ರಿಲಾಯನ್ಸ್ ಮತ್ತು ಡಿಸ್ನಿ ಜಂಟಿ ಉಪಕ್ರಮವಾಗಿ ಜಿಯೋಸಿನೆಮಾ ಮತ್ತು ಹಾಟ್‌ಸ್ಟಾರ್ (Hotstar) ಒಂದೇ ಹೆಸರಿನಡಿ ಲಭ್ಯ.
- ಹೊಸ ಸೇವೆ: ಜಿಯೋಸಿನೆಮಾ ಮತ್ತು ಡಿಸ್ನಿ+ ಹಾಟ್‌ಸ್ಟಾರ್ ಸಂಯೋಜನೆ
- ಪ್ಲಾನ್ ಆಯ್ಕೆಗಳು: ಬಳಕೆದಾರರಿಗೆ ತ್ರಿಮಾಸಿಕ ಪ್ಲಾನ್ ಗಳೊಂದಿಗೆ ಅನುಕೂಲಕರ ಆಯ್ಕೆಗಳು
- ಕ್ರಿಕೆಟ್ ಸ್ಟ್ರೀಮಿಂಗ್: ಐಪಿಎಲ್, ಐಸಿಸಿ ಟೂರ್ನಿ ಸೇರಿ ಹೈ-ಕ್ವಾಲಿಟಿ ಸ್ಪೋರ್ಟ್ಸ್ ಸ್ಟ್ರೀಮಿಂಗ್
ಜಿಯೋ ಹಾಟ್‌ಸ್ಟಾರ್: ಭಾರತದಲ್ಲಿ ಹೊಸ ಒಟಿಟಿ ತಂತ್ರಜ್ಞಾನ. ನೂತನ ಜಿಯೋ ಹಾಟ್‌ಸ್ಟಾರ್ ಸೇವೆ, ಹಿಂದಿನ ಜಿಯೋಸಿನೆಮಾ ಮತ್ತು ಹಾಟ್‌ಸ್ಟಾರ್ ಕಂಟೆಂಟ್ ಅನ್ನು ಒಂದೇ ವೇದಿಕೆಯಲ್ಲಿ ಒದಗಿಸುತ್ತದೆ.
ಹಳೆಯ ಬಳಕೆದಾರರಿಗೆ ಯಾವುದೇ ವ್ಯತ್ಯಾಸ ಇಲ್ಲ, ಹೊಸ ಬ್ರಾಂಡಿಂಗ್ ಮಾತ್ರ, ಜಿಯೋಸಿನೆಮಾ ಪ್ರೀಮಿಯಂ ಬಳಕೆದಾರರನ್ನು ಸ್ವಯಂಚಾಲಿತವಾಗಿ ಹೊಸ ಅಪ್ಲಿಕೇಶನ್‌ಗೆ ಸ್ಥಳಾಂತರಿಸಲಾಗುತ್ತದೆ.
ಜಿಯೋ ಹಾಟ್‌ಸ್ಟಾರ್ ಪ್ಲಾನ್ ಗಳು
- ಹೊಸ ಸೇವೆಗೆ ಮೂರು ತ್ರಿಮಾಸಿಕ ಸಬ್ಸ್ಕ್ರಿಪ್ಷನ್ ಪ್ಲಾನ್ಗಳು ಲಭ್ಯ
- ₹149 – ಮೊಬೈಲ್ ಪ್ಲಾನ್
- ₹299 – ಸೂಪರ್ ಪ್ಲಾನ್
- ₹349 – ಪ್ರೀಮಿಯಂ (ಆಡ್ಸ್-ಫ್ರೀ) ಪ್ಲಾನ್
ಹೆಚ್ಚುವರಿ ವೈಶಿಷ್ಟ್ಯಗಳು
- ಅಂತಾರಾಷ್ಟ್ರೀಯ ಕಂಟೆಂಟ್: NBC Universal, Peacock, Warner Bros, Discovery, HBO, Paramount
- Sparks ಫೀಚರ್: ಭಾರತದ ಪ್ರಮುಖ ಡಿಜಿಟಲ್ ಕ್ರಿಯೇಟರ್‌ಗಳ ವಿನೂತನ ಕಂಟೆಂಟ್
- ಲೈವ್ ಸ್ಪೋರ್ಟ್ಸ್: ಐಪಿಎಲ್, ಮಹಿಳಾ ಪ್ರೀಮಿಯರ್ ಲೀಗ್, ಐಸಿಸಿ ಕ್ರಿಕೆಟ್ ಟೂರ್ನಿ ಲೈವ್ ಸ್ಟ್ರೀಮಿಂಗ್
ಈ ಹೊಸ ಸೇವೆ ಭಾರತೀಯ ಒಟಿಟಿ ಮಾರುಕಟ್ಟೆಯಲ್ಲಿ ದೊಡ್ಡ ಬದಲಾವಣೆಯನ್ನು ತರಲಿದೆ!