Hyderabad: ಬಾಲಿವುಡ್ ನಟಿ ಕತ್ರಿನಾ ಕೈಫ್ (Katrina Kaif) ಅವರನ್ನು ಮಾಲ್ಡೀವ್ಸ್ ಸರ್ಕಾರ ‘ವಿಸಿಟ್ ಮಾಲ್ಡೀವ್ಸ್’ನ (Visit Maldives) ಜಾಗತಿಕ ಬ್ರ್ಯಾಂಡ್ ರಾಯಭಾರಿಯಾಗಿ (global brand ambassador) ನೇಮಕ ಮಾಡಿದೆ. ಇದು ನೈಸರ್ಗಿಕ ಸೌಂದರ್ಯದಿಂದ ಕೂಡಿದ ಈ ದ್ವೀಪ ರಾಷ್ಟ್ರವನ್ನು ಜಾಗತಿಕ ಮಟ್ಟದಲ್ಲಿ ಪ್ರವಾಸಿಗರಿಗೆ ಪರಿಚಯಿಸುವ ಉದ್ದೇಶದಿಂದ ಕೈಗೊಂಡ ಹೆಜ್ಜೆಯಾಗಿದೆ.
ಕತ್ರಿನಾ ಕೈಫ್ ಅವರು ಭಾರತದ ಚಲನಚಿತ್ರರಂಗದಲ್ಲಿ ಜನಪ್ರಿಯ ತಾರೆ. ಅವರು ಹಲವಾರು ದೊಡ್ಡ ಬ್ರ್ಯಾಂಡ್ ಗಳ ಮುಖವಾಗಿದ್ದು, ಮಾಲ್ಡೀವ್ಸ್ ಈ ಅವಕಾಶ ನೀಡಿದದಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ.
ಅವರು ಪ್ರತಿಕ್ರಿಯೆ ನೀಡುತ್ತಾ, “ಮಾಲ್ಡೀವ್ಸ್ ಒಂದು ಐಷಾರಾಮಿ, ಶಾಂತವಾದ ಮತ್ತು ನೈಸರ್ಗಿಕವಾಗಿ ಮೋಹಕ ತಾಣ. ಇಂತಹ ಸ್ಥಳದ ಭಾಗವಾಗುವುದು ನನಗೆ ಗೌರವವಾಗಿದೆ. ವಿಶ್ವದ ಜನರಿಗೆ ಇಲ್ಲಿ ಸಿಗುವ ಅನುಭವಗಳನ್ನು ತಿಳಿಸಲು ನಾನು ನಿರೀಕ್ಷೆಯಲ್ಲಿದ್ದೇನೆ” ಎಂದು ಹೇಳಿದರು.
ಈ ನೇಮಕವು ‘ವಿಸಿಟ್ ಮಾಲ್ಡೀವ್ಸ್’ನ ಬೇಸಿಗೆ ಪ್ರಚಾರ ಯೋಜನೆಯ ಭಾಗವಾಗಿದ್ದು, ಪ್ರವಾಸಿಗರನ್ನು ಸಮುದ್ರದ ಜೀವಜಾಲ, ನೀಲಿ ಕಡಲ ತೀರಗಳು ಹಾಗೂ ಐಷಾರಾಮಿ ರೆಸಾರ್ಟ್‌ಗಳನ್ನು ಅನುಭವಿಸಲು ಪ್ರೋತ್ಸಾಹಿಸುತ್ತದೆ.
ಭಾರತ-ಮಾಲ್ಡೀವ್ಸ್ ನಡುವಿನ ಸಂಬಂಧ ಬಲವಾಗುತ್ತಿರುವ ಸಂದರ್ಭದಲ್ಲಿ ಈ ಘೋಷಣೆ ಮಹತ್ವ ಪಡೆದಿದೆ.
ಕತ್ರಿನಾ ಕೈಫ್ ಕೊನೆಯದಾಗಿ ‘ಮೆರ್ರಿ ಕ್ರಿಸ್ಮಸ್’ ಸಿನಿಮಾದಲ್ಲಿ ವಿಜಯ್ ಸೇತುಪತಿಯವರೊಂದಿಗೆ ನಟಿಸಿದ್ದರು. ಈಗ ಅವರು ಫರ್ಹಾನ್ ಅಖ್ತರ್ ನಿರ್ದೇಶಿಸುತ್ತಿರುವ ‘ಜೀ ಲೆ ಜರಾ’ನಲ್ಲಿ ಆಲಿಯಾ ಭಟ್ ಮತ್ತು ಪ್ರಿಯಾಂಕಾ ಚೋಪ್ರಾ ಜೊತೆ ಅಭಿನಯಿಸುತ್ತಿದ್ದಾರೆ.