಡಿ ಬ್ರಾಂಡ್ ಬೈಕ್ ಗಳ 9Jawa-Yezdi Bikes) ಬೆಲೆ ಭಾರೀ ಇಳಿಕೆಯಾಗಿದೆ. ವಾಹನಗಳ ಮೇಲಿನ ತೆರಿಗೆ ಕಡಿತದ ಕಾರಣ, ಈ ಬೈಕ್ ಗಳು ಈಗ ಹೆಚ್ಚು ಕೈಗೆಟುಕುವ ಬೆಲೆಯಲ್ಲಿ ಲಭ್ಯವಾಗಿವೆ. ಕಾರಣದಿಂದ ಸ್ವಲ್ಪ ಹಿಂದುಳಿದಿದ್ದ ಗ್ರಾಹಕರು ತಮ್ಮ ಕನಸಿನ ಬೈಕ್ ಖರೀದಿಸುವ ಅವಕಾಶವನ್ನು ಪಡೆದಿದ್ದಾರೆ. ಕಂಪನಿಯು ಹೊಸ ಲಿಸ್ಟ್ ಬಿಡುಗಡೆ ಮಾಡಿದ್ದು, ಅದರಲ್ಲಿ ಹಲವು ಮಾದರಿಗಳ ಬೆಲೆ ಕಡಿತಗೊಂಡಿದೆ.
ಹಣಕಾಸಿನ ಬದಲಾವಣೆಗಳ ಪ್ರಕಾರ, 350 ಸಿಸಿ ಕೆಳಗಿನ ಎಂಜಿನ್ ಸಾಮರ್ಥ್ಯದ ಬೈಕ್ ಗಳ ಮೇಲಿನ GST ಶೇ. 28 ರಿಂದ ಶೇ. 18ಕ್ಕೆ ಇಳಿಸಲಾಗಿದೆ. ಇದರಿಂದ 293 ಸಿಸಿ ಮತ್ತು 334 ಸಿಸಿ ಲಿಕ್ವಿಡ್-ಕೂಲ್ಡ್ ಎಂಜಿನ್ ಹೊಂದಿರುವ ಜಾವಾ ಮತ್ತು ಯೆಜ್ಡಿ ಮಾದರಿಗಳಿಗೆ ನೇರ ಪ್ರಯೋಜನ ದೊರಕಿದೆ. 334 ಸಿಸಿ ಎಂಜಿನ್ ಇರುವ ಈ ಬೈಕ್ 29 ಪಿಎಸ್ ಶಕ್ತಿ ಮತ್ತು 30 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ, ಇದು ಯುವಕರಲ್ಲಿ ಹೆಚ್ಚು ಜನಪ್ರಿಯವಾಗಿದೆ.
ಜಾವಾ ಮತ್ತು ಯೆಜ್ಡಿ ಬೈಕ್ ಗಳು ತಮ್ಮ ವಿನ್ಯಾಸ ಮತ್ತು ಶಕ್ತಿಯುತ ಕಾರ್ಯಕ್ಷಮತೆಯಿಂದ ಎಂದಿಗೂ ಅಭಿಮಾನಿಗಳನ್ನು ಆಕರ್ಷಿಸುತ್ತವೆ. ಈಗ ಬೆಲೆ ಇಳಿಕೆಯೊಂದಿಗೆ ಈ ಮಾದರಿಗಳು ಸವಾರರಿಗೆ ಹತ್ತಿರವಾಗಿವೆ. ಯೆಜ್ಡಿ ಅಡ್ವೆಂಚರ್, ರೋಡ್ಸ್ಟರ್, ಸ್ಕ್ರ್ಯಾಂಬ್ಲರ್ ಹಾಗೂ ಜಾವಾ 42 ಬಾಬರ್ ಮುಂತಾದ ಮಾದರಿಗಳ ಬೆಲೆಗಳು ಗಮನಾರ್ಹವಾಗಿ ಕಡಿಮೆಯಾಗಿದೆ.
