back to top
21.4 C
Bengaluru
Saturday, August 30, 2025
HomeIndiaJharkhand ಮುಖ್ಯಮಂತ್ರಿಗೆ ಪಿತೃ ವಿಯೋಗ – Shibu Soren ನಿಧನ

Jharkhand ಮುಖ್ಯಮಂತ್ರಿಗೆ ಪಿತೃ ವಿಯೋಗ – Shibu Soren ನಿಧನ

- Advertisement -
- Advertisement -

Jharkhand: ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹಾಗೂ ಜೆಎಂಎಂ (Jharkhand ಮುಕ್ತಿ ಮೋರ್ಚಾ) ಸಂಸ್ಥಾಪಕ ಶಿಬು ಸೊರೆನ್ (Shibu Soren-ವಯಸ್ಸು 81) ನಿಧನರಾದರು. ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ದೆಹಲಿಯ ಗಂಗಾರಾಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬುಧವಾರ ರಾತ್ರಿ ಅವರು ಕೊನೆಯುಸಿರೆಳೆದರು.
ಶಿಬು ಸೊರೆನ್ ಅವರು ಹಾಲಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ತಂದೆ.

ಜುಲೈನಲ್ಲಿ ಮೂತ್ರಪಿಂಡದ ತೊಂದರೆಯಿಂದಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಸ್ಥಿತಿ ಗಂಭೀರವಾಗಿದ್ದು, ವೆಂಟಿಲೇಟರ್‌ ಸಹಾಯದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸಂತಾಪ ಸೂಚಿಸಿ, ಶಿಬು ಸೊರೆನ್ ಅವರು ಬುಡಕಟ್ಟು ಸಮುದಾಯ ಹಾಗೂ ಹಿಂದುಳಿದ ವರ್ಗಗಳ ಹಕ್ಕುಗಳಿಗಾಗಿ ಜೀವಪೂರ್ತಿ ಹೋರಾಡಿದ ಧೀಮಂತ ನಾಯಕರಾಗಿದ್ದರು ಎಂದು ಶ್ಲಾಘಿಸಿದರು.

ಶಿಬು ಸೊರೆನ್ ಅವರು ಜನವರಿ 11, 1944ರಂದು ಹಜಾರಿಬಾಗ್‌ನಲ್ಲಿ ಜನಿಸಿದರು. ಜನರು ಅವರನ್ನು “ದಿಶೋಮ್ ಗುರು” ಅಥವಾ “ಗುರುಜಿ” ಎಂದೇ ಕರೆಯುತ್ತಿದ್ದರು. ಶೋಷಿತ ಬುಡಕಟ್ಟು ಜನರ ಹಕ್ಕಿಗಾಗಿ ಧಂಕಟ್ನಿ ಆಂದೋಲನ ಸೇರಿದಂತೆ ಹಲವು ಹೋರಾಟಗಳನ್ನು ನಡಿಸಿದರು.

ಬಿಹಾರದಿಂದ ಪ್ರತ್ಯೇಕ ಜಾರ್ಖಂಡ್ ರಾಜ್ಯ ರಚನೆಗಾಗಿ ಶಿಬು ಸೊರೆನ್ ಪ್ರಮುಖ ಪಾತ್ರ ವಹಿಸಿದರು. ಅವರು 2005, 2008 ಮತ್ತು 2009ರಲ್ಲಿ ಜಾರ್ಖಂಡ್ ಸಿಎಂ ಆಗಿದ್ದರು, ಆದರೆ ಯಾವುದೇ ಅವಧಿಯನ್ನೂ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.

ಶಿಬು ಸೊರೆನ್ ಅವರು 1977ರಲ್ಲಿ ಮೊದಲ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರು. 1980ರಿಂದ 2004ರವರೆಗೆ ಅವರು ಹಲವು ಬಾರಿ ಸಂಸದರಾಗಿ ಆಯ್ಕೆಯಾದರು. ಯುಪಿಎ ಸರ್ಕಾರದಲ್ಲಿ ಅವರು ಕಲ್ಲಿದ್ದಲು ಸಚಿವರಾಗಿದ್ದರು. ಈಗ ಅವರ ಪುತ್ರ ಹೇಮಂತ್ ಸೊರೆನ್ ಜಾರ್ಖಂಡ್‌ನ ಸಿಎಂ ಆಗಿದ್ದಾರೆ.

ರಾಜ್ಯ ಹಾಗೂ ರಾಷ್ಟ್ರ ರಾಜಕೀಯಕ್ಕೆ ಶಿಬು ಸೊರೆನ್ ಅಗಾಧ ಕೊಡುಗೆ ನೀಡಿದ ನಾಯಕರೆಂದು ಸಾರ್ವಜನಿಕ ವಲಯದಲ್ಲಿ ಸಂತಾಪ ವ್ಯಕ್ತವಾಗಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page