back to top
23.3 C
Bengaluru
Tuesday, September 16, 2025
HomeKarnatakaಕರ್ನಾಟಕದ ವಿದ್ವಾಂಸರಿಗೆ ಕಪಾಲಿಶಾಸ್ತ್ರಿ ಪ್ರಶಸ್ತಿ

ಕರ್ನಾಟಕದ ವಿದ್ವಾಂಸರಿಗೆ ಕಪಾಲಿಶಾಸ್ತ್ರಿ ಪ್ರಶಸ್ತಿ

- Advertisement -
- Advertisement -

Bengaluru: ಭಾರತೀಯ ಸಂಸ್ಕೃತಿ ಪ್ರಸಾರ ಮತ್ತು ಸಂಶೋಧನೆಗೆ ಕೊಡುಗೆ ನೀಡಿದ ವಿದ್ವಾಂಸರಿಗೆ ಕಪಾಲಿಶಾಸ್ತ್ರಿ (T.V. Kapali Sastry) ಪ್ರಶಸ್ತಿ ನೀಡಲಾಗುತ್ತದೆ. ಕಳೆದ 25 ವರ್ಷಗಳಿಂದ ಈ ಗೌರವ ಮುಂದುವರಿದಿದೆ. ಈ ಬಾರಿ ಪ್ರಶಸ್ತಿ ಪಡೆದವರು,

  • ಡಾ. ರಾಮಚಂದ್ರ ಜಿ. ಭಟ್ ಕೋಟೆಮನೆ
  • ಡಾ. ಯೋಗೇಶ್ ನಾಯ್ಕರ್
  • ಹರಿಹರಪುರ ಶ್ರೀಧರ್
  • ಪ್ರೊ. ವಿರೂಪಾಕ್ಷವಿ ಜಡ್ಡಿಪಾಲ್

ಪ್ರತಿ ವಿಜೇತರಿಗೆ ₹10,000 ನಗದು ಹಾಗೂ ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಗುತ್ತದೆ.

ಸಾಕ್ಷಿ ಸಂಸ್ಥೆಯು ಪ್ರಕಟಣೆ ನೀಡಿದ್ದು, ಸೆಪ್ಟೆಂಬರ್ 07 ರಂದು ಬೆಳಿಗ್ಗೆ 11 ಗಂಟೆಗೆ ಬಸವನಗುಡಿ ನ್ಯಾಷನಲ್ ಕಾಲೇಜ್ ಮಲ್ಟಿಮೀಡಿಯಾ ಹಾಲ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ. ಸಂಸ್ಥೆ ಕಳೆದ 28 ವರ್ಷಗಳಿಂದ ವೇದಜ್ಞಾನ ಸಂರಕ್ಷಣೆ, ಪ್ರಸಾರ ಮತ್ತು ಸಂಶೋಧನೆಗಳಲ್ಲಿ ತೊಡಗಿಕೊಂಡಿದೆ.

ಪ್ರಶಸ್ತಿ ವಿಜೇತರ ಪರಿಚಯ

ಡಾ. ರಾಮಚಂದ್ರ ಭಟ್ – 50 ವರ್ಷಗಳಿಂದ ವಿದ್ವತ್ ಸೇವೆ, ಚನ್ನೇನಹಳ್ಳಿ ವೇದ ಗುರುಕುಲದ ಸ್ಥಾಪಕ ಪ್ರಾಂಶುಪಾಲರು, ಸಂಸ್ಕೃತ ಪ್ರಸಾರ ಮತ್ತು ವೇದಾಧ್ಯಯನಕ್ಕೆ ಮಹತ್ತರ ಕೊಡುಗೆ.

ಡಾ. ಯೋಗೇಶ್ ನಾಯ್ಕರ್ – ನಾಗಪುರದ ಶಿಶು ವೈದ್ಯರು, ವೇದ-ಉಪನಿಷತ್-ಗೀತೆಯ ಆಳವಾದ ಅಧ್ಯಯನ, ಇತ್ತೀಚಿನ ಯೋಗ ಮುದ್ರಾ’ ಕೃತಿ ವಿಶೇಷ ಮೆಚ್ಚುಗೆ ಪಡೆದಿದೆ.

ಹರಿಹರಪುರ ಶ್ರೀಧರ್ – ಹಾಸನದವರು, 15 ವರ್ಷಗಳಿಂದ ಅಗ್ನಿಹೋತ್ರ ಪ್ರಚಾರದಲ್ಲಿ ತೊಡಗಿಸಿಕೊಂಡು ಸಾವಿರಾರು ಜನರಿಗೆ ಮಾರ್ಗದರ್ಶನ ನೀಡಿದ್ದಾರೆ.

ಪ್ರೊ. ವಿರೂಪಾಕ್ಷ ಜಡ್ಡಿಪಾಲ್ – ಉಜ್ಜಯಿನಿಯ ನಾಂದೀಪನಿ ವೇದ ವಿದ್ಯಾ ಪ್ರತಿಷ್ಠಾನದ ಕಾರ್ಯದರ್ಶಿಗಳು, ವೇದ-ವೇದಾಂತ ಕ್ಷೇತ್ರಕ್ಕೆ ಅಪಾರ ಕೊಡುಗೆ.

ಟಿ.ವಿ. ಕಪಾಲಿಶಾಸ್ತ್ರಿಯವರು ದಾರ್ಶನಿಕ, ಶಾಸ್ತ್ರ ಸಂಯೋಜಕ, ಕವಿ ಮತ್ತು ಗದ್ಯ ಬರಹಗಾರರಾಗಿದ್ದರು.

  • ಉಪನಿಷತ್ ಪ್ರಪಂಚವನ್ನು ಸುಲಭವಾಗಿ ಪರಿಚಯಿಸಿದವರು
  • ತಂತ್ರಶಾಸ್ತ್ರದ ಮರ್ಮವನ್ನು ಜನರಿಗೆ ತಲುಪಿಸಿದವರು
  • ಸಂಸ್ಕೃತ, ಇಂಗ್ಲಿಷ್, ತೆಲುಗು, ತಮಿಳು ಭಾಷೆಗಳಲ್ಲಿ ಪ್ರಭುತ್ವ ಸಾಧಿಸಿದವರು
  • ಶ್ರೀ ರಮಣ ಮಹರ್ಷಿಗಳ ಬೋಧನೆಯನ್ನು ಲೋಕಕ್ಕೆ ಪರಿಚಯಿಸಿದವರು

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page