back to top
26.3 C
Bengaluru
Friday, July 18, 2025
HomeNewsVirat Kohli ಸ್ಥಾನಕ್ಕೆ Karun Nair ಹೆಸರು: Anil Kumble ಶಿಫಾರಸುಗೆ ಕನ್ನಡಿಗರ ಸಂತೋಷ!

Virat Kohli ಸ್ಥಾನಕ್ಕೆ Karun Nair ಹೆಸರು: Anil Kumble ಶಿಫಾರಸುಗೆ ಕನ್ನಡಿಗರ ಸಂತೋಷ!

- Advertisement -
- Advertisement -

ಇಂಗ್ಲೆಂಡ್ ಪ್ರವಾಸಕ್ಕೂ ಮೊದಲು ವಿರಾಟ್ ಕೊಹ್ಲಿ (Virat Kohli) ಮತ್ತು ರೋಹಿತ್ ಶರ್ಮಾ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಅವರ ನಿರ್ಗಮನದಿಂದಾಗಿ ಭಾರತೀಯ ತಂಡದಲ್ಲಿ ಎರಡು ಪ್ರಮುಖ ಸ್ಥಾನಗಳು ಖಾಲಿಯಾಗಿವೆ. ಯಶಸ್ವಿ ಜೈಸ್ವಾಲ್ ಜೊತೆಗೆ ಆರಂಭಿಕರಾಗಿ ಕೆ.ಎಲ್. ರಾಹುಲ್ ಅಥವಾ ಶುಭ್ಮನ್ ಗಿಲ್ ಆಡುವ ಸಾಧ್ಯತೆ ಇದೆ. ಆದರೆ ವಿವಾದ ಉಂಟಾಗಿದ್ದು ನಾಲ್ಕನೇ ಸ್ಥಾನವನ್ನು ಯಾರಿಗೆ ನೀಡಬೇಕು ಎಂಬುದರ ಕುರಿತು.

ಇದಕ್ಕೆ ಸಂಬಂಧಿಸಿದಂತೆ, ಭಾರತದ ಮಾಜಿ ಸ್ಪಿನ್ ದಂತಕಥೆ ಅನಿಲ್ ಕುಂಬ್ಳೆ ತಮ್ಮ ಸಲಹೆಯನ್ನು ನೀಡಿದ್ದಾರೆ. ಅವರು, ವಿರಾಟ್ ಕೊಹ್ಲಿ ಆಡುತ್ತಿದ್ದ ನಾಲ್ಕನೇ ಸ್ಥಾನಕ್ಕೆ ಕರುಣ್ ನಾಯರ್ (Karun Nair) ಯೋಗ್ಯ ಅಭ್ಯರ್ಥಿ ಎಂದು ಹೇಳಿದ್ದಾರೆ. ಕರುಣ್ ನಾಯರ್ ಈಗ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡುತ್ತಿದ್ದಾರೆ ಮತ್ತು ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ಕುಂಬ್ಳೆ ಅವರು, “ಕರೂಣ್ ಕೌಂಟಿ ಕ್ರಿಕೆಟ್ ಅನುಭವವಿದೆ. ಇಂಗ್ಲೆಂಡ್‌ನ ಪರಿಸ್ಥಿತಿಗಳಿಗೆ ಅವರು ಹೊಂದಿಕೊಳ್ಳಬಲ್ಲರು. ಅವರು ಈಗ 33 ವರ್ಷದವರಾಗಿದ್ದರೂ ಯುವ ಆಟಗಾರರಿಗೆ ಪ್ರೇರಣೆಯಾಗಿ ನಿಲ್ಲಬಹುದು. ಉತ್ತಮ ಆಟಗಾರರಿಗೆ ಅವಕಾಶ ಸಿಗದೇ ಹೋದರೆ ಅಸಮಾಧಾನ ಉಂಟಾಗಬಹುದು” ಎಂದು ಹೇಳಿದ್ದಾರೆ.

2024-25 ರಣಜಿ ಟ್ರೋಫಿಯಲ್ಲಿ ವಿದರ್ಭ ಪರ ಆಡಿದ ಕರುಣ್ ನಾಯರ್ ಟೂರ್ನಿಯಲ್ಲಿ 16 ಇನ್ನಿಂಗ್ಸ್‌ಗಳಲ್ಲಿ 53.93 ಸರಾಸರಿಯಲ್ಲಿ 863 ರನ್ ಗಳಿಸಿದರು. ಅವರು ನಾಲ್ಕು ಶತಕ ಮತ್ತು ಎರಡು ಅರ್ಧಶತಕ ಗಳಿಸಿದರು. ಭಾರತ ಪರ 6 ಟೆಸ್ಟ್ ಪಂದ್ಯಗಳಲ್ಲಿ ಪಾಲ್ಗೊಂಡಿರುವ ಅವರು 2016ರ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ತ್ರಿಶತಕ ಬಾರಿಸಿ ಎಲ್ಲರ ಗಮನ ಸೆಳೆದಿದ್ದರು.

ವಿರಾಟ್ ಕೊಹ್ಲಿ ನಿವೃತ್ತಿಯಿಂದ ಖಾಲಿಯಾದ ನಾಲ್ಕನೇ ಸ್ಥಾನಕ್ಕೆ ಅನಿಲ್ ಕುಂಬ್ಳೆ ಕರುಣ್ ನಾಯರ್ ಹೆಸರು ಶಿಫಾರಸು ಮಾಡಿದ್ದಾರೆ. ಇವರ ಆಯ್ಕೆ ಕನ್ನಡಿಗರಲ್ಲಿ ಖುಷಿಯ ನಗು ತಂದಿದೆ.

For Daily Updates WhatsApp ‘HI’ to 7406303366

- Advertisement -
Latest news
- Advertisement -
Related news
- Advertisement -

LEAVE A REPLY

Please enter your comment!
Please enter your name here
Captcha verification failed!
CAPTCHA user score failed. Please contact us!

You cannot copy content of this page