ಬೈಕ್ ಖರೀದಿಸಲು ಬಯಸುವವರಿಗೆ ಇದು ಸುವರ್ಣಾವಕಾಶ. ಬೆಲೆ ಇಳಿಕೆಯೊಂದಿಗೆ ಕನಸಿನಂತೆ ಕಾಣುತ್ತಿದ್ದ ಬೈಕ್ ಇದೀಗ ಮಧ್ಯಮ ವರ್ಗದ ಯುವಕರಿಗೂ ಕೈಗೆಟುಕುವ ಹಂತಕ್ಕೆ ಬಂದಿದೆ. ಜಾವಾ-ಯೆಜ್ಡಿ ಅಭಿಮಾನಿಗಳಿಗೆ ಇದು ಕೇವಲ ಬೆಲೆ ಕಡಿತವಲ್ಲ, ತಮ್ಮ ಕನಸಿನ ಬೈಕ್ ಹೊಂದುವ ಅವಕಾಶವಾಗಿದೆ.
ಜಾಹೀರಾತಿನ ಪ್ರಕಾರ, ಜಾವಾ 350 ಬೈಕ್ ಬೆಲೆ ರೂ. 1,98,950 ರಿಂದ ರೂ. 1,83,407ಕ್ಕೆ ಇಳಿಸಲಾಗಿದೆ, ಅಂದರೆ ರೂ. 15,543 ಉಳಿತಾಯ. ಜಾವಾ 42 ಬಾಬರ್ ಬೆಲೆ ರೂ. 2,09,500 ರಿಂದ ರೂ. 1,93,133ಕ್ಕೆ, ಜಾವಾ 42 ರೂ. 2,10,142ರಿಂದ ರೂ. 1,93,725ಕ್ಕೆ ಇಳಿಸಲಾಗಿದೆ. ಜಾವಾ ಪೆರಾಕ್ ಬೈಕ್ ರೂ. 2,16,707ರಿಂದ ರೂ. 1,99,775ಕ್ಕೆ ಬಾರಿಸುತ್ತಿದ್ದು, ಗ್ರಾಹಕರು ರೂ. 16,930 ಉಳಿತಾಯ ಪಡೆಯುತ್ತಾರೆ.
ಯೆಜ್ಡಿ ಬೈಕ್ ಗಳಲ್ಲೂ ಹೆಚ್ಚಿನ ಉಳಿತಾಯವಾಗಿದೆ. ಯೆಜ್ಡಿ ರೋಡ್ಸ್ಟರ್ ರೂ. 2,09,969ರಿಂದ ರೂ. 1,93,565ಕ್ಕೆ, ಯೆಜ್ಡಿ ಅಡ್ವೆಂಚರ್ ರೂ. 2,14,900ರಿಂದ ರೂ. 1,98,111ಕ್ಕೆ, ಯೆಜ್ಡಿ ಸ್ಕ್ರ್ಯಾಂಬ್ಲರ್ ರೂ. 2,11,900ರಿಂದ ರೂ. 1,95,345ಕ್ಕೆ ಇಳಿಸಲಾಗಿದೆ. ಈ ಬದಲಾವಣೆ ಯುವಕರಿಗೆ ತಮ್ಮ ಕನಸಿನ ಬೈಕ್ ಸುಲಭವಾಗಿ ಖರೀದಿಸಲು ಸಹಾಯ ಮಾಡಲಿದೆ.
ಬಹಳಷ್ಟು ಜನರ ಗಮನ ಈಗ ಜಾವಾ ಮತ್ತು ಯೆಜ್ಡಿ ಬೈಕ್ಗಳ ಕಡೆ ಹರಿದು, ಈ ಹಬ್ಬದ ಋತುವಿನಲ್ಲಿ ರಾಯಲ್ ಎನ್ಫೀಲ್ಡ್ ಸ್ಪರ್ಧೆಯಾಗಿ ನಿಂತಿರುವುದಾಗಿ ನಿರೀಕ್ಷೆ.







