Kanpur : ಕಾನ್ಪುರ Test ನಲ್ಲಿ India (ಭಾರತ) Bangladesh ವಿರುದ್ಧ 7 ವಿಕೆಟ್ ಗಳ ಅಮೋಘ ಜಯ ಸಾಧಿಸಿದೆ. ಇದರೊಂದಿಗೆ 2-0 ಅಂತರದಿಂದ ಟೀಮ್ ಇಂಡಿಯಾ ಸರಣಿಯನ್ನು ಜಯಸಿದೆ.
Green Park ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ನಾಯಕ Rohit Sharma ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿದರು. ಬಾಂಗ್ಲಾದೇಶ 35 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 107 ರನ್ ಗಳಿಸಿದ್ದಾಗ ಮಳೆಯಿಂದ ಮೊದಲ ದಿನದ ಆಟವನ್ನು ಸ್ಥಗಿತಗೊಳಿಸಲಾಯಿತು.
ನಂತರ 2 ಮತ್ತು 3ನೇ ದಿನ ಮಳೆ ಮತ್ತು ಪಿಚ್‌ಗಳು ತೇವವಾಗಿದ್ದ ಕಾರಣ ಪಂದ್ಯ ನಡೆಯಲಿಲ್ಲ. 4ನೇ ದಿನ ಭಾರತ ಆಕ್ರಮಣಕಾರಿ ಆಟವಾಡಿ ಬಾಂಗ್ಲಾದೇಶ ವನ್ನು ಇಕ್ಕಟ್ಟಿಗೆ ಸಿಲುಕಿಸಿತು.
ಮೊದಲ ಇನ್ನಿಂಗ್ಸ್ ನಲ್ಲಿ ಬಾಂಗ್ಲಾದೇಶ Mominul Haque ನ ಶತಕದ ನೆರವಿನಿಂದ 74.2 ಓವರ್‌ಗಳಲ್ಲಿ 233 ಗಳಿಸಿತು. ಆಕ್ರಮಣಕಾರಿ ಆಟವಾಡಿದ ರೋಹಿತ್ ಪಡೆ ಮೊದಲ ಇನ್ನಿಂಗ್ಸ್ ನಲ್ಲಿ 34.4 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 285 ಗಳಿಸಿ Declare ಮಾಡಿಕೊಂಡಿತು.
ಬಾಂಗ್ಲಾದೇಶ ಎರಡೆನೇ ಇನಿಂಗ್ಸ್ ನಲ್ಲಿ 47 ಓವರ್‌ಗಳಲ್ಲಿ 147 ರನ್ ಗಳಿಸಿ ಭಾರತಕ್ಕೆ 95 ರನ್ ಗಳ ಸುಲಭ ಗುರಿಯನ್ನು ನೀಡಿತು. ಬಾಂಗ್ಲಾ ನೀಡಿದ ಗುರಿಯನ್ನು ಭಾರತ 17.2 ಓವರ್ಗಳಲ್ಲಿ ತಲುಪಿತು.
ಈ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಭಾರತ ದಾಖಲೆ ವೇಗದಲ್ಲಿ 50, 100, 150, 200 ಮತ್ತು 250 ರನ್‌ಗಳನ್ನು ದಾಟಿತು. ಈ ಸರಣಿ ಜಯದೊಂದಿಗೆ ಭಾರತ ಸ್ವದೇಶದಲ್ಲಿ ಹದಿನೆಂಟನೇ ಟೆಸ್ಟ್ ಸರಣಿಯನ್ನು ಗೆದ್ದು ದಾಖಲೆ ಬರೆದಿದೆ.