Bengaluru : ಕರ್ನಾಟಕ (Karnataka) ರಾಜ್ಯದಲ್ಲಿ ಹಾಲು ಉತ್ಪಾದನೆ ಗುರಿಯತ್ತ ಮತ್ತೊಂದು ಮಹತ್ತರ ಹೆಜ್ಜೆ ಇಟ್ಟಿದ್ದು, ಕರ್ನಾಟಕವು ಗುಜರಾತ್ ನಂತರ ಭಾರತದ ಎರಡನೇ ಅತಿಹೆಚ್ಚು ಹಾಲು ಉತ್ಪಾದಕ (2nd Largest Milk Producing State) ರಾಜ್ಯವಾಗಿ ಹೊರಹೊಮ್ಮಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಘೋಷಿಸಿದ್ದಾರೆ.
ರಾಜ್ಯದ 16 ಹಾಲು ಒಕ್ಕೂಟಗಳು ಪ್ರತಿದಿನ 1 ಕೋಟಿ ಲೀಟರ್ ಹಾಲು ಉತ್ಪಾದಿಸುತ್ತಿದ್ದು, ದೆಹಲಿಗೆ ಪ್ರತಿದಿನ 2.5 ಲಕ್ಷ ಲೀಟರ್ ಹಾಲು ಪೂರೈಕೆಯಾಗುತ್ತಿದೆ. ಮುಂದಿನ ಆರು ತಿಂಗಳಲ್ಲಿ ಇದನ್ನು 5 ಲಕ್ಷ ಲೀಟರ್‌ಗೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ. ಹಾಲು ಉತ್ಪನ್ನಗಳಿಗೆ ಬಲವಾದ ಮಾರುಕಟ್ಟೆ ನಿರ್ಮಾಣವು ಡೈರಿ ಉದ್ಯಮದ ಅಭಿವೃದ್ಧಿ ಮತ್ತು ರೈತರ ಕಲ್ಯಾಣಕ್ಕೆ ಮಹತ್ವದ ಹಂತವೆಂದು ಅವರು ಅಭಿಪ್ರಾಯಪಟ್ಟರು.
ನಿನ್ನೆ ದೆಹಲಿಯಲ್ಲಿ ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳ (KMF) ಮತ್ತು ಮಂಡ್ಯ ಸಹಕಾರಿ ಹಾಲು ಒಕ್ಕೂಟ ಆಯೋಜಿಸಿದ್ದ ನಂದಿನಿ ಹಾಲಿನ ಹೊಸ ರೂಪಾಂತರಗಳಿಗೆ ಚಾಲನೆ ನೀಡಿದ ಸಿದ್ದರಾಮಯ್ಯ, ರಾಜ್ಯದ ಹೈನುಗಾರಿಕೆ ಕ್ಷೇತ್ರದ ಯಶಸ್ಸಿಗೆ ಸರಕಾರದ ಬಲವಾದ ಬೆಂಬಲವೇ ಕಾರಣವಾಗಿದೆ ಎಂದರು.
ರೈತರಿಗೆ ಶಾಶ್ವತ ಮಾರುಕಟ್ಟೆ ಮತ್ತು ನ್ಯಾಯಯುತ ಬೆಲೆ ಒದಗಿಸುವ ಉದ್ದೇಶದಿಂದ ಹಾಲು ಉತ್ಪಾದಕರ ಸಂಘಗಳನ್ನು ಸ್ಥಾಪಿಸಲಾಗಿದೆ. ರಾಜ್ಯವು ದಿನಕ್ಕೆ 92-93 ಲಕ್ಷ ಲೀಟರ್ ಹಾಲು ಉತ್ಪಾದನೆ ಮಾಡುತ್ತಿದ್ದು, ಅದರಲ್ಲಿ 2.5 ಲಕ್ಷ ಲೀಟರ್ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಕ್ಕೆ ರವಾನೆ ಮಾಡುತ್ತಿದೆ.
ಕ್ಷೀರಧಾರೆ ಯೋಜನೆಯಡಿ, ಪ್ರತೀ ಲೀಟರ್ ಹಾಲು 32 ರೂಪಾಯಿಗೆ ರೈತರಿಂದ ಖರೀದಿಸಲಾಗುತ್ತಿದ್ದು, ಸರ್ಕಾರದಿಂದ ಪ್ರತಿ ಲೀಟರ್‌ಗೂ 5 ರೂಪಾಯಿ ಪ್ರೋತ್ಸಾಹಧನ ನೀಡಲಾಗುತ್ತಿದೆ. ತಮ್ಮ ಸರ್ಕಾರ ಪ್ರೋತ್ಸಾಹಧನವನ್ನು 5 ರೂಪಾಯಿಯಿಂದ ಹೆಚ್ಚಿಸಿರುವುದು ರಾಜ್ಯದ ಹೈನುಗಾರಿಕೆ ಅಭಿವೃದ್ಧಿಗೆ ದೊಡ್ಡ ಪಾದೇಪು ಎಂದರು. ಈ ಯೋಜನೆಗಾಗಿ ಸರ್ಕಾರ ಪ್ರತಿ ದಿನ 5 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡುತ್ತಿದೆ ಎಂದು ಅವರು ಮಾಹಿತಿ ನೀಡಿದರು.