Bengaluru: ಕರ್ನಾಟಕ ಸರ್ಕಾರ ಅನರ್ಹ ರೇಷನ್ ಕಾರ್ಡ್ಗಳನ್ನು (BPL card) ರದ್ದುಪಡಿಸಲು ಕಠಿಣ ಕ್ರಮ ಕೈಗೊಂಡಿದೆ.
“ಆಪರೇಷನ್ BPL ಕಾರ್ಡ್” ಹೆಸರಿನ ಈ ಪ್ರಕ್ರಿಯೆಯಲ್ಲಿ, ಈಗಾಗಲೇ ಹಲವು ಜಿಲ್ಲೆಗಳಲ್ಲಿ ಲಕ್ಷಾಂತರ ಬಿಪಿಎಲ್ (BPL) ಕಾರ್ಡ್ಗಳು ಪರಿಶೀಲನೆಯಾಗುತ್ತಿವೆ.
ಈ ವಿಚಾರದಿಂದ ಮನೆಮನೆಗೂ ತಮ್ಮ ಬಿಪಿಎಲ್ ಕಾರ್ಡ್ಗಳು ಅರ್ಹವೋ ಅಥವಾ ಅನರ್ಹವೋ ಎಂಬ ಚರ್ಚೆ ಆರಂಭವಾಗಿದೆ.
ಪ್ರಮುಖ ಅಂಕಿಅಂಶಗಳು
- ರಾಜ್ಯದಲ್ಲಿ 22,62,482 ಅನರ್ಹ ಬಿಪಿಎಲ್ ಕಾರ್ಡ್ಗಳನ್ನು ಪತ್ತೆ ಮಾಡಲಾಗಿದೆ.
- ಅನರ್ಹತೆಗೆ ಒಳಪಡುವ ಅಂತ್ಯೋದಯ/ಬಿಪಿಎಲ್ ಕಾರ್ಡ್ ಸಂಖ್ಯೆ: 10,97,621
- ಆದಾಯ ತೆರಿಗೆ ಪಾವತಿದಾರರು: 1,06,152
- 1 ಲಕ್ಷದ 20 ಸಾವಿರದ ಒಳಗಾದ ಆದಾಯ ಹೊಂದಿರುವವರು: 10,54,368
- ಸರ್ಕಾರಿ ನೌಕರರು: 4,272
ಇ-ಗವರ್ನೆನ್ಸ್ ಇಲಾಖೆ ಈ ಮಾಹಿತಿ ಸಂಗ್ರಹಿಸಿ ಆಹಾರ ಇಲಾಖೆಗೆ ರವಾನೆ ಮಾಡಿದೆ. ಜಿಲ್ಲಾವಾರು ಅನರ್ಹ BPL ಕಾರ್ಡ್ಗಳ ಮಾಹಿತಿಯು ಎಲ್ಲಾ ಜಿಲ್ಲಾ ಅಧಿಕಾರಿಗಳಿಗೆ ನೀಡಲಾಗಿದೆ.
ಆಹಾರ ಇಲಾಖೆ ಆಯುಕ್ತರು ಈ ಮಾಹಿತಿಯನ್ನು ಜಂಟಿ ನಿರ್ದೇಶಕರು ಮತ್ತು ಉಪ ನಿರ್ದೇಶಕರಿಗೆ ಕಳುಹಿಸಿ, ರದ್ದುಗೊಳಿಸುವ ಪ್ರಕ್ರಿಯೆ ಆರಂಭಿಸಲು ಸೂಚಿಸಿದ್ದಾರೆ.
ಸರ್ಕಾರದ ಈ ಕ್ರಮದಿಂದ ಅನರ್ಹ ಕಾರ್ಡ್ಗಳನ್ನು ಬೇಗ ರದ್ದುಪಡಿಸುವ ನಿರೀಕ್ಷೆಯಿದೆ.