Karnataka : ಶಿಗ್ಗಾವಿ, ಸಂಡೂರು ಮತ್ತು ಚನ್ನಪಟ್ಟಣ ಕ್ಷೇತ್ರಗಳಲ್ಲಿ ನಡೆದ ಉಪಚುನಾವಣೆ ಫಲಿತಾಂಶಗಳು ಕೆಲವೇ ಗಂಟೆಗಳಲ್ಲಿ ಹೊರಬೀಳಲಿದೆ.
- ಶಿಗ್ಗಾವಿಯಲ್ಲಿ ಅಂಚೆ ಮತಗಳ ಎಣಿಕೆ ಮುಗಿಯುತ್ತಿದ್ದಂತೆಯೇ NDA ಅಭ್ಯರ್ಥಿ ಭರತ್ ಬೊಮ್ಮಾಯಿ ಮುನ್ನಡೆ ಸಾಧಿಸಿದ್ದಾರೆ.
- ಶಿಗ್ಗಾವಿ ಕ್ಷೇತ್ರದಲ್ಲಿ NDAಮತ್ತು ಕಾಂಗ್ರೆಸ್ ನಡುವೆ ಬಿಗ್ ಪೈಟ್ ನಡೆಯುತ್ತಿದ್ದು, ಪೀ ಮಾರ್ ಸಮೀಕ್ಷೆಯ ಪ್ರಕಾರ ಭರತ್ ಬೊಮ್ಮಾಯಿ ಗೆಲ್ಲುವ ಸಾಧ್ಯತೆ ಹೆಚ್ಚು.
ಸಂಡೂರು ಉಪಚುನಾವಣೆ:
ಸಂಡೂರು ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಗೆಲ್ಲಲಿದೆ. ಕ್ಷೇತ್ರದ ಜನರು ಈ ಬಾರಿ ಬದಲಾವಣೆ ಬಯಸಿದ್ದಾರೆ.
- ಸಂಡೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇ. ಅನ್ನಪೂರ್ಣ ಮುನ್ನಡೆ ಸಾಧಿಸಿದ್ದಾರೆ.
- NDA ಅಭ್ಯರ್ಥಿ ಬಂಗಾರಿ ಹನುಮಂತ ಅವರಿಗಿಂತ 1 ಮತದ ಅಂತರದಲ್ಲಿ ಅನ್ನಪೂರ್ಣ ಮುನ್ನಡೆಯಲ್ಲಿದ್ದಾರೆ.
ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಕಠಿಣ ಪೈಪೋಟಿ ಎದುರಾಗಿದ್ದು, ಈ ಬಾರಿ ಬದಲಾವಣೆಯ ಕಾತರ ರಾಜ್ಯ ರಾಜಕೀಯದಲ್ಲಿ ನಿರ್ಣಾಯಕವಾಗಿದೆ.
ಹಾವೇರಿ ಜಿಲ್ಲೆ:
ಅಂಚೆ ಮತ್ತು ಸೇವಾ ಮತಗಳ ಎಣಿಕೆ ಪೂರ್ಣಗೊಂಡಿದ್ದು, ಒಟ್ಟು 552 ಅಂಚೆ ಮತಗಳನ್ನು ಎಣಿಸಲಾಗಿದೆ. ಶಿಗ್ಗಾವಿ ಕ್ಷೇತ್ರದಲ್ಲಿ ಈ ಬಾರಿ ಶೇ. 80.48 ಮತದಾನವಾಗಿದೆ.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕ್ಷೇತ್ರದಲ್ಲಿ ಭರತ್ ಬೊಮ್ಮಾಯಿಯನ್ನು ಬೆಂಬಲಿಸುತ್ತಾ ಪಕ್ಷದ ಗೆಲುವಿಗೆ ಅಭಿಯಾನ ನಡೆಸಿದ್ದಾರೆ.
ಸಂಡೂರು ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ, ಜನಾರ್ಧನ ರೆಡ್ಡಿ, ಶ್ರೀರಾಮುಲು ಮೊದಲಾದ ನಾಯಕರು ಶ್ರಮಿಸಿದ್ದಾರೆ. ಶಿಗ್ಗಾವಿ ಕ್ಷೇತ್ರದಲ್ಲಿ NDA ಪಕ್ಷದ ಭರವಸೆ ಹೆಚ್ಚಾಗಿದೆ, ಆದರೆ ಅಂತಿಮ ಫಲಿತಾಂಶ ಇನ್ನೂ ನಿರೀಕ್ಷೆಯಲ್ಲಿದೆ.