Search
WhatsApp alerts

Home › Auto

Jeep Compass Sandstorm Edition: ಹೊಸ SUV ಬಿಡುಗಡೆ

administrator · Published

Jeep Compass Sandstorm Edition


ಜೀಪ್ ಇಂಡಿಯಾ ತನ್ನ ಹೊಸ ಕಂಪಾಸ್ ಸ್ಯಾಂಡ್ಸ್ಟಾರ್ಮ್ ಎಡಿಷನ್ (Jeep Compass Sandstorm Edition) ಅನ್ನು ಬಿಡುಗಡೆ ಮಾಡಿದೆ. ಇದು ಒರಟಾದ ರೂಪ ಮತ್ತು ಪ್ರೀಮಿಯಂ ಒಳಾಂಗಣ ಹೊಂದಿರುವ ವಿಶೇಷ ಆವೃತ್ತಿಯಾಗಿದೆ. ಈ ಸೀಮಿತ ಆವೃತ್ತಿ ಅಡ್ವೆಂಚರ್ ಪ್ರಿಯರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

ವಿಶೇಷ ವಿನ್ಯಾಸ ಮತ್ತು ವೈಶಿಷ್ಟ್ಯಗಳು

  • ಕಸ್ಟಮ್ ಸ್ಯಾಂಡ್ಸ್ಟಾರ್ಮ್ decals ಬಾನೆಟ್ ಮತ್ತು ಬದಿಗಳಲ್ಲಿ
  • ಪ್ರೀಮಿಯಂ ಸೀಟ್ ಕವರ್ ಮತ್ತು ಆಂಬಿಯೆಂಟ್ ಲೈಟಿಂಗ್
  • ಮುಂಭಾಗ ಮತ್ತು ಹಿಂಭಾಗ ಡ್ಯಾಶ್ ಕ್ಯಾಮ್, ಕಾರ್ಪೆಟ್, ಕಾರ್ಗೋ ಮ್ಯಾಟ್
  • ಸ್ಪೆಷಲ್ ಸ್ಯಾಂಡ್ಸ್ಟಾರ್ಮ್ ಬ್ಯಾಡ್ಜ್ ಸುರಕ್ಷತೆ ಮತ್ತು ಲುಕ್ ಹೆಚ್ಚಿಸಲು

ಬೆಲೆ ಮತ್ತು ಲಭ್ಯತೆ

50,000 ರೂ. ಪ್ರೀಮಿಯಂ ಸೇರಿಸಿ, ಇದರ ಬೆಲೆ ₹19.49 ಲಕ್ಷದಿಂದ ₹27.33 ಲಕ್ಷವರೆಗೆ ನಿಗದಿಯಾಗಿದೆ. ಈ ಆವೃತ್ತಿ ಸ್ಪೋರ್ಟ್ಸ್, ಲಾಂಗಿಟ್ಯೂಡ್ ಮತ್ತು ಲಾಂಗಿಟ್ಯೂಡ್ (O) ಮ್ಯಾಡೆಲ್‌ಗಳಲ್ಲಿ ಲಭ್ಯವಿರುತ್ತದೆ.

ಕಂಪನಿಯ ನಿರ್ದೇಶಕ ಕುಮಾರ್ ಪ್ರಿಯೇಶ್ ಅವರು, “ಸ್ಯಾಂಡ್ಸ್ಟಾರ್ಮ್ ಆವೃತ್ತಿ ಸಾಹಸ ಪ್ರಿಯರಿಗೆ ಪರಿಪೂರ್ಣ ಆಯ್ಕೆ” ಎಂದು ಹೇಳಿದ್ದಾರೆ. ಜೀಪ್ ಡೀಲರ್‌ಶಿಪ್‌ಗಳಲ್ಲಿ ಇದು ಲಭ್ಯವಿದ್ದು, ಗ್ರಾಹಕರು ಅಧಿಕೃತ ವೆಬ್‌ಸೈಟ್ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

For Daily Updates WhatsApp ‘HI’ to 7406303366

Read next

ಹೃದಯದ ಆರೋಗ್ಯ ಕಾಪಾಡಿ: ವಿಶ್ವ ಹೃದಯ ದಿನದಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚೇತನ್ ಕಿವಿಮಾತು

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗ್ನೇಯ ಪದವೀಧರ ಕ್ಷೇತ್ರ ಚುನಾವಣೆಗೆ ಸಹಾಯವಾಣಿ ಕೇಂದ್ರ ಸ್ಥಾಪನೆ

ಹಿರಿಯ ನಾಗರಿಕರ ಕುಂದುಕೊರತೆ ಪರಿಹಾರಕ್ಕೆ ಅಧಿಕಾರಿಗಳಿಗೆ ಡಿಸಿ ಕಟ್ಟುನಿಟ್ಟಿನ ಸೂಚನೆ

ಕೆಎಸ್‌ಆರ್‌ಟಿಸಿಯಲ್ಲಿ ಅಪ್ರೆಂಟೀಸ್ ತರಬೇತಿಗೆ ಅರ್ಜಿ ಆಹ್ವಾನ

You cannot copy content of this page