Kanakagiri, Koppal : ಕನಕಗಿರಿ ತಾಲ್ಲೂಕಿನ ಮುಸಲಾಪುರ (Muslapur) ಗ್ರಾಮದ 13ನೇ ವರ್ಷದ ಚನ್ನಬಸವೇಶ್ವರ ಜಾತ್ರೆ ಮಹೋತ್ಸವ (Channabasaveshwara Jatre Mahotsava) ಭಾನುವಾರ ಭಕ್ತಿ ಶ್ರದ್ದೆಯಿಂದ ನೆರೆವೇರಿತು. ದೇವಸ್ಥಾನದಲ್ಲಿ ಬೆಳಿಗ್ಗೆ ಚನ್ನಬಸವೇಶ್ವರ ಹಾಗೂ ಮಾರುತೇಶ್ವರ ದೇವರ ಅಗ್ನಿಕುಂಡ, ಅನ್ನಪಾಯಸ, ಹಾಲು ಓಕುಳಿ, ರಥಕ್ಕೆ ಅನ್ನಬಲಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ತೇರು ಬೀದಿ, ಮನೆ, ಮಾಳಿಗೆ ಮೇಲೆ ನಿಂತ ಭಕ್ತರು ಬಾಳೆಹಣ್ಣು, ಉತ್ತುತ್ತಿ, ಹೂಗಳನ್ನು ರಥಕ್ಕೆ ಎಸೆದರು. ಭಕ್ತರಿಗೆ ಅನ್ನ ದಾಸೋಹವನ್ನು ದೇವಾಲಯದ ಎದುರು ಮಾಡಲಾಯಿತು.
ಪಟ್ಟಣ ಪಂಚಾಯಿತಿ ಸದಸ್ಯರಾದ ಸಂಗಪ್ಪ ಸಜ್ಜನ್, ಶರಣೇಗೌಡ, ಅನಿಲಕುಮಾರ ಬಿಜ್ಜಳ, ಕಂಠಿರಂಗ ನಾಯಕ, ಶಾಸಕ ಬಸವರಾಜ ಧಡೇಸೂಗೂರು ಅವರ ಪುತ್ರ ಮೌನೇಶ ದಢೇಸೂಗೂರು, ಬಿಜೆಪಿ ಮಂಡಲ ಅಧ್ಯಕ್ಷ ಮಹಾಂತೇಶ ಸಜ್ಜನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೀರೇಶಪ್ಪ ಸಮಗಂಡಿ ಪ್ರಮುಖರಾದ ಕೃಷ್ಣೇಗೌಡ, ವಿರೂಪಾಕ್ಷಪ್ಪ ಪಾಟೀಲ, ಬಸಂತಗೌಡ ಪಾಟೀಲ, ನಾಗರಾಜ ತಂಗಡಗಿ, ವಾಗೀಶ ಹಿರೇಮಠ, ಚೆನ್ನಬಸವ ತೆಗ್ಗಿನಮನಿ ಸೇರಿದಂತೆ ವಿವಿಧ ಪಕ್ಷದ ಮುಖಂಡರು ಕೊಪ್ಪಳ, ಕುಷ್ಟಗಿ, ಮುಸಲಾಪುರ, ರಾಂಪುರ, ಕನಕಗಿರಿ, ಓಬಳಬಂಡಿ, ಚಿಕ್ಕಮಾದಿನಾಳ, ಹುಲಸನಹಟ್ಟಿ, ಹಾಸಗಲ್ ಸೇರಿದಂತೆ ಸುತ್ತಮುತ್ತಲ್ಲಿನ ಭಕ್ತರು ಉಪಸ್ಥಿತರಿದ್ದರು.